ಬಿಜೆಪಿಯ ಶಂಖನಾದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಟ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಪ್ರಕಾಶ ರಾಜ್ ಹೇಳಿದ್ದ. ಅದಕ್ಕೆ ನಾನು ಪ್ರಕಾಶ ರಾಜ್ ಹಂದಿ ಎಂದು ಉತ್ತರ ಕೊಟ್ಟಿದ್ದೆ.
ಸುಖಾಸುಮ್ಮನೆ ಮಾತನಾಡದೇ ಬರೋಬ್ಬರಿಯಾಗಿ ಉತ್ತರಿಸಬೇಕು ಎಂದು ಯತ್ನಾಳ್ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಮರ್ಯಾದೆ ಕೊಟ್ಟರೆ ಮರ್ಯಾದೆ ಕೊಡೋಣಾ, ಯಾಕಲೋ ಎಂದರೆ ಯಾಕೋ ಮಗನೇ ಎನ್ನಬೇಕೆಂದು ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.


