nammatumakuru

    Subscribe to Updates

    Get the latest creative news from FooBar about art, design and business.

    What's Hot

    ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ

    November 5, 2025

    ಬೀದರ್‌ | ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು

    November 5, 2025

    ತಿಪ್ಪಯನದುರ್ಗ ಗ್ರಾಮದಲ್ಲಿ ಮಣ್ಣು ಹಗರಣ: ಪ್ರಶ್ನಿಸಿದಾಗ ಸ್ಥಳೀಯ ಶಾಸಕರ ಹೆಸರು ದುರ್ಬಳಕೆ!

    November 5, 2025
    Facebook Twitter Instagram
    ಟ್ರೆಂಡಿಂಗ್
    • ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ
    • ಬೀದರ್‌ | ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು
    • ತಿಪ್ಪಯನದುರ್ಗ ಗ್ರಾಮದಲ್ಲಿ ಮಣ್ಣು ಹಗರಣ: ಪ್ರಶ್ನಿಸಿದಾಗ ಸ್ಥಳೀಯ ಶಾಸಕರ ಹೆಸರು ದುರ್ಬಳಕೆ!
    • ಮೇಟಿಯವರ ನಿಧನ ನನಗೆ ವೈಯಕ್ತಿಕ ನಷ್ಟ: ಸಿಎಂ ಸಿದ್ದರಾಮಯ್ಯ
    • ಅಶ್ಲೀಲ ಸಂದೇಶ ಕಳಿಸಿ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
    • ಪರಿಶಿಷ್ಟ ಪಂಗಡಗಳನ್ನು ಕಾಂಗ್ರೆಸ್ ಕೇವಲ ಮತಬ್ಯಾಂಕ್ ಆಗಿ ಪರಿಗಣಿಸುತ್ತಿದೆ:  ಬಿ.ವೈ. ವಿಜಯೇಂದ್ರ ಆರೋಪ
    • ಮಾಜಿ ಸಚಿವ, ಶಾಸಕ ಹೆಚ್.ವೈ.ಮೇಟಿ ನಿಧನ
    • ಹುಲಿ ದಾಳಿಗೆ ಹೆದರಿ ಹೊರಬಾರದ ಜನ: ಅರಣ್ಯ ಇಲಾಖೆಯಿಂದ ಆಹಾರದ ಕಿಟ್ ವಿತರಣೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮೃತ್ಯು ಪತ್ರ ( will deed): ಉಯಿಲನ್ನು ಮಾಡುವಾಗ ಮುಖ್ಯವಾಗಿ ಪಾಲಿಸಬೇಕಾದ ಸಂಗತಿಗಳು: ಸಂಚಿಕೆ-02
    ಲೇಖನ December 16, 2021

    ಮೃತ್ಯು ಪತ್ರ ( will deed): ಉಯಿಲನ್ನು ಮಾಡುವಾಗ ಮುಖ್ಯವಾಗಿ ಪಾಲಿಸಬೇಕಾದ ಸಂಗತಿಗಳು: ಸಂಚಿಕೆ-02

    By adminDecember 16, 2021No Comments3 Mins Read
    uyilu pathra

    ಉಯಿಲು ಬರವಣಿಗೆಯಲ್ಲಿಯೇ ಇರತಕ್ಕದ್ದು: ಸಾಧ್ಯವಾದರೆ ಉಯಿಲು ಕರ್ತನು ಅದನ್ನು ತನ್ನ ಕೈಬರಹದಲ್ಲಿಯೇ ಬರೆಯುವುದು ಸೂಕ್ತ. ಉಯಿಲನ್ನು ಯಾವುದೇ ಭಾಷೆಯಲ್ಲಿ ಯಾವುದೇ ಶೈಲಿಯಲ್ಲಿ ಬರೆಯಬಹುದು. ಉಯಿಲನ್ನು ಛಾಪಾ ಕಾಗದದ ಮೇಲೆಯೇ ಬರೆಯಬೇಕೆಂದೇನಿಲ್ಲ. ಉತ್ತಮ ದರ್ಜೆಯ ಯಾವುದೇ ಕಾಗದದಲ್ಲಿಯೂ ಬರೆಯಬಹುದು.

