ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ನೀವೇ ಸಾಕ್ಷಿಯಾಗಿದ್ದು, ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ಸದಾ ನಿಮ್ಮೊಂದಿಗಿರುವ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮತ್ತೊಮ್ಮೆ ಆರಿಸಿ ತನ್ನಿ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಗೇವಾಡಿ ಕ್ರಾಸ್ ದಿಂದ ಬೆಂಡಿಗೇರಿ ಗ್ರಾಮದವರೆಗಿನ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 2.50 ಕೋಟಿ ರೂ,ಗಳು ಮಂಜೂರಾಗಿದ್ದು, ಬೆಂಡಿಗೇರಿ ಗ್ರಾಮದಲ್ಲಿ ಸೋಮವಾರ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾಮೀಣ ಕ್ಷೇತ್ರದ ಜನರು ಅತ್ಯಂತ ಮುಗ್ದರು ಹಾಗೂ ಪ್ರಾಮಾಣಿಕರು. ಯಾರು ಡೋಂಗಿ, ಯಾರು ಪ್ರಾಮಾಣಿಕರು ಎನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ . ಸುಳ್ಳು ಹೇಳಿ ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಈ ಬಾರಿ ರಾಜ್ಯದಲ್ಲೇ ಅತ್ಯಧಿಕ ಮತಗಳ ಅಂತರದಿಂದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗೆಲ್ಲಿಸಲು ಪಣತೊಡೋಣ ಎಂದು ಚನ್ನರಾಜ ಹೇಳಿದರು.
ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಹಿರಿಯರು, ಪ್ರಕಾಶ ಪಾಟೀಲ, ರವಿ ಮೇಳೆದ, ಸಿದ್ದಣ್ಣ ಹಾವಣ್ಣವರ, ಬ್ರಹ್ಮಾ ದೊಡಮನಿ, ಬಾಳೇಶ ಮಾಡಲಗಿ, ಬಸಮ್ಮ ಚೌಹಾನ್, ಮುರುಸಿದ್ದ ಬಾಳೇಕುಂದ್ರಿ, ಚಂದ್ರು ಚಂದು, ರಾಜು ಕುಡಚಿ, ಆದರ್ಶ ತರಗಾರ, ಮಂಜು ಮೇಳೆದ, ಶಂಕು ಮೇಳೆದ, ಈರಣ್ಣ ಚಂದು, ಮಲ್ಲಪ್ಪ ಅನಿಗೊಳ, ಚಿದಂಬರ ಕುಡಚಿ, ಮಲಕಾಜಿ ಕುಡಚಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


