nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವೆಂಬರ್ ತಿಂಗಳಲ್ಲಿ ‘ಸರ್ದಾರ್ 150’ ಏಕತಾ ಜಾಥಾ

    October 31, 2025

    ಹುಳಿಯಾರು: ಆಹೋರಾತ್ರಿ ಧರಣಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ

    October 31, 2025

    ಕೊರಟಗೆರೆ |ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ

    October 31, 2025
    Facebook Twitter Instagram
    ಟ್ರೆಂಡಿಂಗ್
    • ನವೆಂಬರ್ ತಿಂಗಳಲ್ಲಿ ‘ಸರ್ದಾರ್ 150’ ಏಕತಾ ಜಾಥಾ
    • ಹುಳಿಯಾರು: ಆಹೋರಾತ್ರಿ ಧರಣಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ
    • ಕೊರಟಗೆರೆ |ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ
    • ಜಮೀನು ಕಿತ್ತುಕೊಳ್ಳಲು ಕಿರುಕುಳ ಆರೋಪ: ತಹಶೀಲ್ದಾರ್ ಗೆ ದೂರು ಸಲ್ಲಿಸಿದ ಮಹಿಳೆ
    • ಡಾನ್ ಬಾಸ್ಕೋ ಐಟಿಐ ಕಾಲೇಜಿನಲ್ಲಿ ಟೈಲರಿಂಗ್ ತರಗತಿಯ ಉದ್ಘಾಟನೆ
    • ಬೀದರ್ | ಗ್ರಾ.ಪಂ. ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ: ಪಿಡಿಒ ಅಮಾನತು
    • ಚಳಿಗಾಲದ ರೇಸ್ ಗಾಗಿ ಬೆಂಗಳೂರು ಟರ್ಫ್ ಕ್ಲಬ್ ಸಿದ್ಧತೆ: ಕುಣಿಗಲ್ ಗೆ ಸ್ಥಳಾಂತರ?
    • ಕೈಕೊಟ್ಟ ಮಳೆ: ಶೇಂಗಾ ಇಳುವರಿ ಕುಂಠಿತ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಮೀನು ಕಿತ್ತುಕೊಳ್ಳಲು ಕಿರುಕುಳ ಆರೋಪ: ತಹಶೀಲ್ದಾರ್ ಗೆ ದೂರು ಸಲ್ಲಿಸಿದ ಮಹಿಳೆ
    ಜಿಲ್ಲಾ ಸುದ್ದಿ October 31, 2025

    ಜಮೀನು ಕಿತ್ತುಕೊಳ್ಳಲು ಕಿರುಕುಳ ಆರೋಪ: ತಹಶೀಲ್ದಾರ್ ಗೆ ದೂರು ಸಲ್ಲಿಸಿದ ಮಹಿಳೆ

    By adminOctober 31, 2025No Comments3 Mins Read
    sargur

    ಸರಗೂರು:  ತಾಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಕಾಡು ಬೇಗೂರು ಗ್ರಾಮದಲ್ಲಿರುವ ದಲಿತರ ಸ್ವಾಧೀನದಲ್ಲಿರುವ ಜಮೀನನ್ನು ಕಾಡು ಬೇಗೂರು ಗ್ರಾಮದ ದಾಸಪ್ಪ ಮತ್ತು ಮಕ್ಕಳು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ, ತೊಂದರೆ ನೀಡುತ್ತಿದ್ದಾರೆ ಎಂದು ಅದೇ ಗ್ರಾಮದ ನೊಂದ ಕುಟುಂಬದವರು ಗುರುವಾರ  ಹುಣಸೂರು ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಯದುಗೀರಿಶ್ ಅವರಿಗೆ ದೂರು ಸಲ್ಲಿಸಿದರು.

    ನಂತರ ಮಾತನಾಡಿದ ದಲಿತ ಮಹಿಳೆ ಲತಾ, ಗ್ರಾಮದ ನನ್ನ ದೊಡ್ಡಪ್ಪನ ಹೆಸರಿನಲ್ಲಿ ಪುಟ್ಟಕಾಂತಯ್ಯ ಬಿನ್ ಲೇಟ್ ದಾಸಯ್ಯರವರಿಗೆ ದಿನಾಂಕ 02—11–1983 ರಂದು ಸರ್ಕಾರವು ಕಾಡುಬೇಗೂರು ಗ್ರಾಮದ ಸರ್ವೆ ನಂಬರು 6ರ ವಿಸ್ತೀರ್ಣ 4 ಎಕರೆ ಜಮೀನನ್ನು ಎಲ್‌ ಎನ್‌ ಡಿ.4/134/1971-72ರಂದು ಎಲ್‌ ಎನ್‌ ಡಿ.(ಎಸ್.ಇ.)ನಂ.12/12/1983–84ರಂದು ಸರ್ಕಾರವು ದರಖಾಸ್ತು ಮೂಲಕ ಉಚಿತವಾಗಿ ಸಾಗುವಳಿ ಚೀಟಿ ನೀಡಿ ಅದೇ ದಿನವೇ ಸ್ವಾಧೀನಾನುಭವ ನೀಡಿರುತ್ತಾರೆ.


    Provided by
    Provided by

    ನಾನು ಗ್ರಾಮೀಣ ಪ್ರದೇಶದ ಮುಗ್ಧ ಮಹಿಳೆಯಾಗಿರುತ್ತೇನೆ  ಹಾಗೂ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವಳಾಗಿರುತ್ತೇನೆ ಹಾಗೂ ಅವಿದ್ಯಾವಂತ ಮುಗ್ಧ ಮಹಿಳೆಯಾಗಿರುತ್ತೇನೆ.  ಹಾಗೂ ಹಲವಾರು ಷರತ್ತುಗಳನ್ನು ನೀಡಿ ಮಂಜೂರು ಮಾಡಿರುತ್ತದೆ. ಮಂಜೂರು ಮಾಡುವ ಸಂದರ್ಭದಲ್ಲಿ 15 ವರ್ಷಗಳ ಕಾಲ ಬೇರೆ ಯಾರಿಗೂ ಯಾವುದೇ ರೀತಯಾದ ಪರಭಾರೆಯನ್ನು ಬೇರೆ ಯಾರಿಗೂ ಪರಭಾರೆ ಮಾಡಬಾರದು ಒಂದು ವೇಳೆ ಪರಭಾರೆ ಮಾಡಿದ್ದರೆ ಸರ್ಕಾರದ ಪೂರ್ವಾನುಮತಿ ಇಲ್ಲದೇ ಬೇರೆ ಯಾರಿಗೂ ಯಾವುದೇ ಕ್ರಯ, ಭೋಗ್ಯ, ಆಧಾರ. ವಿಲ್ ಇನ್ನಿತರ ಯಾವುದೇ ರೀತಿಯಾದ ಪರಭಾರೆ ಮಾಡಿದ್ದಲ್ಲಿ ಸರ್ಕಾರದ ಸುಪರ್ಧಿಗೆ ಪಡೆಯುತ್ತೇವೆ ಎಂದು ಎಂಬ ಷರತ್ತನ್ನು ವಿಧಿಸಿರುತ್ತದೆ.

    ಸರ್ಕಾರವು ಮಂಜೂರು ಮಾಡಿದ ದಿನಾಂಕದಿಂದ ನಮ್ಮ ಕುಟುಂಬದ ತಂದೆಯಾದ ಹನುಮಂತಯ್ಯ ಹಾಗೂ ನನ್ನ ತಾಯಿ ತಾಯಿ, ತಾತಂದಿರು ಮೇಲ್ಕಂಡ ಜಮೀನಿನಲ್ಲಿ ನಿರ್ಬಾಧಿತ ಸ್ವಾಧೀನಾನುಭವದಲ್ಲಿರುತ್ತಾರೆ ಹಾಗೂ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಜಮೀನನ್ನು ಬಿಟ್ಟರೆ ಬೇರೆ ಯಾವುದೇ ಜಮೀನು ಇರುವುದಿಲ್ಲ. ಮೂಲ ಮಂಜೂರಿದಾರರು ಹಾಗೂ ಇವರ ಕಾನೂನುಬದ್ಧ ವಾರಸುದಾರರೇ ಸ್ವಾಧೀನಾನುಭವದಲ್ಲಿರುತ್ತೇನೆ. ಪ್ರಸ್ತುತ ಆರ್.ಟಿ.ಸಿ. ಯು ಮೂಲ ಮಂಜೂರಿದಾರರ ಹೆಸರಿನಲ್ಲಿಯೇ ಚಾಲ್ತಿಯಲ್ಲಿರುತ್ತದೆ. ಮೂಲ ಮಂಜೂರಿದಾರರು ಮರಣ

    ಹೊಂದಿರುತ್ತಾರೆ ಹಾಗೂ ಒಟ್ಟು ಕುಟುಂಬದ ಸ್ವತ್ತಾಗಿರುವುದರಿಂದ ನಾವುಗಳು ಸ್ವಾಧೀನಾನುಭವದಲ್ಲಿದ್ದುಕೊಂಡು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದರು.

    ವಾಸ್ತವಾಂಶ ಹೀಗಿರುವಾಗ ನಮ್ಮ ಗ್ರಾಮದ ದಾಸಪ್ಪ ಬಿನ್ ಗೋವಿಂದಪ್ಪನವರು ಪ್ರಿನ್ಸಿಪಲ್ ಸಿವಿಲ್ ಜ್ ನ್ಯಾಯಾಲಯ ಹೆಚ್.ಡಿ.ಕೋಟೆ ಇಲ್ಲಿ ಅಸಲು ದಾವೆ ಸಂಖ್ಯೆ 213/2024 ದಿನಾಂಕ 22–09–2025 ರ ಆದೇಶದ ಮೇರೆ ಮೇಲ್ಕಂಡ ಸರ್ವೆ ನಂಬರು ಜಮೀನಿನ ಮೇಲೆ ಟ್ರಾಕ್ಟರ್ ಮತ್ತು ಕೆಲವೊಂದು ಗೂಂಡಾಗಳನ್ನು  ಕಟ್ಟಿಕೊಂಡು ನಾವುಗಳು ವ್ಯವಸಾಯ ಮಾಡುತ್ತಿರುವ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿ ನಾವುಗಳು ಸ್ವಾಧೀನಾನುಭವದಲ್ಲಿರುವ ಜಮೀನನ್ನು ಉಳುಮೆ ಮಾಡಲು ಮುಂದಾಗಿ ನನಗೆ ಹಾಗೂ ನನ್ನ ತಾಯಿ ಹಾಗೂ ಸಂಬಂಧಪಟ್ಟವರಿಗೆ ದಾಸಪ್ಪ ಅವರ ಕಡೆಯವರು ವಕೀಲರು ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿರುತ್ತಾರೆ. ಸರಗೂರು ಠಾಣೆಯ ಸಬ್‌ ಇನ್ಸ್‌ ಪೆಕ್ಟರ್‌ ರವರು ಅವರ ವಾಹನದ ಮೇಲೆ ಠಾಣೆಗೆ ಕರೆದುಕೊಂಡು ಬಂದಿರುತ್ತೀರಿ. ಇದಕ್ಕೆ ಸಂಬಂಧಪಟ್ಟ ಆಡಿಯೋ ವಿಡಿಯೋ, ಫೋಟೋ ಪ್ರತಿಗಳು ಇರುತ್ತವೆ. ಮೇಲ್ಕಂಡ ವ್ಯಕ್ತಿ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಪರಿಶಿಷ್ಟ ಜಾತಿಗೆ ಸೇರಿದ ಪುಟ್ಟಕಾಂತಯ್ಯರವರಿಗೆ ಮಂಜೂರಾದ ಸ್ವತ್ತಿನ ಮೇಲೆ ಅಕ್ರಮವಾಗಿ ಗೂಂಡಾಗಳನ್ನು ಕಟ್ಟಿಕೊಂಡು ಟ್ರಾಕ್ಟರ್ ಮೂಲಕ ನಮ್ಮ ಸ್ವತ್ತಿನ ಮೇಲೆ ಅಕ್ರಮ ಪ್ರವೇಶ ಮಾಡಿ ಉಳುಮೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಇಟ್ಟುಕೊಂಡಿರುತ್ತೇವೆ.  ಸರ್ಕಾರವು ಯಾವುದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸ್ವತ್ತುಗಳ ಪರಭಾರೆ ನಿಷೇಧ ಅಧಿನಿಯಮ 1978 ಕಲಂ 4(2)ರ ರೀತ್ಯಾ ಪರಿಶಿಷ್ಟ ಜಾತಿಯವರಿಗೆ ದರಖಾಸ್ತು ಮೂಲಕ ಮಂಜೂರಾದ ಸ್ವತ್ತುಗಳ ಮೇಲೆ ಬೇರೆ ಯಾವುದೇ ವ್ಯಕ್ತಿಗಳಾಗಲೀ ಅಕ್ರಮವಾಗಿ ಪ್ರವೇಶ ಮಾಡಿದ್ದರೆ ಅಥವಾ ಅಕ್ರಮವಾಗಿ ಸ್ವಾಧೀನಾನುಭವದಲ್ಲಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯಿದೆಯನ್ವಯ ಕಾನೂನುಬಾಹಿರವಾಗಿರುತ್ತದೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಮಂಜೂರಾದ ಸ್ವತ್ತುಗಳ ಮೇಲೆ ಪಿ.ಟಿ.ಸಿ.ಎಲ್. ಕಾಯಿದೆಯನ್ವಯ ತೀರ್ಮಾನ ತೆಗೆದುಕೊಳ್ಳುವ ಸಿವಿಲ್ ನ್ಯಾಯಾಲಯಕ್ಕೆ ಯಾವುದೇ ಅಧಿಕಾರವಿರುವುದಿಲ್ಲ. ಮೇಲ್ಕಂಡ ಸ್ವತ್ತಿನ ಮೇಲೆ ಏನಾದರೂ ವಿಚಾರಣೆ ಮಾಡಿ ಕ್ರಮವಹಿಸಬೇಕಾದರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಉಪವಿಭಾಗಾಧಿಕಾರಿಗಳಿಗೆ ಪಾತ್ರ ಅಧಿಕಾರವಿರುತ್ತದೆ. ನನ್ನ ಹಾಗೂ ನನ್ನ ಅಕ್ಕತಂಗಿಯರನ್ನು ಸಿವಿಲ್ ನ್ಯಾಯಾಲಯದಲ್ಲಿ ಅವಶ್ಯಕವಾಗಿ ಪಾರ್ಟಿದಾರರನ್ನಾಗಿ ಮಾಡಿ ಘನ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಪಿ.ಟಿ.ಸಿಲ್. ಕಾಯಿದೆಗೆ ಒಳಪಡುವ ವಿಚಾರವನ್ನು ಸಿವಿಲ್ ನ್ಯಾಯಾಲಯಕ್ಕೆ ಗಮನಕ್ಕೆ ತರದೇ ತಪ್ಪು ಮಾಹಿತಿ ನೀಡಿ ಸಿವಿಲ್ ನ್ಯಾಯಾಲಯದಲ್ಲಿ ಆದೇಶ ಮಾಡಿಸಿಕೊಂಡಿದ್ದಾರೆ. ಈ ವಿಚಾರವು ನಮ್ಮಗಮನಕ್ಕೆ ಬಂದಿದ್ದು, ತಕ್ಷಣವೇ ನ್ಯಾಯಾಲಯದ ಆದೇಶದ ದೃಢೀಕೃತ ನಕಲನ್ನು ಪಡೆದುಕೊಂಡು ಈ ಮನವಿಯನ್ನು ಸಲ್ಲಿಸುತ್ತಿದ್ದೇನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ನನ್ನ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಸ್ವತ್ತಿನ ಸರ್ವೆ ನಂಬರ್ ಹಾಗೂ ಚೆಕ್ಕುಬಂದಿ ಬೇರೆ ಬೇರೆಯಾಗಿರುತ್ತದೆ. ನನ್ನ  ಜಮೀನಿಗೆ ಸಂಬಂಧವೇ ಇರುವುದಿಲ್ಲ ಹಾಗೂ ಪುಟ್ಟಕಾಂತಯ್ಯರವರು ಯಾವುದೇ ಕ್ರಯ ಇತರ ವಾರಸುದಾರರಾಗಲೀ ಮಾಡಿರುವುದಿಲ್ಲ. ಆದರೆ ಮೇಲ್ಕಂಡ ವ್ಯಕ್ತಿ ಪೊಲೀಸ್‌ನವರು ಕಂದಾಯಾಧಿಕಾರಿಗಳೊಂದಿಗೆ ಷಾಮೀಲಾಗಿ ನನ್ನ ಸ್ವಾಧೀನಾನುಭವದಲ್ಲಿರುವ ಸ್ವತ್ತಿನ ಮೇಲೆ ಮತ್ತೆ ಅಕ್ರಮವಾಗಿ ಪ್ರವೇಶ ಮಾಡಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವೊಂದು ಸ್ವತ್ತುಗಳ ಪರಭಾರೆ ನಿಷೇಧ ಕಾಯಿದೆ 1978 ಕಲಂ 4(2)ರ ರೀತ್ಯಾ ಮಾನ್ಯ ಉಪವಿಭಾಗಾಧಿಕಾರಿಗಳಾದ ತಾವುಗಳು ಪ್ರಕರಣ ದಾಖಲು ಮಾಡಿಕೊಂಡು ನಾನು ಈಗಾಗಲೇ ಸಿವಿಲ್ ರೈಟ್ಸ್ ಠಾಣೆಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಸಂಬಂಧಪಟ್ಟವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ರೀತ್ಯಾ ಕ್ರಮ ವಹಿಸಿ ಎಂದು ದೂರು ನೀಡಿರುತ್ತೇನೆ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸಿನವರು ಮೊದಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಗಳ ಜನರಿಗೆ ಮಂಜೂರಾದ ಸ್ವತ್ತುಗಳನ್ನು ರಕ್ಷಣೆ ಮಾಡುವುದು ಮೊದಲನೇ ಕರ್ತವ್ಯವಾಗಿರುತ್ತದೆ. ಆದರೆ ನಮ್ಮಗೆ ರಕ್ಷಣೆ ಮಾಡದೇ ನಮ್ಮ ಮೇಲೆ ದೌರ್ಜನ್ಯ ಎಸಗಿರುತ್ತಾರೆ.  ಆದುದರಿಂದ ತಾವುಗಳು ಸಂಬಂಧಪಟ್ಟಂತ ಕಂದಾಯ ಅಧಿಕಾರಿಗಳಿಂದ ದಾಖಲೆಗಳನ್ನು ತರಿಸಿಕೊಂಡು ನನಗೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಈ ಸಂದರ್ಭದಲ್ಲಿ ವಕೀಲ ಶಿವಕುಮಾರ್, ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು,ಕುರ್ಣೇಗಾಲ ಕೃಷ್ಣ, ಸತೀಶ್, ಇನ್ನೂ ಇತ್ತರರು ಇದ್ದರು.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಡಾನ್ ಬಾಸ್ಕೋ ಐಟಿಐ ಕಾಲೇಜಿನಲ್ಲಿ ಟೈಲರಿಂಗ್ ತರಗತಿಯ ಉದ್ಘಾಟನೆ

    October 30, 2025

    ಬೀದರ್ | ಗ್ರಾ.ಪಂ. ಅಧ್ಯಕ್ಷರ ಅಧಿಕಾರ ಚಲಾವಣೆ ಆರೋಪ: ಪಿಡಿಒ ಅಮಾನತು

    October 30, 2025

    ಕಾಡು ಪ್ರಾಣಿಗಳಿಂದ ಬೆಳೆ ಮತ್ತು ಪ್ರಾಣ ಹಾನಿ: ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ

    October 29, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನವೆಂಬರ್ ತಿಂಗಳಲ್ಲಿ ‘ಸರ್ದಾರ್ 150’ ಏಕತಾ ಜಾಥಾ

    October 31, 2025

    ತುಮಕೂರು: ನವೆಂಬರ್ ತಿಂಗಳಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ 150ನೇ ಜಯಂತಿ ಪ್ರಯುಕ್ತ ‘ಸರ್ದಾರ್ 150’ ಏಕತಾ ಜಾಥಾ ಕಾರ್ಯಕ್ರಮವನ್ನು…

    ಹುಳಿಯಾರು: ಆಹೋರಾತ್ರಿ ಧರಣಿಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ

    October 31, 2025

    ಕೊರಟಗೆರೆ |ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ

    October 31, 2025

    ಜಮೀನು ಕಿತ್ತುಕೊಳ್ಳಲು ಕಿರುಕುಳ ಆರೋಪ: ತಹಶೀಲ್ದಾರ್ ಗೆ ದೂರು ಸಲ್ಲಿಸಿದ ಮಹಿಳೆ

    October 31, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.