    ಉಯಿಲಿನ ಪ್ರತಿಪುಟದ ಮೇಲೆ ಉಯಿಲು ಕರ್ತನು ತನ್ನ ಸಹಿಯನ್ನು ಮಾಡಬೇಕು ಅಥವಾ ಹೆಬ್ಬೆರಳಿನ ಗುರುತನ್ನು ಹಾಕಬೇಕು. ಉಯಿಲು ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ‘ಸಾಕ್ಷಿಗಳೆಂದು’ (Witness) ಉಯಿಲು ಕರ್ತನು ಅದಕ್ಕೆ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡು ಸಹಿ ಮಾಡಬೇಕು.
    ಬಿಕ್ಕಲಂ (Document Writer) ಬರಹಗಾರ ‘ಸಾಕ್ಷಿ’ ಆಗುವುದಿಲ್ಲ.(ಉಯಿಲು ದಾಖಲೆ ಪತ್ರ ಬರೆದ ವ್ಯಕ್ತಿ Deed writer)


    Provided by
    Provided by

    ಉಯಿಲಿನ ಮೂಲಕ ಯಾವುದೇ ವಿಧದ ಪ್ರಯೋಜನವನ್ನು ಪಡೆಯುವ ವ್ಯಕ್ತಿ ( Beneficiary Of the will ) ಉಯಿಲಿಗೆ ಸಾಕ್ಷಿ ಹಾಕಬಾರದು. ಹಾಗೊಂದು ವೇಳೆ ಸಾಕ್ಷಿ ಹಾಕಿದಲ್ಲಿ, ಸಾಕ್ಷಿ ಹಾಕಿದ್ದು ಅನೂರ್ಜಿತವಾಗುವುದಿಲ್ಲ. ಆದರೆ ಸಾಕ್ಷಿ ಹಾಕಿದ ವ್ಯಕ್ತಿ ಅಥವಾ ಆತನ/ಆಕೆಯ ಹೆಂಡತಿ ಅಥವಾ ಗಂಡ ಉಯಿಲು ಮೂಲಕ ಪಡೆದ ಪ್ರಯೋಜನ ರದ್ದಾಗುವ ಸಂಭವವಿರುತ್ತದೆ.
    ಉಯಿಲಿನಲ್ಲಿ ತೋರಿಸಿದ ಆಸ್ತಿಗಳ ಮತ್ತು ಅವುಗಳನ್ನು ಪಡೆಯುವ ವ್ಯಕ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಧತೆ ಅಥವಾ ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು.

    ಯಾವ ವಿಧದ ಆಸ್ತಿಗಳನ್ನು ಉಯಿಲನ್ನು ,(ಮೃತ್ಯು ಪತ್ರ) ಮಾಡಬಹುದು?

