ಸರಗೂರು: ಸ್ತ್ರೀ ಶಕ್ತಿ ಗುಂಪುಗಳಿಂದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಹಾಗೂ ಸ್ನೇಹ ಸ್ತ್ರೀ ಸಮಾಜ ಸಂಘ ಅಧ್ಯಕ್ಷೆ ಮೃತ್ಯುಂಜಯಪ್ಪ ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಸ್ ಎಸ್ ರೇಡಿಯೋ 91.2 ಎಫ್ ಎಮ್ ಸಮುದಾಯ ಬಾನುಲಿ ಕೇಂದ್ರದಿಂದ ಇವರು ನಮ್ಮವರು ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಶಿವಕುಮಾರ್ ಜೊತೆ ಮಾತನಾಡಿಸಿದರು.
”ಸ್ತ್ರೀ ಶಕ್ತಿ ಸಂಘಗಳು ಸ್ಥಾಪನೆಯಾದ ನಂತರ ಮಹಿಳೆ ಸಮಾಜ ಮುಖ್ಯ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಗೋಡೆಗಳಲ್ಲಿರುತ್ತಿದ್ದ ಮಹಿಳೆ ತನ್ನ ಕಾಲ ಮೇಲೆ ನಿಂತು ಕುಟುಂಬವನ್ನೆಲ್ಲ ನಿಭಾಯಿಸುವ ಕಾರ್ಯವನ್ನು ಮಾಡುತಿದ್ದಾಳೆ. ಸಂಘ ಮಹಿಳೆಯರಲ್ಲಿ ಶಿಸ್ತು ಹಾಗೂ ಸಮಯ ಪಾಲನೆಯನ್ನು ತಿಳಿಸುವುದರ ಜತೆ ಸಮಾಜದಲ್ಲಿ ಮಹಿಳೆಯರು ಮುಖ್ಯವಾಹಿನಿಯಲ್ಲಿ ಜೀವನ ನಡೆಸುವುದನ್ನು ತಿಳಿಸಿದೆ” ಎಂದು ಅಭಿಪ್ರಾಯಪಟ್ಟರು.
ಗ್ರಾಮಮಟ್ಟದ ಹಲವು ಸಂಘಗಳಿಗೆ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಪ್ರತಿ ಮಹಿಳೆಯರು ವಿವಿಧ ಇಲಾಖೆಗಳು ನೀಡುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಲ್ಲಿ ನೋಡಿದರೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳಗಳ ವರದಿಯನ್ನು ನಿತ್ಯವೂ ಮಾಧ್ಯಮಗಳಲ್ಲಿ ಕಾಣುತ್ತೇವೆ. ಮಹಿಳೆ ಇನ್ನೂ ಅಬಲೆಯಾಗಿಯೇ ಇದ್ದಾಳೆ” ಎಂದು ವಿಷಾದಿಸಿದರು. ”ಎಲ್ಲರೂ ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ಸಮಾನತೆಯಿಂದ ನಡೆದುಕೊಂಡಲ್ಲಿ ಮಾತ್ರ ಮಹಿಳೆಯರಿಗೆ ಸಮಾನ ಸ್ಥಾನ ಮಾನ ಪಡೆಯಲು ಸಾಧ್ಯ” ಎಂದರು.
ರೇಡಿಯೋ 91.2 ಎಫ್ ಎಮ್ ಸಮುದಾಯ ಬಾನುಲಿ ಕೇಂದ್ರದಿಂದ ಇವರು ನಮ್ಮವರು ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಹಲವು ಸಾಮಾಜಿಕ ಕಾರ್ಯಗಳ ಜೊತೆ ಸ್ನೇಹ ಸ್ತ್ರೀ ಸಮಾಜ ಸ್ಥಾಪಿಸಿ ಮಹಿಳೆಯರ ಅಭಿವೃದ್ದಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಹಾಗೂ ಪತಿಯ ಸಮಾಜಿಕ ಗುಣಗಳನ್ನು ಮೈಗೂಡಿಸಿಕೊಂಡು ಸಾಮಾಜದ ಹಿತಕ್ಕಾಗಿಯೇ ತಮ್ಮ ಬದುಕನ್ನು ಮುಡಿಪಾಗಿಸಿ ಮಹಿಳೆಯರಿಗೆ ಒಂದು ಪ್ರೇರಣೆಯಾಗಿರುವ ಹಾಗೂ ಪರಿಸರ ಪ್ರೇಮಿಯಾಗಿ ತಮ್ಮ ‘ಸಂತೃಪ್ತಿ’ ಮನೆಯ ಕೈತೋಟಕ್ಕೆ “ಪ್ಲಾಂಟ್ ಜೀನೊಂಮ್ ಸೇವಿಯರ್ ರಿವಾರ್ಡ್” ಪಡೆದಿರುವ ಸುಧಾ ಮೃತ್ಯುಂಜಯಪ್ಪ ರವರು ರೇಡಿಯೋ ಕಾರ್ಯಕ್ರಮದಲ್ಲಿ ತಿಳಿಸಿದರು.
ಜೆಎಸ್‍ಎಸ್ ರೇಡಿಯೋವನ್ನು ಪ್ಲೇಸ್ಟೋರ್ ನಲ್ಲಿ ಲಭ್ಯವಿರುವ ಜೆಎಸ್ ಎಸ್ ರೇಡಿಯೋ ಆ್ಯಪ್ ಮೂಲಕವೂ ಸಹ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದು ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC