ತಿಪಟೂರು: ತಾಲೂಕಿನ ಶಕ್ತಿ ದೇವತೆಯಾದ 33 ಗ್ರಾಮಗಳ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯಕ್ಕೆ ವಾಮಾಚಾರ ಮಾಡಿ ಬಾಗಿಲಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಟ್ನ ಗ್ರಾಮದ ಹೊರವಲಯದ ತೋಪಿನಲ್ಲಿ ಮೂಲಸ್ಥಾನ ಶ್ರೀ ಕೆಂಪಮ್ಮ ದೇವಿ ದೇವಾಲಯವಿದೆ. ಸಂಜೆ ಪೂಜೆ ನಂತರ ರಾತ್ರಿ ವೇಳೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ವಾಮಾಚಾರ ಮಾಡಿದ್ದಾರೆ. ನಂತರದಲ್ಲಿ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ್ದು ಅದು ಸಂಪೂರ್ಣ ಬಾಗಿಲಿಗೆ ಬೆಂಕಿ ಹೊತ್ತಿಕೊಂಡಿದೆ. ವಾಮಾಚಾರ ಮಾಡಿ ದೇವಾಲಯಕ್ಕೆ ದಿಗ್ಬಂದನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಿನ ಜಾವ ಪೂಜಾ ಕೈಂಕರ್ಯಗಳನ್ನು ನಡೆಸಲು, ದೇವಾಲಯವನ್ನು ಸ್ವಚ್ಛತೆ ಮಾಡಲು ಬಂದಾಗ ಗ್ರಾಮಸ್ಥರು ನೋಡಿ ಬೆಂಕಿ ನಂದಿಸಿದ್ದಾರೆ. ಬಾಗಿಲು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ, ಹಳೇ ಸೀರೆ, ವಾಮಾಚಾರ ವಸ್ತುಗಳು ಸುಟ್ಟು ಸ್ಥಿತಿಯಲ್ಲಿ ದೊರೆತಿದ್ದು, ಸ್ಥಳೀಯ ಗ್ರಾಮಸ್ಥರು, ಭಕ್ತರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4