    ಉಯಿಲು ಕರ್ತನು ಯಾವ ಆಸ್ತಿಗಳಿಗೆ ಸಂಬಂಧಿಸಿದಂತೆ ಉಯಿಲು ಮಾಡಲು ಇಚ್ಚಿಸುತ್ತಾನೆಯೋ ಅಂತಹ ಆಸ್ತಿಗಳನ್ನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರಬೇಕು.
    ಒಬ್ಬ ಹಿಂದೂ ತನ್ನ ಸ್ವಯಾರ್ಜಿತ ವಾದ ಸಂಪೂರ್ಣ ಆಸ್ತಿಯನ್ನು ,ಒಬ್ಬ ಹಿಂದೂ ಮಹಿಳೆ ತನ್ನ ಜೀವಿತ ಸಮಯದಲ್ಲಿ ಯಾವ ಆಸ್ತಿಯನ್ನು ತನ್ನ ಇಚ್ಛಾನುಸಾರ ಪರಭಾರೆ (ವಿಲೇವಾರಿ) ಮಾಡುವ ಹಕ್ಕನ್ನು ಹೊಂದಿರುತ್ತಾಳೋ ಅಂತಹ ಆಸ್ತಿಯನ್ನು ,ಹಿಂದು ಅವಿಭಕ್ತ (ಏಕತ್ರ ,ಒಟ್ಟು ) ಕುಟುಂಬದ ಸದಸ್ಯನೊಬ್ಬನ ಕುಟುಂಬದ ಆಸ್ತಿ ವಿಭಾಗವಾದಲ್ಲಿ ತನ್ನ ಪಾಲಿಗೆ ಬರುವಷ್ಟು ಆಸ್ತಿಯನ್ನು ,ಒಬ್ಬ ಮಹಮ್ಮದೀಯನು ತನ್ನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ,ಉಯಿಲನ್ನು ಮಾಡುವ ಹಕ್ಕುಳ್ಳವರಾಗಿರುತ್ತಾರೆ. ಉಯಿಲು ಮಾಡಿದ್ದರಿಂದಾಗಿ ಉಯಿಲುಕರ್ತನು(ವಿಲ್ ಬರೆಯುವವನು) ತನ್ನ ಆಸ್ತಿಯ ಮೇಲಿನ ಹಕ್ಕನ್ನು ಎಳ್ಳಷ್ಟೂ ಕಳೆದುಕೊಳ್ಳುವುದಿಲ್ಲ.

    ಉಯಿಲು ನಿರ್ವಾಹಕ (EXECUTOR)

    ಉಯಿಲಿನಲ್ಲಿರುವ ನಿರ್ದೇಶನಗಳಂತೆ ಆಸ್ತಿಗಳ ವಿತರಣೆ ಅಥವಾ ವಿಲೇವಾರಿ ಮಾಡಲೆಂದು ಉಯಿಲು ಕರ್ತನು ತನ್ನ ಉಯಿಲಿನಲ್ಲಿ ಒಬ್ಬ (Executor) ಉಯಿಲು ನಿರ್ವಾಹಕನನ್ನು ಅಥವಾ ಒಬ್ಬನಿಗಿಂತ ಹೆಚ್ಚು ನಿರ್ವಾಹಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ.

    ಉಯಿಲನ್ನು ನೊಂದಣಿ (Registration) ಮಾಡಿಸುವುದು ಕಡ್ಡಾಯವಲ್ಲ. ಆದರೆ ನೊಂದಾಯಿತ ಉಯಿಲಿನ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಅಲ್ಲದೆ ಉಯಿಲಿನ ಮೂಲಪ್ರತಿ ಕಳೆದುಹೋದ ಸಂದರ್ಭದಲ್ಲಿ ಅದರ ದೃಡೀಕೃತ ನಕಲನ್ನು ಪಡೆದು ಜಾರಿಗೆ ತರಲು ಧನಾತ್ಮಕ ಅವಕಾಶವನ್ನು ಕಲ್ಪಿಸುತ್ತದೆ.

    ಉಯಿಲನ್ನು ಭದ್ರತೆ:

    ಉಯಿಲುಕರ್ತನು ತನ್ನ ಉಯಿಲನ್ನು ತನ್ನಲ್ಲಿಯೇ ಇರಿಸಿಕೊಳ್ಳಬಹುದು; ಅಥವಾ ತನ್ನ ಯಾವುದೇ ವಿಶ್ವಾಸಿಕರ ಹತ್ತಿರವಾಗಲೀ, ಅಥವಾ ಮೊಹರು ಮಾಡಿದ ಲಕೋಟೆಯೊಳಗೆ ಇಟ್ಟು ನೋಂದಣಾಧಿಕಾರಿ ಕಛೇರಿಯಲ್ಲಾಗಲಿ ಭದ್ರವಾಗಿಡಬಹುದು.

