ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ಕಾಡಾನೆ ಕಂಡು ಗಾಬರಿಯಿಂದ ದಿಕ್ಕಾ ಪಾಲಾಗಿ ಓಡಿದ ಐವರು ಕಾರ್ಮಿಕರು ಬಿದ್ದು ಗಾಯಗೊಂಡಿದ್ದಾರೆ.
ಬಿಕ್ಕೋಡು ಎಸ್ಟೇಟ್‌ನಲ್ಲಿ ಸೋಮವಾರ 8ರ ಸುಮಾರಿಗೆ ಕಾರ್ಮಿಕರು ಕಾಫಿ ಕೊಯ್ದು ಮಾಡುತ್ತಿದ್ದ ವೇಳೆ ಶನಿವಾರ ರೇಡಿಯೊಕಾಲರ್ ಅಳವಡಿಸಿದ್ದ ಬೀಟಮ್ಮ ಗ್ಯಾಂಗ್ ನ ಹೆಣ್ಣಾಣೆಯು ದಿಢೀರನೆ ತೋಟಕ್ಕೆ ಬಂದಿದೆ.
ಇದರಿಂದ ಭಯಭೀತರಾದ ಕಾರ್ಮಿಕರು ದಿಕ್ಕಾಪಾಲಾಗಿ ಓಡಿದ್ದು, ಈ ವೇಳೆ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಬೆನ್ನುಮೂಳೆಗೆ ಪೆಟ್ಟು ಬಿದ್ದ ಲಕ್ಷ್ಮಿ ಅವರು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೇತ್ರಾವತಿ, ವನಜಾಕ್ಷಿ, ಎಲಿಜಾ ಖಾಜನ್, ಅಕ್ಕಮ್ಮ ಅವರು ಬೇಲೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ರೇಡಿಯೊ ಕಾಲರ್ ಅಳವಡಿಸಿದ್ದ ಈ ಹೆಣ್ಣಾನೆ, ಬೀಟಮ್ಮ ಗ್ಯಾಂಗ್ ನಿಂದ ಬೇರ್ಪಟ್ಟಿದ್ದು, ಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ತೋಟದಲ್ಲಿ ಆನೆ ಬಂದಿರುವ ಬಗ್ಗೆ ತೋಟದ ಮ್ಯಾನೇಜರ್ ಗೆ ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದರು. ಆದರೆ, ಮ್ಯಾನೇಜರ್ ಕಾರ್ಮಿಕರಿಗೆ ಮಾಹಿತಿ ನೀಡಿಲ್ಲ. ಇದರಿಂದಾಗಿ ಆನೆಯಿಂದ ಸ್ಪಲ್ಪದರಲ್ಲಿಯೇ ಪ್ರಾಣ ಉಳಿಸಿಕೊಂಡೆವು ಎಂದು ಕಾರ್ಮಿಕರು ದೂರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx