nammatumakuru

    Subscribe to Updates

    Get the latest creative news from FooBar about art, design and business.

    What's Hot

    ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ

    January 29, 2026

    ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ

    January 29, 2026

    ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್

    January 28, 2026
    Facebook Twitter Instagram
    ಟ್ರೆಂಡಿಂಗ್
    • ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ
    • ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ
    • ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್
    • ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿ ಕಣಕೂರ್ ಚಂದ್ರಶೇಖರ್ ಆಯ್ಕೆ
    • ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು
    • ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್; ಲೋಕಾಯುಕ್ತ ನೀಡಿದ್ದ ‘ಬಿ–ರಿಪೋರ್ಟ್’ ಅಂಗೀಕರಿಸಿದ ಕೋರ್ಟ್
    • ಪುಸ್ತಕಗಳು ಬದುಕಿನ ಶೈಲಿಯಾಗಬೇಕು: ಪ್ರಾಂಶುಪಾಲ ರಮಾನಂದ
    • ತುಮಕೂರಿನಲ್ಲಿ ‘ಸಂವಿಧಾನ ರಕ್ಷಣಾ ನೀಲಿ ಸೇನೆ’ ರಾಜ್ಯ ಮಟ್ಟದ ಸಂಘಟನೆ ಅದ್ದೂರಿ ಉದ್ಘಾಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ
    ಜಿಲ್ಲಾ ಸುದ್ದಿ January 29, 2026

    ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ

    By adminJanuary 29, 2026No Comments3 Mins Read
    aidso

    ದೊಡ್ಡಆಲದಮರ(ಹನುಮಂತನಗರ), ಜೋಡಿದೇವರಹಳ್ಳಿ, ನಾಗೇನಹಳ್ಳಿ, ಜೋಗಿಹಳ್ಳಿ, ಸೀಬಿಅಗ್ರಹಾರ, ಕುಂಟೇಗೌಡನಹಳ್ಳಿ, ನೆಲದಿಮ್ಮನಹಳ್ಳಿ, ಬಾಳಬಸವನಹಳ್ಳಿ, ಕಾಳೆನಳ್ಳಿ, ಅಮಲಗುಂದಿ, ಎಲ್. ಎಚ್. ಪಾಳ್ಯ, ಅಜ್ಜಯನಪಾಳ್ಯ, ಕಾಗೆನಿಂಗನಹಳ್ಳಿ, ಭೋವಿಪಾಳ್ಯ,  ಎಲದಬಾಗಿ, ಮತ್ತು ಜವನಹಳ್ಳಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಅಡಿಯಲ್ಲಿ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ, ಇಂದು ದೊಡ್ಡಆಲದಮರದಲ್ಲಿ ಬೃಹತ್ ಪೋಷಕರ ಪ್ರತಿಭಟನಾ ಸಮಾವೇಶ ನಡೆಯಿತು.

    ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ AIDSO ರಾಜ್ಯ ಉಪಾಧ್ಯಕ್ಷರಾದ  ಚಂದ್ರಕಲಾರವರು ಮಾತನಾಡುತ್ತಾ,  “ಅಕ್ಟೋಬರ್ 15 ಹಾಗೂ ಡಿಸೆಂಬರ್ 30 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ ೬೦೦೦ ಶಾಲೆಗಳು ಉಳಿದು ೪೦,೦೦೦ ಸರ್ಕೆಕಾರಿ ಶಾಲೆಗಳು ನಶಿಸುವವು.  ಅಂದರೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಮತ್ತು  ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ವೃತ್ತಿಪರ ಶಿಕ್ಷಣವನ್ನು ಆರಂಬಿಸಲಾಗುವುದು.   6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.


    Provided by
    Provided by

    AIDSO ರಾಜ್ಯ ಉಪಾಧ್ಯಕ್ಷರಾದ, ಅಪೂರ್ವ ರವರು ಮಾತನಾಡುತ್ತಾ,  “ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈಗಾಗಲೇ ಇಳಿಮುಖ ಪಡೆದು, ಜನರ ಆಕ್ರೋಶಕ್ಕೆ ಕಾರಣವಾಗಿದೆ” ಎಂದರು. ಇದರಿಂದಲೇ, 13 ಜನವರಿ 2026 ರಂದು, ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಕುರಿತು ಬಿಡುಗಡೆ ಮಾಡಿದ ಆದೇಶವು “ಬಿಇಓ ರವರ ಮೌಖಿಕ ಸೂಚನೆ ಮೇರಿಗೆ” ಎಂಬ ಶೀರ್ಷಿಕೆ ಅಡಿಯಲ್ಲಿ ಸುತ್ತಲಿನ 16 ಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಲುಪಿದೆ. ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಮಾನ್ಯ ಶಿಕ್ಷಣ ಸಚಿವ, ಮಧು ಬಂಗಾರಪ್ಪನವರು, ತನ್ನ ದೇಹದಲ್ಲಿ ಕನ್ನಡ ರಕ್ತ ಹರಿಯುವುದು ಎಂದು ಹೇಳುತ್ತಾರೆ. ಆದರೆ, ಹಿಂದಿನ ಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸುತ್ತಿದ್ದಾರೆ. “ಒಂದೇ ಒಂದೇ ಸರ್ಕಾರಿ ಶಾಲೆಯನ್ನು ಮುಚ್ಚಿದಿಲ್ಲ, ಕೆಪಿಎಸ್ ಮ್ಯಾಗ್ನೆಟ್ ಬ್ರಹ್ಮಸಂದ್ರ ಆದೇಶ ರದ್ದು ಮಾಡುತ್ತಿದ್ದೇವೆ” ಎಂದು ಬಹಿರಂಗಪಡಿಸಲಿ; ಇಲ್ಲವಾದಲ್ಲಿ, ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದು, ಎಂಬ ಹೆಚ್ಚರಿಕೆ ನೀಡಿದರು.

