ತುಮಕೂರು: ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿಗಳಾದ ಡಾ.ನಟರಾಜ್ ರವರು ಹಿರಿಯ ನಾಗರಿಕರಿಗೆ ಆಹಾರ ಕ್ರಮ. ಆರೋಗ್ಯ ತಪಾಸಣೆ, ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಿ.ವಿ.ವೆಂಕಟರಾಮಯ್ಯನವರು ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಪಡೆಯಲು. ಸಾಧನ ಸಲಕರಣೆಗಳ ಬಳಕೆ. ವಾಕಿಂಗ್ ಮತ್ತು ವ್ಯಾಯಾಮದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮುದ್ದೇಗೌಡ, ಫಾರ್ಮಸಿಷ್ಟ್ರಾಧಿಕಾರಿಗಳಾದ ನಿರೂಪ ರಾವತ್, ಮನಸಿಡಿ ಆಪ್ತ ಸಮಾಲೋಚಕರಾದ ಬಾಲಕೃಷ್ಣ, ಹಿರಿಯ ಆರೋಗ್ಯ ಸುರಕ್ಷತೆ ಅಧಿಕಾರಿಗಳಾದ ರೇಣುಕಮ್ಮ ಇತರ ಆರೋಗ್ಯ ಸಿಬ್ಬಂದಿಯವರು ಹಾಗೂ ಹಿರಿಯ ನಾಗರಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q