ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮಪಂಚಾಯಿತಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ಚುನಾವಣೆ ನಡೆಯಿತು.
ಚುನಾವಣಾ ಪ್ರಕ್ರಿಯೆಯಲ್ಲಿ ಸದಸ್ಯರಾದ ರಾಮಚಂದ್ರಪ್ಪ ಮತ್ತು ಸಿ.ನಂದೀಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ನಂದೀಶ್ ರವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲಾಗಿ, ಚುನಾವಣಾ ಕಣದಲ್ಲಿ ರಾಮಚಂದ್ರಪ್ಪ ಒಬ್ಬರೇ ಉಳಿದು, ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾದ ತಹಶೀಲ್ದಾರ್ ಡಿ.ಎನ್.ವರದರಾಜು ಘೋಷಿಸಿದರು.
ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 32 ಜನ ಸದಸ್ಯ ಸ್ಥಾನಬಲವಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 6 ಜನ ಸದಸ್ಯರು ಮತ್ತು ಜೆಡಿಎಸ್ ಬೆಂಬಲಿತ 19 ಜನರು ಸೇರಿ ಒಟ್ಟು 25 ಸದಸ್ಯರು ಭಾಗವಹಿಸಿದ್ದರು. ಉಳಿಕೆ 7 ಜನ ಸದಸ್ಯರು ಗೈರು ಆಗಿದ್ದರು.
ನೂತನ ಅಧ್ಯಕ್ಷರಾದ ರಾಮಚಂದ್ರಪ್ಪ ರವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಪುರ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಪಿಡಿಓ ಶ್ರೀರಾಮ್ ನಾಯ್ಕ, ಪಿಎಸ್ಐ ಮಾಳಪ್ಪ ನಾಯ್ಕೋಡಿ ಮುಖಂಡರಾದ ಜಿ.ಬಿ.ಸತ್ಯನಾರಾಯಣ, ಸತ್ಯನಾರಾಯಣ ಚೌದರಿ, ಟಿ.ಎನ್.ಕೃಷ್ಣಮೂರ್ತಿ, ನಾರಾಯಣಪ್ಪ, ಓಬಳೇಶ, ಎ.ಓ.ನಾಗರಾಜು, ಗುರುಪ್ರಸಾದ್, ಇದಾಯತ್, ಯರ್ರಪ್ಪ, ಖಯೂಂ, ಭಾವಾಸಾಬ್ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q