    ಉಯಿಲು ಕರ್ತನು ಮೃತಪಟ್ಟಲ್ಲಿ ಆತನಿಗೆ ಸಂಬಂಧಿಸಿದವರು ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಿ ಭದ್ರವಾಗಿಟ್ಟ ಉಯಿಲಿನ ಧೃಢೀಕೃತ ನಕಲನ್ನು ನೋಂದಣಾಧಿಕಾರಿಯವರಿಂದ ಪಡೆದುಕೊಳ್ಳಬಹುದು.ಭದ್ರವಾಗಿಟ್ಟ ಉಯಿಲನ್ನು ಅದರ ಕರ್ತನು ಬಯಸಿದಾಗ ಹಿಂದಕ್ಕೆ ಪಡೆಯಬಹುದು.

    ಉಯಿಲಿನ ತಿದ್ದುಪಡಿ:

    ಉಯಿಲನ್ನು ಮಾಡಿದ ನಂತರ ಉಯಿಲುಕರ್ತನು ತನ್ನ ಜೀವಿತದ ಅವಧಿಯಲ್ಲಿ ಈ ಉಯಿಲಿಗೆ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ತರುವ ಹಕ್ಕನ್ನು ಹೊಂದಿರುತ್ತಾನೆ. ಆತನು ಬೇರೆಯದೇ ಆದ ಮತ್ತೊಂದು ದಸ್ತಾವೇಜನ್ನು ಬರೆದು ತಿದ್ದುಪಡಿ ಮಾಡಬೇಕಾಗುತ್ತದೆ. ಈ ದಸ್ತಾವೇಜಿಗೆ ಉಯಿಲಿನ ಅನುಬಂಧ ಅಥವಾ ಕೊಡಿಸಿಲ್ ಎಂದು ಕರೆಯಲಾಗುತ್ತದೆ.ಉಯಿಲು ನೋಂದಾಯಿಸಿದ ಉಯಿಲಾಗಿದ್ದರೆ ಅದಕ್ಕೆ ತಿದ್ದುಪಡಿ ತರುವ ಅನುಬಂಧ ಅಥವಾ ಕೊಡಿಸಿಲ್ ಅನ್ನು ಸಹ ನೋಂದಣಿ ಮಾಡಬೇಕಾಗುತ್ತದೆ.ಮೂಲ ಉಯಿಲನ್ನು ಬರೆಯುವಾಗ ಪಾಲಿಸಬೇಕಾದದ್ದೆಲ್ಲವನ್ನು ಅನುಬಂಧವನ್ನು ಬರೆಯುವಾಗಲೂ ಸಹ ಪಾಲಿಸಬೇಕಾಗುತ್ತದೆ.

    ಮೃತ್ಯು ಪತ್ರವನ್ನು (ಉಯಿಲು) ರದ್ದುಗೊಳಿಸುವುದು ಹೇಗೆ?

    ಮೂಲ ಉಯಿಲು ನೋಂದಾಣಿ ಉಯಿಲಾಗಿದ್ದರೆ ಮತ್ತೊಂದು ಉಯಿಲನ್ನು ಬರೆದು ಅದರಲ್ಲಿ ಮೊದಲನೇ ಉಯಿಲನ್ನು ರದ್ದುಗೊಳಿಸಿರುವುದಾಗಿ ಘೋಷಿಸುವ ಮೂಲಕ ಮೂಲ ಉಯಿಲನ್ನು ರದ್ದುಗೊಳಿಸಬಹುದು.ನೋಂದಾಣಿ ಮಾಡಲಾದ ಉಯಿಲನ್ನು ರದ್ದಿತಿ ಪತ್ರವನ್ನು ಮಾಡಿಸಿ ಆ ಪತ್ರವನ್ನು ನೊಂದಾಯಿಸುವ ಮೂಲಕವೂ ರದ್ದುಗೊಳಿಸಬಹುದು.ರದ್ದು ಪಡಿಸಲಾದ ಉಯಿಲಿನ ಪುನರುಜ್ಜೀವನ ಒಮ್ಮೆ ರದ್ದುಪಡಿಸಿದ ಉಯಿಲನ್ನು ಪುನರುಜ್ಜೀವನಗೊಳಿಸಲಾಗದು. ಆದರೆ ಉಯಿಲಿನಲ್ಲಿಯ ಅಂಶಗಳನ್ನೇ ಅಳವಡಿಸಿ ಮತ್ತೊಂದು ಉಯಿಲನ್ನು ಹೊಸತಾಗಿ ಬರೆಯಬಹುದು.

    ಉಯಿಲು ಮತ್ತು ಪ್ರೋಬೆಟ್:

    ಒಂದು ಉಯಿಲು ನಿಸ್ಸಂದೇಹವಾಗಿ ಸಾಚಾ ಉಯಿಲು (Genuine Will) ಎಂದು ನ್ಯಾಯಾಲಯದಲ್ಲಿ ರುಜುವಾತುಪಡಿಸಿ ಪಡೆಯುವ ಉಯಿಲಿನ ಪ್ರಮಾಣಿತ ಪ್ರತಿಗೆ ಪ್ರೊಬೇಟ್ ಎನ್ನುತ್ತಾರೆ.

    ಪ್ರೋಬೆಟ್ ಅನ್ನು ನ್ಯಾಯಾಲಯವು ವಿವರವಾಗಿ ವಿಚಾರಣೆ ನಡೆಸಿದ ನಂತರವೇ ಕೊಡು ಮಾಡುವುದರಿಂದ ಉಯಿಲು ಸಂಶಯಾತೀತವಾಗುತ್ತದಲ್ಲದೆ ಅದರ ಸಿಂಧುತ್ವವನ್ನು ಯಾರೂ ಪ್ರಶ್ನಿಸುವಂತಿಲ್ಲ. ಉಯಿಲಿನ ಜಾರಿಗಾಗಿ ಅದರಲ್ಲಿ ನಿರ್ವಾಹಕನನ್ನು ನೇಮಿಸಿದಲ್ಲಿ ಆತನು ಪ್ರೋಬೆಟನ್ನು ಪಡೆಯಬೇಕಾಗುತ್ತದೆ.

    ಪ್ರೋಬೆಟ್ ಗಾಗಿ ಅರ್ಜಿ ಸಲ್ಲಿಸಲು ಯಾವುದೇ ಕಾಲ ಪರಿಮಿತಿ ಇರುವುದಿಲ್ಲ.

    -ಮರಿಗೌಡ ಬಾದರದಿನ್ನಿ
    ವಕೀಲರು & ಪತ್ರಕರ್ತರು

    admin
    • Website

    Related Posts

    ತುಮಕೂರಿನ ಕಲಾತ್ಮಕ ತಂಡದಿಂದ ಹೊಸ ಪ್ರಯೋಗ – “ಪ್ರೊಡಕ್ಷನ್ ನಂ 01” !

    November 2, 2025

    ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ

    November 1, 2025

    ಒಮ್ಮೆ ನಮ್ಮ ಮುಂದಿನ ಭವಿಷ್ಯ ನೋಡುವ ಬನ್ನಿ…?

    October 24, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಜಮೀನಿನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಲೋಕಾಯುಕ್ತ ಬಲೆಗೆ

    November 5, 2025

    ತುಮಕೂರು: ಜಮೀನಿನ ಖಾತೆ ಬದಲಾವಣೆಗೆ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕ್ಯಾತ್ಸಂದ್ರ ವೃತ್ತದ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ಎಂಬುವರು…

    ಬೀದರ್‌ | ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು

    November 5, 2025

    ತಿಪ್ಪಯನದುರ್ಗ ಗ್ರಾಮದಲ್ಲಿ ಮಣ್ಣು ಹಗರಣ: ಪ್ರಶ್ನಿಸಿದಾಗ ಸ್ಥಳೀಯ ಶಾಸಕರ ಹೆಸರು ದುರ್ಬಳಕೆ!

    November 5, 2025

    ಮೇಟಿಯವರ ನಿಧನ ನನಗೆ ವೈಯಕ್ತಿಕ ನಷ್ಟ: ಸಿಎಂ ಸಿದ್ದರಾಮಯ್ಯ

    November 4, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.