    ಮುಖ್ಯ ಭಾಷಣಕಾರರಾದ, ಎಐಎಂಎಸ್‌ ಎಸ್‌ ನ ಜಿಲ್ಲಾಧ್ಯಕ್ಷರಾದ ಕಲ್ಯಾಣಿ ರವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಈ ಹೋರಾಟವು ಸ್ವತಂತ್ರ ಹೋರಾಟವನ್ನು ನೆನಪಿಸುತ್ತಿದೆ. ಹೇಗೆ ಸ್ವತಂತ್ರ ಹೋರಾಟದಲ್ಲಿ ಮಕ್ಕಳಿಂದ  ಹಿಡಿದು ವೃದ್ದರವರೆಗೆ ಹೊರಾಡಿ  ಬ್ರೀಟಿಷರಿಂದ ಸ್ವತಂತ್ರ ಪಡೆದ ಇತಿಹಾಸ ನೆನಪನ್ನು ಈ  ಸಮಾವೇಶವು ತಂದುಕೊಡುತ್ತದೆ.  ಇಂದು ಸಹ ಅಂದಿನಂತೆಯೇ    ಸರ್ಕಾರಿ ಶಾಲೆ ಉಳಿವಿಗಾಗಿ ಐತಿಹಾಸಿಕ ಪ್ರತಿಭಟನಾ ಹೋರಾಟದಲ್ಲಿ ಭಾಗವಹಿಸಿ, ಈ ಸಮಾವೇಶವನ್ನು  ಶಸ್ವಿಗೊಳಿಸಿದ್ದೀರಾ ಎಂದು ಅಭಿನಂದಿಸಿದರು.  ಇಂದು ಆಡಳಿತಾರೂಢ ಎಲ್ಲಾ ಸರ್ಕಾರಗಳು “ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾಸಾರ್ವಜನಿಕ ಕೇತ್ರಗಳನ್ನು  ಖಾಸಗಿಕರಣ ಮಾಡಿ ಶಿಕ್ಷಣ, ಆರೋಗ್ಯ ಕೇವಲ ಶ್ರೀಮಂತ ವರ್ಗದವರ ಸ್ವತ್ತಾಗುತ್ತದೆ, ತುಳಿತಕ್ಕೊಳ್ಳಗಾದವರನ್ನು ಗುಲಾಮಗಿರಿಗೆ  ತಳ್ಳುತ್ತದೆ. ನಮಗೆ ಶಿಕ್ಷಣ ಸಿಕ್ಕರೆ ನಾವು ಈ ವ್ಯವಸ್ಥೆಯನ್ನು ಪ್ರಶ್ನಿಸುತ್ತೇವೆ; ಆದ್ದರಿಂದ ಜನಗಳನ್ನು ಅಂಧಕಾರಕ್ಕೆ ತಳ್ಳಬೇಕೆಂಬ ಯೋಚನೆ ಇದಾಗಿದೆ. ರೈತರು- ಕಾರ್ಮಿಕರು-ದಿನಗೂಲಿ ಕೆಲಸ ಮಾಡುವವರು ಬಹಳ ಕಷ್ಟದಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳ ಗತಿ ಏನು? ರೈತ-ಕಾರ್ಮಿಕರು ಒಂದಾಗಿ ನಮ್ಮ ಮಕ್ಕಳಿಗೋಸ್ಕರ ಹೋರಾಟ ಕಟ್ಟಬೇಕಾಗಿದೆ.” ಎಂದು ಕರೆ ನೀಡಿದರು.

    ಬಾಲಬಸವನಹಳ್ಳಿಯ ಗ್ರಾಮದ ರಮೇಶ್‌ ಸರ್ಕಾರ ಶಾಲೆಯನ್ನು   ಮುಚ್ಚಲು ಬಂದರೆ ನಮ್ಮೂರಿನ ಜನರೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತೇವೆ. ನಮ್ಮ ಜೀವ ಹೋದರು ನಮ್ಮೂರ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕನ್ನಡದ ಅಸ್ಮಿತೆಗೆ ಕನ್ನಡ ಶಾಲೆಗಳ ಉಳಿವು ಮುಖ್ಯ ಹೀಗಾಗಿ ಸರ್ಕಾರಿ ಶಾಲೆಯ ಉಳಿವಿಗಾಗಿ ನಾವೆಲ್ಲಾ ಮುಂದೆ ಇರುವುದಾಗಿ  ಜೋಡಿದೇವರಳ್ಳಿಯ ಶ್ರೀನಿವಾಸ್‌ ತಿಳಿಸಿದರು.

    ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್ಓ ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ವಹಿಸಿದ್ದರು. ವಿವಿಧ  ೧೩ ಹಳ್ಳಿಯ ಸಾರ್ವಜನಿಕ ಶಿಕ್ಷಣ ಸಮಿತಿಯ ಮುಖಂಡರು ಹಾಗೂ ಗ್ರಾಮಸ್ತರು, ಎಐಡಿಎಸ್‌ಓ ನ ಕಾರ್ಯಕರ್ತರಾದ ಭರತ್‌, ಸೈಯದ್ದ್.‌ ವೃಷಭ್‌, ಸಂದೀಪ್‌, ಹುಸೇನಪ್ಪ, ಭೂತೇಶ್‌ ಉಪಸ್ಥಿತರಿದ್ದರು.

    ಸರ್ಕಾರವು ಯೋಜನೆಯನ್ನು ಹಿಂಪಡೆದು ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ಈ ಹೋರಾಟ ಮುಂದುವರೆಯುತ್ತದೆ. ಹಾಗೂ ಜಿಲ್ಲೆಯ ಮೂಲೆ ಮೂಲೆಗೂ ಪ್ರತಿರೋಧ ಚಳುವಳಿಯು  ಹರಡುತ್ತದೆ. ಎಂಬ ದೃಢ ಸಂಕಲ್ಪದೊಂದಿಗೆ ಸಮಾವೇಶವು ಮುಕ್ತಾಯವಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಪುಸ್ತಕಗಳು ಬದುಕಿನ ಶೈಲಿಯಾಗಬೇಕು: ಪ್ರಾಂಶುಪಾಲ ರಮಾನಂದ

    January 28, 2026

    ಬಿ.ಮಟಕೆರೆ ಪಬ್ಲಿಕ್ ಶಾಲೆ ಸಿಡಿಸಿ ಅಧ್ಯಕ್ಷರ ಆಯ್ಕೆ ವಿವಾದ: ಶಾಸಕರ ವಿರುದ್ಧ ಪೋಷಕರ ಆಕ್ರೋಶ

    January 28, 2026

    ಬೀದರ್: ಹಂದಿಕೇರಾ ಸರ್ಕಾರಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆ

    January 27, 2026

    Leave A Reply Cancel Reply

    Our Picks

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026

    ಆರ್ಡರ್ ಮಾಡಿದ್ದು ಕಸ್ಟಮರ್.. ಆದ್ರೆ ಹೊಟ್ಟೆ ತುಂಬಿದ್ದು ಡೆಲಿವರಿ ಬಾಯ್ ಗೆ! ರಾತ್ರಿ 2:30ಕ್ಕೆ ನಡೆದ ‘ಬಿರಿಯಾನಿ’ ಪುರಾಣ

    January 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಲು ಬಿಡುವುದಿಲ್ಲ: ಪೋಷಕರಿಂದ ಬೃಹತ್ ಪ್ರತಿಭಟನಾ ಸಮಾವೇಶ

    January 29, 2026

    ದೊಡ್ಡಆಲದಮರ(ಹನುಮಂತನಗರ), ಜೋಡಿದೇವರಹಳ್ಳಿ, ನಾಗೇನಹಳ್ಳಿ, ಜೋಗಿಹಳ್ಳಿ, ಸೀಬಿಅಗ್ರಹಾರ, ಕುಂಟೇಗೌಡನಹಳ್ಳಿ, ನೆಲದಿಮ್ಮನಹಳ್ಳಿ, ಬಾಳಬಸವನಹಳ್ಳಿ, ಕಾಳೆನಳ್ಳಿ, ಅಮಲಗುಂದಿ, ಎಲ್. ಎಚ್. ಪಾಳ್ಯ, ಅಜ್ಜಯನಪಾಳ್ಯ, ಕಾಗೆನಿಂಗನಹಳ್ಳಿ,…

    ಗುಬ್ಬಿ:  ಜನವರಿ 30ರಂದು ತ್ಯಾಗಟೂರು ಗ್ರಾಮದ ಸರ್ಕಾರಿ ಶಾಲೆ ಶತಮಾನೋತ್ಸವ

    January 29, 2026

    ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ತಪ್ಪಲಿದೆ ಅನಾಹುತ: ಪಿಎಸ್‌ ಐ ತೀರ್ಥೇಶ್

    January 28, 2026

    ರೈತ ಸಂಘ, ಹಸಿರು ಸೇನೆ ತಾಲೂಕು ಅಧ್ಯಕ್ಷರಾಗಿ ಕಣಕೂರ್ ಚಂದ್ರಶೇಖರ್ ಆಯ್ಕೆ

    January 28, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.