ಪಾವಗಡ: ತಾಲೂಕಿನ ಗಂಡುಮೆಟ್ಟಿದ ನಾಡು ಯಲ್ಲಪ್ಪನಾಯಕನ ಹೊಸಕೋಟೆಯಲ್ಲಿ ಮಾಡುವ ಕಾರ್ಯಕ್ರಮಗಳು ರಾಜ್ಯಮಟ್ಟದ ಸುದ್ದಿ ಮಾಡುತ್ತವೆ ಎಂದರೆ ಅದು ಈ ನೆಲಕ್ಕಿರುವ ಸತ್ವ ಎಂದು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಅಶ್ವಥ ಕುಮಾರ್ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ವೈ.ಎನ್.ಹೊಸಕೋಟೆ ಪುಟ್ ಬಾಲ್ ಕ್ಲಬ್ ಆಯೋಜಿಸಿದ್ದ ಪಂದ್ಯಾವಳಿಯನ್ನು ಶನಿವಾರ ಸಂಜೆ ಉದ್ಘಾಟನೆ ಮಾಡಿ ಮಾತನಾಡಿದರು.
ಈ ಗ್ರಾಮದ ಕ್ರಿಡೆ ಮತ್ತು ಕಲೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇಲ್ಲಿನ ಜನತೆ ಕ್ರೀಡಾಸಕ್ತರಾಗಿದ್ದು, ಅಭಿವೃದ್ದಿಗೆ ಶ್ರಮಿಸುತ್ತಾರೆ. ಹಾಗಾಗಿ ವೈ.ಎನ್.ಹೊಸಕೋಟೆ ಎಂದಾಕ್ಷಣ ಆಟೋಟಗಳು ಜ್ಞಾನಪಕ್ಕೆ ಬರುತ್ತವೆ. ಪ್ರಸ್ತುತ ನಡೆಯುತ್ತಿರುವ ಪುಟ್ ಬಾಲ್ ಪಂದ್ಯಾವಳಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳ ಟೀ-ಷರ್ಟ್ ಅನಾವರಣ ಮಾಡಲಾಯಿತು. ಕ್ಲಬ್ ನ ವತಿಯಿಂದ ಎನ್.ಆರ್.ಅಶ್ವಥ ಕುಮಾರ್ ಮತ್ತು ನೇರಳಕುಂಟೆ ನಾಗೇಂದ್ರ ಕುಮಾರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಉದ್ಘಾಟನಾ ಮೊದಲ ಪಂದ್ಯ ಅತ್ಯಂತ ಸ್ಪರ್ಧಾತ್ಮಕವಾಗಿ ಮೂಡಿಬಂದು ಜನಮೆಚ್ಚುಗೆ ಪಡೆಯಿತು. ಈ ಸಂದರ್ಭದಲ್ಲಿ ಎಂ.ಆರ್.ಶಿವಾನಂದಗುಪ್ತ, ಐ.ಎ.ನಾರಾಯಣಪ್ಪ, ರಾಮಲಿಂಗಪ್ಪ, ಅಬ್ದುಲ್ ಶುಕೂರ್, ಮುದ್ರಾಡಿ ಚಂದ್ರಶೇಖರ್, ಹೆಚ್.ಆರ್.ದೇವರಾಜು, ಕಿರಣ್, ಮಂಜುನಾಥ, ಎಎಸ್ಐ ಶಿವಪ್ಪ, ಹಿದಾಯತ್, ಸಾದಿಕ್ ಸಾಬ್, ನಯಾಜ್ ಇತರರು ಇದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy