ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆಯ ಮೂಲಕ ಪ್ರಾರಂಭಿಸಲಾಗಿದ್ದ ಕಾಂಗ್ರೆಸ್ಸಿನ ಭಾರತ ಜೋಡೋ ಯಾತ್ರೆ ಯಶಸ್ವಿಯಾಗಿ ಮುಕ್ತಾಯವಾಗಿದೆ.
ಶ್ರೀನಗರ ಲಾಲ್ ಚೌಕಿನಲ್ಲಿ ಧ್ವಜಾರೋಹಣದೊಂದಿಗೆ ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರೆ 2022ರ ಸೆಪ್ಟೆಂಬರ್ 7ಕ್ಕೆ ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳಲ್ಲಿ 3560 ಕಿಲೋಮೀಟರ್ಗಳ ಸುದೀರ್ಘ ಕಾಲ್ನಡಿಗೆಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಮಾಡಿದ ಭಾರತ್ ಜೋಡೋ ಯಾತ್ರೆ ಬಹು ಚರ್ಚಿತ ವಾಗಿದ್ದ ಯಾತ್ರೆಯಾಗಿತ್ತು. ಈ ಯಾತ್ರೆ ಅನೇಕ ರಾಜಕೀಯ ಆಯಾಮಗಳನ್ನು ಸೃಷ್ಟಿ ಮಾಡುವುದರ ಜೊತೆಗೆ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ಕರೆ ನೀಡುವ ಪ್ರಯತ್ನ ಮಾಡಿದ್ದು ವಿಶೇಷ.
ಯಾತ್ರೆ ಸಂಪೂರ್ಣ ಸಫಲವಾಗದೆ ಇರಬಹುದು ಆದರೆ, ರಾಜಕೀಯ ಎಲ್ಲಾ ವಿರೋಧ ಪಕ್ಷಗಳು ಭಾರತ್ ಜೋಡು ಯಾತ್ರೆಗೆ ಪರೋಕ್ಷ ಬೆಂಬಲ ಹಾಗೂ ಶುಭಾಶಯವನ್ನು ಕೋರಿದ್ದು ವಿಶೇಷವಾಗಿತ್ತು. ಕೇಂದ್ರದಲ್ಲಿನ ಭಾರತೀಯ ಜನತಾ ಪಕ್ಷದ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು ಬೆಲೆ ಏರಿಕೆ, ನಿರುದ್ಯೋಗ, ರಾಷ್ಟ್ರೀಯ ಭದ್ರತೆ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯೇ ಕುರಿತು ರಾಹುಲ್ ಗಾಂಧಿ ಪ್ರತಿ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿಫಲತೆ ಕುರಿತು ವಾಗ್ದಾಳಿ ನಡೆಸಿದರು.
ಕರ್ನಾಟಕ ಮಹಾರಾಷ್ಟ್ರ ಆಂಧ್ರ ತೆಲಂಗಾಣ ಈ ರಾಜ್ಯಗಳಲ್ಲಿ ಯಾತ್ರೆಗೆ ಅದ್ಭುತ ಪೂರ್ವ ಜನಬೆಂಬಲ ಸಿಕ್ಕಿತು. ಪ್ರತಿ ರಾಜ್ಯದಲ್ಲಿ ಕೂಡ ರಾಹುಲ್ ಗಾಂಧಿಯವರ ಕಡೆ ಜನ ಆಕರ್ಷಿತರಾಗಿ ಭಾರತ್ ಜೋಡು ಯಾತ್ರೆಗೆ ತಮ್ಮದೇ ರೀತಿಯ ಬೆಂಬಲ ವ್ಯಕ್ತಪಡಿಸುತ್ತಿದ್ದರು. ರಾಹುಲ್ ಗಾಂಧಿ ಚಿಕ್ಕ ಮಕ್ಕಳನ್ನು ಹೇಗಲೇರಿ ಸಂಭ್ರಮಿಸಿದರು. ಯುವಕರು ಯುವತಿಯರು ರಾಹುಲ್ ಗಾಂಧಿಗೆ ಕೈ ಕುಲುಕುವುದು ಅವರನ್ನ ಅಪ್ಪಿಗೆ ನೀಡುವುದು ಹಾಗೂ ತಮ್ಮ ಸಮಸ್ಯೆಗಳ ಚರ್ಚಿಸುವುದು ಇದು ಪ್ರತಿಯೊಂದು ರಾಜ್ಯದ ಸಾಮಾನ್ಯ ದೃಶ್ಯವಾಗಿತ್ತು. ಈ ಯಾತ್ರೆಯಲ್ಲಿ ಅನೇಕ ಗಣ್ಯ ಮಾನ್ಯ ವ್ಯಕ್ತಿಗಳು ಯಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ಮಾಜಿ ಸೈನಿಕರು ಆರ್ ಬಿ ಐ ನ ಮಾಜಿ ಗವರ್ನರ್ ರಘುರಾಮ್ ರಾಘವ್ ಅವರ ಉಪಸ್ಥಿತಿ ಅನೇಕ ಚರ್ಚೆಗಳಿಗೆ ಆಸ್ಪದ ನೀಡಿತ್ತು. ರಾಹುಲ್ ಗಾಂಧಿ ಜನವರಿ 29ರಂದು 2023 ಜಮ್ಮು ಕಾಶ್ಮೀರನ ಶ್ರೀನಗರ ದಲ್ಲಿರುವ ಲಾಲ್ ಚೌಕ್ ನಲ್ಲಿ ರಾಷ್ಟ್ರೀಯ ಧ್ವಜಾರೋಹನ ಮಾಡಿ ಭಾರತ್ ಜೋಡು ಯಾತ್ರೆಯನ್ನು ಮುಕ್ತಾಯ ಗೊಳಿಸಿದರು. ಜನವರಿ 30ರಂದು ಭಾರತ್ ಜೋಡು ಯಾತ್ರೆಯ ಸಮಾರೋಪ ಸಮಾರಂಭ ಜಮ್ಮು ಕಾಶ್ಮೀರದಲ್ಲಿ ನಡೆಯಲಿದೆ ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳು ಭಾಗವಹಿಸಲಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


