ಬೆಂಗಳೂರು: ವಾಚ್ ತಯಾರಿಕ ಕಂಪನಿಯ ಮ್ಯಾನೇಜರ್, ಸೂಪರ್ವೈಸರ್ ಕಿರುಕುಳದಿಂದ ಬೇಸತ್ತ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ನಗರದ ಟಿ. ದಾಸರಹಳ್ಳಿಯಲ್ಲಿ ನಡೆದಿದೆ.
ದಾಸರಹಳ್ಳಿಯಲ್ಲಿ ನೆಲೆಸಿರುವ ಅಂಧ್ರಪ್ರದೇಶದ ಗುಡಿಬಂಡೆ ನಿವಾಸಿ ಗೋವಿಂದ (24) ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ. ಕಳೆದ ಆರು ವರ್ಷಗಳಿಂದ ಪೀಣ್ಯ ಬಳಿಯ ಕೆಡಿಡಿಎಲ್ ವಾಚ್ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ರಾತ್ರಿ ಅಪಾರ್ಟೆಂಟ್ ನಲ್ಲಿ ಮೇಂಟೆನೆಂಸ್ ಕೆಲಸ ಮಾಡಿಕೊಂಡು ತಂಗಿದ್ದರು.


