nammatumakuru

    Subscribe to Updates

    Get the latest creative news from FooBar about art, design and business.

    What's Hot

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026

    ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ

    March 12, 2026

    ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ

    March 12, 2026
    Facebook Twitter Instagram
    ಟ್ರೆಂಡಿಂಗ್
    • ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ
    • ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ
    • ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ
    • ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ
    • ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಅನ್ಯಾಯ: ತಿಪಟೂರಿನಲ್ಲಿ ಪ್ರತಿಭಟನೆ
    • ಮಧುಗಿರಿ: ಒಳ ಮೀಸಲಾತಿ ಅನ್ವಯ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
    • ಸಿಲಿಂಡರ್ ಕೊರತೆ: ತುಮಕೂರಿನಲ್ಲಿ ಹೋಟೆಲ್‌ ಗಳು ಬಂದ್; ಸಂಕಷ್ಟದಲ್ಲಿ ಉದ್ಯಮ
    • ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ: ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬರವಣಿಗೆಯು ಉತ್ತಮ ಬದುಕಿಗೊಂದು ಮಾರ್ಗ: ಡಾ. ವ್ಹಿ.ಎಸ್ ಕಟಗಿಹಳ್ಳಿಮಠ
    ಜಿಲ್ಲಾ ಸುದ್ದಿ July 11, 2023

    ಬರವಣಿಗೆಯು ಉತ್ತಮ ಬದುಕಿಗೊಂದು ಮಾರ್ಗ: ಡಾ. ವ್ಹಿ.ಎಸ್ ಕಟಗಿಹಳ್ಳಿಮಠ

    By adminJuly 11, 2023No Comments2 Mins Read
    bagalakote

    ಬಾಗಲಕೋಟೆ: ಜ್ಞಾನವು ಭಾಷೆಗಿಂತ ದೊಡ್ಡದಾಗಿದ್ದು ನಿರಂತರ ಅದ್ಯಯನದಿಂದ ಭಾಷಾ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯ. ಓದುವ, ಗ್ರಹಿಸುವ ಮತ್ತು ಕಲ್ಪನಾ ಪ್ರವೃತ್ತಿ ಬೆಳಸಿಕೊಳ್ಳಲು ಬರವಣಿಗೆಯು ಉತ್ತಮ ಮಾದ್ಯಮ ಎಂದು ವಿಶ್ರಾಂತ ಪ್ರಾಚಾರ್ಯರಾದ ಡಾ. ವ್ಹಿ.ಎಸ್ ಕಟಗಿಹಳ್ಳಿಮಠ ಹೇಳಿದರು.

    ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಐಕ್ಯೂ ಎಸಿ ಘಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಕನ್ನಡ ಬರವಣಿಗೆಯ ಕೌಶಲ್ಯ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನಾ ಸಮಾರಂಭವನ್ನು ಕಪ್ಪೆ ಅರೆಭಟ್ಟನ ಶಾಸನದ ಮೊದಲ ಕನ್ನಡ ತ್ರಿಪದಿಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ಭಾಷೆಗಳು ಸರಳೀಕರಣವಾಗುತ್ತ ಸುಲಭ ಭಾಷೆಗಳಾಗಿ ಬಂದಿದ್ದು ಇದಕ್ಕೆ ಬರವಣಿಗೆಯು ಮೂಲವಾಗಿದೆ ಎಂದರು.


    Provided by
    Provided by

    ಎಲ್ಲರೂ ಮಾತಗಳನ್ನಾಡಬಹುದು ಆದರೆ ಮೆಚ್ಚುಗೆಯಾಗುವ ಬರವಣಿಗೆ ಬರೆಯಬೇಕಾದರೆ ಕೌಶಲ್ಯ ಮುಖ್ಯ. ಬರವಣಿಗೆಗೂ ತನ್ನದೆಯಾದ ಭಾಷೆಯಿದೆ. ಹಿರಿಯ ದರ್ಜೆಯ ಸ್ಪರ್ಧಾತ್ಮಕ ಪರೀಕ್ಷೆಗಳು ಪರಿಣಾಮಕಾರಿ ಬರವಣಿಗೆಯನ್ನು ನಿರೀಕ್ಷಿಸುವುದರಿಂದ ಪರೀಕ್ಷೆಗಳನ್ನು ಎದುರಿಸುವ ಕ್ರಮ ಗೊತ್ತಿದ್ದರೆ ಐಎಸ್, ಕೆಎಸ್ ಪರೀಕ್ಷೆಗಳನ್ನು ಎದುರಿಸುವುದು ಸುಲಭ ಎಂದರು.

    ಸಂಕ್ಷಿಪ್ತ ಬರವಣಿಗೆಯಲ್ಲಿ ಸಮಗ್ರ ವಿವರಣೆಯನ್ನು ನೀಡಬೇಕಾದರೆ ಭಾಷೆಯ ಮಿತಿ ಅರಿತಿರಬೇಕು. ಬಡತನ, ಸಿರಿತನದ ಆಧಾರದ ಮೇಲೆ ಸಾಧಕರಾಗಲು ಸಾಧ್ಯವಿಲ್ಲ. ಆತ್ಮಸ್ಥೈರ್ಯ ಮತ್ತು ಛಲದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಪ್ರಾಚೀನ ಭಾರತವನ್ನು ಅಧ್ಯಯನ ಮಾಡಿದರೆ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆಯೇ ಮೊದಲ ಭಾಷೆಯಾಗಿದ್ದು ಅದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಇಂತಹ ಭಾಷೆಯನ್ನು ಬಳಸಿಕೊಂಡು ಉಳಿಸಿಕೊಂಡು ಹೋಗುವ ಕಲೆಯನ್ನು ಬೆಳಸಿಕೊಳ್ಳಬೇಕಿದೆ ಎಂದರು.

