ತುಮಕೂರು: ಹ್ಯುಂಡೈ ಸಂಸ್ಥೆಯ ರಾಷ್ಟ್ರಮಟ್ಟದ ಪ್ರತಿಷ್ಠಿತ ‘ಆರ್ಟ್ ಫಾರ್ ಹೋಪ್’ ಪುರಸ್ಕಾರಕ್ಕೆ ನಗರದ ಯಕ್ಷದೀವಿಗೆ ಸಂಸ್ಥೆಯು ಪಾತ್ರವಾಗಿದೆ. ಈ ಸಂಬಂಧ ನವದೆಹಲಿಯಲ್ಲಿ ನಡೆದ ಕಲಾಪ್ರದರ್ಶನದಲ್ಲಿ ಸಂಸ್ಥೆಯ ಅಧ್ಯಕ್ಷೆ ಆರತಿ ಪಟ್ರಮೆ ಹಾಗೂ ಕೋಶಾಧಿಕಾರಿ ಡಾ.ಸಿಬಂತಿ ಪದ್ಮನಾಭ ಕೆ.ವಿ. ಗೌರವವನ್ನು ಸ್ವೀಕರಿಸಿದರು.
ಹ್ಯುಂಡೈ ಮೋಟಾರ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಉನ್ಸೂ ಕಿಮ್ ಹಾಗೂ ಹಿರಿಯ ಛಾಯಾಗ್ರಾಹಕ ಆದಿತ್ಯ ಆರ್ಯ ಪ್ರಶಸ್ತಿ ಪ್ರದಾನ ಮಾಡಿದರು.
‘ಆರ್ಟ್ ಫಾರ್ ಹೋಪ್’ ಯೋಜನೆಯಡಿಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಸಲ್ಲಿಕೆಯಾದ 520 ಪ್ರಸ್ತಾವನೆಗಳಲ್ಲಿ 10 ಸಂಸ್ಥೆಗಳನ್ನು ಹಾಗೂ 40 ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದ ಸಂಸ್ಥೆಗಳಲ್ಲಿ ಯಕ್ಷದೀವಿಗೆಯೂ ಒಂದು.
ಈ ಅನುದಾನದಡಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ‘ಚಂದ್ರಮಂಡಲಚರಿತೆ’ ಎಂಬ ಯಕ್ಷಗಾನವನ್ನು ಯಕ್ಷದೀವಿಗೆ ತಂಡವು ಸಿದ್ಧಪಡಿಸಿತ್ತು. ಹಿರಿಯ ಕಲಾವಿದ ಗಣರಾಜ ಕುಂಬ್ಳೆ ಪ್ರಸಂಗವನ್ನು ರಚಿಸಿದ್ದರು. ನವದೆಹಲಿಯ ಟ್ರಾವಂಕೋರ್ ಪ್ಯಾಲೇಸ್‌ನಲ್ಲಿ ನಡೆದ ಕಲಾಮೇಳದಲ್ಲಿ ಯಕ್ಷಗಾನದ ಸಾಕ್ಷ್ಯ ಚಿತ್ರ ಹಾಗೂ ಆಯ್ದ ಭಾಗವನ್ನು ಪ್ರದರ್ಶಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4