ಇಂದಿನ ದಿನಮಾನಗಳಲ್ಲಿ ಮಹಿಳೆಯರ ಶೋಷಣೆ, ಹಲ್ಲೆಯಂತಹ ಹಲವಾರು ಘಟನೆಗಳು ಜರುಗುತ್ತಲೇ ಇವೆ. ಸದ್ಯ, ಸಹ ಪ್ರಯಾಣಿಕನೊಬ್ಬ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಪ್ರಾಂಕ್ ಫರ್ಟ್ ನಿಂದ ಆಂಧ್ರಪ್ರದೇಶದ ತಿರುಪತಿ ಮೂಲದ ಮಹಿಳೆ ಲುಪ್ತಾನ್ನ ಏರ್ಲೈನ್ಸ್ ನ LH 0754 ವಿಮಾನ ಮೂಲಕ ಬೆಂಗಳೂರಿಗೆ ಬರುತ್ತಿದ್ದರು.
ರಂಗನಾಥ(50) ಎಂಬುವನೇ ಕೃತ್ಯ ಎಸಗಿದ ಆರೋಪಿಯಾಗಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


