ತುಮಕೂರು: ಮಹಿಳಾ ಪ್ರಯಾಣಿಕರೊಬ್ಬರು ತುಮಕೂರಿನಲ್ಲಿ ಆಟೋದಲ್ಲಿ ಬಿಟ್ಟು ಹೋಗಿದ್ದ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದ್ದ ಬ್ಯಾಗನ್ನು ಆಟೋ ಚಾಲಕ ಪೊಲೀಸ್ ಠಾಣೆಗೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಾಯಿತ್ರಿ ಎಂಬುವರು ತುಮಕೂರು ನಗರದಲ್ಲಿ ನಡೆದ ಕಾಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ತುಮಕೂರಿನ ಕುಂದೂರು ಕ್ರಾಸ್ ಬಳಿ ಆಟೋದಲ್ಲಿ ಬಂದು ತುಮಕೂರು ನಗರ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದರು. ಆಟೋದಲ್ಲಿ ಬ್ಯಾಗ್ ಇರಿಸಿದ್ದರು. ಆದ್ರೆ ಇಳಿದ ತಕ್ಷಣ ಆಟೋ ಮುಂದೆ ಹೋಯಿತು. ನಂತರ ನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಪೊಲೀಸರು ಸಿಸಿ ಟಿವಿ ಕ್ಯಾಮೆರಾ ದಲ್ಲಿ ಆಟೋದ ಚಲನವಲನ ನೋಡಿ ಗುರುತಿಸಿದರು. ಅಲ್ಲದೆ ಅಷ್ಟೊತ್ತಿಗೆ ಆಗಲೇ ಆಟೋ ಚಾಲಕನೇ ಪೊಲೀಸ್ ಠಾಣೆಗೆ ಬಂದು ಬ್ಯಾಗನ್ನು ತಂದು ಕೊಟ್ಟಿದ್ದಾರೆ.
ಆಟೋ ಚಾಲಕ ರವಿಕುಮಾರ್, ಬ್ಯಾಗನ್ನು ವಾಪಸ್ ಮಹಿಳೆಗೆ ಕೊಡಲು ತುಮಕೂರು ನಗರದಲ್ಲಿ ಹುಡುಕಾಡಿದ್ದಾರೆ. ಆದ್ರೆ ಅವರು ಸಿಗಲಿಲ್ಲ, ಬ್ಯಾಗ್ ನಲ್ಲಿ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇತ್ತು ಎಂದು ಪ್ರಯಾಣಿಕ ಮಹಿಳೆ ಗಾಯಿತ್ರಿ ತಿಳಿಸಿದ್ದಾರೆ. ನಂತರ ಬ್ಯಾಗನ್ನು ಪೊಲೀಸ್ ಠಾಣೆಗೆ ತಂದು ಕೊಟ್ಟೆ ಎನ್ನುತ್ತಾರೆ ರವಿಕುಮಾರ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4