ನವದೆಹಲಿ: ದೇಶದ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಅಸುರಕ್ಷಿತವಾಗಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಷಿಯೇಷನ್ ವರದಿ ಮಾಡಿದೆ.
ಶೇ.45ರಷ್ಟು ಮಂದಿ ವೈದ್ಯರು ರಾತ್ರಿ ಪಾಳಿಯಲ್ಲಿ ಡ್ಯೂಟಿ ರೂಮ್ ಲಭ್ಯವಿಲ್ಲ ಹೀಗಾಗಿ ನಾವು ಅತ್ಯಂತ ಅಸುರಕ್ಷಿತರಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಐಎಂಎ ಹೇಳಿದೆ.
ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆ ಅತ್ಯಾಚಾರ ಮತ್ತು ಕೊಲೆ ನಡೆದ ಘಟನೆಯ ನಂತರ ಐಎಂಎ ನಡೆಸಿದ ಸಮೀಕ್ಷೆ ವೇಳೆ ಮಹಿಳಾ ವೈದ್ಯರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಅಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
20–30 ವರ್ಷ ವಯಸ್ಸಿನ ವೈದ್ಯರು ಆಸ್ಪತ್ರೆಯಲ್ಲಿ ಸುರಕ್ಷತೆ ಎಂಬುವುದೇ ಇಲ್ಲ ಎಂದು ಭಾವಿಸುತ್ತಿದ್ದಾರೆ. ಈ ಗುಂಪು ಹೆಚ್ಚಾಗಿ ಇಂಟರ್ನಿಗಳು ಮತ್ತು ಸ್ನಾತಕೋತ್ತರ ಪದವೀಧರರನ್ನು ಒಳಗೊಂಡಿದೆ. ರಾತ್ರಿ ಪಾಳಿಯಲ್ಲಿ 45 ಪ್ರತಿಶತದಷ್ಟು ಮಂದಿಗೆ ಕರ್ತವ್ಯ ಕೊಠಡಿ ಲಭ್ಯವಿರಲಿಲ್ಲ. ಡ್ಯೂಟಿ ಕೋಣೆಗೆ ಪ್ರವೇಶ ಹೊಂದಿರುವವರು ತಾವು ಸುರಕ್ಷಿತವಾಗಿರುವುದಾಗಿ ಹೇಳಿಕೊಂಡಿದ್ದಾರೆ.
22 ರಾಜ್ಯಗಳಿಂದ ಬಂದವರು ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರಲ್ಲಿ 85 ಪ್ರತಿಶತ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 61 ಪ್ರತಿಶತದಷ್ಟು ಇಂಟರ್ನಿಗಳು ಅಥವಾ ಸ್ನಾತಕೋತ್ತರ ತರಬೇತಿದಾರರಿದ್ದರು ಎನ್ನಲಾಗಿದೆ.
ಹಲವಾರು ವೈದ್ಯರು ಅಸುರಕ್ಷಿತ (ಶೇ. 24.1) ಅಥವಾ ತುಂಬಾ ಅಸುರಕ್ಷಿತ (ಶೇ. 11.4) ಎಂದು ವರದಿ ಮಾಡಿದ್ದಾರೆ, ಒಟ್ಟು ಮೂರನೇ ಒಂದು ಭಾಗದಷ್ಟು ಜನರು ಅಸುರಕ್ಷಿತರಾಗಿದ್ದಾರೆ. ಮಹಿಳೆಯರಲ್ಲಿ ಅಸುರಕ್ಷಿತ ಭಾವನೆಯ ಪ್ರಮಾಣವು ಹೆಚ್ಚಿದೆ ಎಂದು ಸಮೀಕ್ಷೆಯ ಸಂಶೋಧನೆಗಳು ತೋರಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q