ನಮ್ಮ ತುಮಕೂರು ಸುದ್ದಿ ಮಾಧ್ಯಮ ವೀಕ್ಷಕ ಓದುಗಾರ ಮಿತ್ರರಿಗೆ ನಿಮ್ಮ ಪ್ರೀತಿಯ ಯತೀಶ್ ಕುಮಾರ್ ಮಾಡುವ ನಮಸ್ಕಾರಗಳು.
ನಮ್ಮ ತುಮಕೂರು ಸುದ್ದಿ ಮಾಧ್ಯಮವು 2021 ನೇ ನವಂಬರ್ 1ನೇ ತಾರೀಕು ಕನ್ನಡ ರಾಜ್ಯೋತ್ಸವದ ದಿನದಂದು ಲೋಕಾರ್ಪಣೆಯಾಗುತ್ತಾ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಕಲೆ, ಸಾಹಿತ್ಯ, ಸಂಸ್ಕೃತಿ, ವಾಣಿಜ್ಯ, ಮತ್ತಿತರ ಒಳ್ಳೆಯ ಸುದ್ದಿಗಳನ್ನು ಪ್ರಸರಿಸುವುದರ ಜೊತೆಗೆ ವೀಕ್ಷಕರ ಮತ್ತು ಓದುಗಾರರ ಗಮನ ಸೆಳೆಯುತ್ತಾ ಬಂದು ಇಲ್ಲಿಗೆ ಒಂದು ವರ್ಷವಾಯಿತು. ಇಂದು “ನಮ್ಮ ತುಮಕೂರು ಸುದ್ದಿ ಮಾಧ್ಯಮ” ವರ್ಷಾಚರಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ.
ನನ್ನ ಮಿತ್ರನಾದ ಮತ್ತು “ನಮ್ಮ ತುಮಕೂರು ಸುದ್ದಿ ಮಾಧ್ಯಮ”ದ ಸಂಪಾದಕರಾದ ಜಿ.ಎಲ್. ನಟರಾಜುರವರ ಕಾರ್ಯ ವೈಕರಿಯು “ಸಾಧನೆಯ ಹಾದಿಯಲ್ಲಿ” ಹೀಗೆ ನಿರಂತರವಾಗಿಲಿ ಸಾಗುತ್ತಿರಲಿ ಎಂದು ಈ ಸುಸಂದರ್ಭದಲ್ಲಿ ಶುಭ ಹಾರೈಸುತ್ತೇನೆ.
ನಮ್ಮ ತುಮಕೂರು ಸುದ್ದಿ ಮಾಧ್ಯಮದ ವರ್ಷಾಚರಣೆಯ ಈ ಸುಸಂದರ್ಭದಲ್ಲಿ ಮಾಧ್ಯಮದ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಮಾಧ್ಯಮದ ಸಂಪಾದಕರಿಗೆ, ವರದಿಗಾರರಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ವಿಕ್ಷಕ ಮತ್ತು ಓದುಗಾರ ಮಿತ್ರರಿಗೆ ಶುಭ ಕೋರುತ್ತೇನೆ.
– ಯತೀಶ್ ಕುಮಾರ್
ಚಿತ್ರಕಲಾ ಶಿಕ್ಷಕರು ಹಾಗೂ
ರಾಜ್ಯ ಮಟ್ಟದ “ಶಿಕ್ಷಕ ರತ್ನ ಪ್ರಶಸ್ತಿ” ಪುರಸ್ಕೃತರು
ತುಮಕೂರು.