ರಾಮನಗರ: ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಚನ್ನಪಟ್ಟಣ ನಗರ ವ್ಯಾಪ್ತಿಯ ಹಲವಾರು ವಾರ್ಡ್ ಗಳಿಗೆ ಭೇಟಿ ನೀಡಿ ಮತಯಾಚಿಸಿದ ಅವರು, ನಿರುದ್ಯೋಗ ಸಮಸ್ಯೆಯಿಂದ ಸಾಕಷ್ಟು ಯುವಕರು ವಂಚಿತರಾಗಿದ್ದಾರೆ. ಕುಮಾರಣ್ಣನ ಪರವಾಗಿ ಯುವ ಸಮುದಾಯದ ಒಬ್ಬ ಯುವಕನಾಗಿ ನಿಮಗೆ ಮಾತು ಕೊಡುತ್ತಿದ್ದೇನೆ, ಯುವಕರ ಧ್ವನಿಯಾಗಿ ನಾನು ಕೆಲಸ ಮಾಡುತೇನೆ, ಜಿಲ್ಲೆಯಲ್ಲಿ ಕನಿಷ್ಠ 25 ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವಂತ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಕುಮಾರಣ್ಣ ರೈತರ ಪರವಾಗಿ ಮಾತು ಕೊಟ್ಟು, ಕೊಟ್ಟ ಮಾತಿನಂತೆ ರೈತರ ಸಾಲ ಮನ್ನ ಮಾಡಿದ್ದರೋ ಅದೇ ರೀತಿ ರಾಮನಗರ ಮತ್ತು ಚನ್ನಪಟ್ಟಣ ಜನತೆಗೆ ಉದ್ಯೋಗ ಕಲ್ಪಿಸಿಕೊಡಿಸುತ್ತೇನೆ ಎಂಬ ಸವಾಲು ಸ್ಪೀಕರ ಮಾಡಿದ್ದಾರೆ ಕುಮಾರಣ್ಣ ಅವರು ಎಂದರು.
ಕುಮಾರಣ್ಣ ಈಗಾಗಲೇ ದೆಹಲಿಯಲ್ಲಿ ನಾಲ್ಕುವರೆ ತಿಂಗಳಿಂದ ಸರಣಿ ಸಭೆ ಮಾಡುತ್ತಿದ್ದಾರೆ. ಅನೇಕ ಬೃಹತ್ ಕೈಗಾರಿಕಾ ಕಾರ್ಖಾನೆಯನ್ನ ರಾಮನಗರ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಇವತ್ತು ಎಲ್ಲಾ ತಾಯಂದಿರಿಗೂ ಹಾಗೂ ಯುವಕರಿಗೆ ಬೇಕಾಗಿರುವುದು ಸ್ವಾಭಿಮಾನದ ಬದುಕು, ಸ್ವಂತ ಕಾಲಿನ ಮೇಲೆ ನಿಂತು ದುಡಿಯುವಂತ ಉದ್ಯೋಗ ಬೇಕಾಗಿದೆ. ಇವೆಲ್ಲಾವನ್ನು ಕುಮಾರಣ್ಣ ಅವರ ಜತೆಯಲ್ಲಿ ನಿಂತು ಮಾಡಿಸಿಕೊಡುತ್ತೇನೆ. ನಿಮ್ಮನ್ನ ನಂಬಿ ಬಂದಿದ್ದೇನೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q