    ಪ್ರಾಚಾರ್ಯರಾದ ಪ್ರೊ‌. ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಮಾತುಗಳು ಕ್ಷಣಿಕ ರೂಪವಾಗಿದ್ದು ಅದನ್ನು ಶಾಶ್ವತವಾಗಿ ಉಳಿಸಲು ಬರವಣಿಗೆಯಿಂದ ಮಾತ್ರ ಸಾಧ್ಯ. ವಿಷಯ ವಸ್ತುಗಳನ್ನು ಪ್ರಶ್ನಾರ್ಥಕ ರೂಪದಲ್ಲಿ ನೋಡುವುದನ್ನು ಕಲಿತರೆ ಅರಿವನ್ನು ಬೆಳಸಿಕೊಳ್ಳಬಹುದು. ಬರಹ ದಾಖಲೆಯಾಗುವ ವಿಧಾನವಾಗಿದ್ದು ಕಥೆ, ಸಾಹಿತ್ಯ, ಕಲೆ, ವಿಜ್ಞಾನ ಪ್ರತಿಯೊಂದಕ್ಕೂ ತನ್ನದೆಯಾದ ಬರಹ ಕೌಶಲ್ಯಗಳಿರುತ್ತವೆ ಅವುಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳಸಿಕೊಳ್ಳಬೇಕು. ಭಾಷೆಯನ್ನು ಬರೆಯದಿದ್ದರೆ ಭಾಷೆಯು ಸತ್ತಂತೆ, ಭಾಷೆಯನ್ನು ಬರೆಯಲು ಕಲಿಯದಿದ್ದರೆ ಮನುಷ್ಯನು ಬದುಕಿಯೂ ಸತ್ತಂತೆ ಎಂದರು.

    ಕಾರ್ಯಕ್ರಮದಲ್ಲಿ ಪ್ರಾದ್ಯಾಪಕರಾದ ಡಾ. ಎಸ್. ಡಿ ಕೆಂಗಲಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂ ಎಸಿ ಸಂಯೋಜಕ ಡಾ. ಎ.ಯು ರಾಠೋಡ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ವಿರೂಪಾಕ್ಷ ಎನ್.ಬಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾದ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

    admin
    • Website

    Related Posts

    ಮಾ.18 ರಿಂದ ಏ.2ರವರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ:  ವ್ಯವಸ್ಥಿತ, ಸುಸೂತ್ರ, ಪಾರದರ್ಶಕ  ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ

    March 11, 2026

    ಸಾಮಾಜಿಕ ಜಾಲತಾಣಗಳಿಂದ ನಿಜವಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನಿಗೂ ಲಭಿಸಿದೆ: ಡಾ.ಎ.ಎಸ್. ಬಾಲಸುಬ್ರಮಣ್ಯ

    March 11, 2026

    ಪತ್ರಕರ್ತರು ಪಾರದರ್ಶಕವಾಗಿ ಸುದ್ದಿಗಳನ್ನು ಪ್ರಕಟಿಸಲಿ: ಕವಿವಿ ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ

    March 11, 2026

    Comments are closed.

    Our Picks

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಭೂಸ್ವಾಧೀನದಲ್ಲಿ ರೈತರಿಗೆ ನಷ್ಟ ತಪ್ಪಿಸಲು ‘ಮಾರ್ಗಸೂಚಿ ದರ’ ಪರಿಷ್ಕರಣೆ ಅಗತ್ಯ: ಸಚಿವ ಕೃಷ್ಣ ಬೈರೇಗೌಡ

    March 12, 2026

    ಬೆಂಗಳೂರು: ರಾಜ್ಯದಲ್ಲಿ ವಿವಿಧ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಸಮ್ಮತ ಪರಿಹಾರ ಒದಗಿಸಲು ಆಸ್ತಿಗಳ ‘ಮಾರ್ಗಸೂಚಿ ದರ’ವನ್ನು (Guideline…

    ಅಧಿವೇಶನಕ್ಕೆ ಗೈರಾಗುವ ಸಚಿವರನ್ನು ಸಂಪುಟದಿಂದ ಕೈಬಿಡಿ: ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಶಾಸಕರ ಒತ್ತಾಯ

    March 12, 2026

    ಸಾಲ ವಾಪಸ್‌ ಕೇಳಿದ್ದಕ್ಕೆ ಸ್ನೇಹಿತನ ಕೊಲೆ: ತುಮಕೂರಿನಲ್ಲಿ ಆರೋಪಿ ಬಂಧನ

    March 12, 2026

    ತುಮಕೂರು: ಅಂಗನವಾಡಿ ಹುದ್ದೆಗಳ ನೇಮಕಾತಿ; 2,628 ಅರ್ಜಿಗಳು ತಿರಸ್ಕೃತ

    March 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.