ತುಮಕೂರು: ನಾಪತ್ತೆಯಾಗಿದ್ದ ತಾಯಿ–ಮಗ ಶವವಾಗಿ ಪತ್ತೆಯಾಗಿರೋ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದ ಕೆರೆಯಲ್ಲಿ ನಡೆದಿದೆ.
ಶಶಿಕಲಾ (30), ಹಾಗೂ 6 ವರ್ಷದ ಬಾಲಕ ಮೃತ ದುರ್ದೈವಿಗಳಾಗಿದ್ದಾರೆ. ಒರಗೆರೆಹಳ್ಳಿ ಗ್ರಾಮದವರಾದ ಶಶಿಕಲಾ ಕಳೆದ ಮೂರು ದಿನಗಳಿಂದ ಮಗನ ಜೊತೆ ನಾಪತ್ತೆಯಾಗಿದ್ದರು.
ಈ ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಶಶಿಕಲಾ ಸಹೋದರ ಮಿಸ್ಸಿಂಗ್ ದೂರು ನೀಡಿದ್ದರು.
ಇಂದು ಬೆಳಿಗ್ಗೆ ತುರುವೇಕೆರೆ ಕೆರೆಯಲ್ಲಿ ತಾಯಿ ಮಗನ ಶವ ಪತ್ತೆಯಾಗಿದೆ. ಸಾವಿಗೂ ಮುನ್ನ ಡೇತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದಾರೆ.
ನನ್ನ ಸಾವಿಗೆ ಯಾರು ಕಾರಣರಲ್ಲ, ಸಾರಿ ನನ್ನ ಕ್ಷಮಿಸಿ, ಅಣ್ಣ ನನ್ನ ಗೋಕುಲ್ ನ ಅಪ್ಪ ಅಮ್ಮ ಇರುವ ಜಾಗಕ್ಕೆ ಮಣ್ಣು ಮಾಡಿ ಎಂದು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ತುರುವೇಕೆರೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296