ವೈ.ಎನ್.ಹೊಸಕೋಟೆ: ಇಲ್ಲಿನ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಓರಿಗಾಮಿ ಮತ್ತು ಪಾಪಪ್ ಕಲೆಗಳ ಬಗ್ಗೆ ಪರಿಚಯ ಹಾಗೂ ಗಣಿತದ ಮಾದರಿಗಳನ್ನು ತಯಾರಿಸುವ ಬಗ್ಗೆ ಕಾರ್ಯಾಗಾರವನ್ನು ರಾಜ್ಯ ಸಂಪನ್ಮೂಲ ವ್ಯಕ್ತಿ ಮಧು ಶ್ರೀನಿವಾಸನ್ ಇವರ ನಿರ್ದೇಶನದಲ್ಲಿ ನಡೆಸಲಾಯಿತು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಎನ್.ಆರ್. ಅಶ್ವಥ್ , ಅಧ್ಯಕ್ಷರಾದ ಇ.ವಿ. ಶ್ರೀಧರ್ ಹಾಗೂ ಮುಖ್ಯ ಶಿಕ್ಷಕರಾದ ಬಿ. ತಿಪ್ಪೇಸ್ವಾಮಿ ವಿವಿಧ ಓರಿಗಾಮಿ ಚಟುವಟಿಕೆ ಮಾಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಧು ಶ್ರೀನಿವಾಸನ್ ರವರು ಪಾಪ್ ಅಪ್ ಕಲೆಯ ಮೂಲಕ ವಿವಿಧ ಸಮತಲಾಕೃತಿಗಳು, ಘನಾಕೃತಿಗಳು, ಬೀಜಗಣಿತದ ಸೂತ್ರಗಳು ಪ್ರಮೇಯಗಳು ಮುಂತಾದವುಗಳನ್ನು ಪ್ರದರ್ಶಿಸಿ ಮಾಹಿತಿ ನೀಡಿದರು. ಶಾಲೆಯ ಸುಮಾರು 120 ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರುಗಳಾದ ಉಮರ್ ಫಾರೂಕ್, ವಿನೋದ್ ಕುಮಾರ್, ಅನಿಲ್ ಕುಮಾರ್ ಹಾಗೂ ಶಿಕ್ಷಕಿಯಾದ ಸೌಜನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನಿಲ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC