ಸಿದ್ಧರಾಮಯ್ಯರ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಯ ಕಲ್ಪನೆ ಇಲ್ಲದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಬಜೆಟ್ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ ಯಡಿಯೂರಪ್ಪ, 85 ಸಾವಿರ ಕೋಟಿ ಸಾಲ ಮಾಡುತ್ತೇನೆ ಎಂದಿದ್ದಾರೆ.
ಈ ಸಾಲದ ಹೊರೆ ರಾಜ್ಯದ ಜನರ ಮೇಲೆ ಬೀಳಲಿದೆ. 3 ಘಂಟೆ ಬಜೆಟ್ ಮಂಡನೆ ಮಾಡಿದ ಸಿಎಂ, ಸುಧೀರ್ಘ ಭಾಷಣದಲ್ಲಿ ಕೇಂದ್ರ ಸರ್ಕಾರ ಹಾಗೂ ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರವನ್ನು ಅನಗತ್ಯವಾಗಿ ಟೀಕಿಸುವುದರಲ್ಲಿ ವ್ಯರ್ಥ ಮಾಡಿದ್ದಾರೆ. ನನ್ನ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆದ ಬಜೆಟ್ ಮಂಡನೆಯ ಬಗ್ಗೆ ಇಲ್ಲಸಲ್ಲದ್ದನ್ನು ಮಾತನ್ನಾಡಿ, ಸಾಧಿಸಿದ ಪ್ರಗತಿ ಹಾಗೂ ಆರ್ಥಿಕ ಸದೃಢತೆಯನ್ನು ಮರೆಮಾಚಿ ಬಜೆಟ್ ಮಂಡನೆಯ ಪವಿತ್ರ ಸಮಯವನ್ನು ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಂಡಿದ್ದು ಖಂಡನೀಯ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಎಲ್ಲಾ ಘೋಷಣೆಗಳನ್ನು ಜಾರಿಗೊಳಿಸುತ್ತೇವೆ ಎಂದಿದ್ದ ಕಾಂಗ್ರೆಸ್, ಇಂದು ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ಹಣ ಬೇಕಾಗಿದ್ದು, ಇದಕ್ಕಾಗಿ ಇಡೀ ಆರ್ಥಿಕ ವರ್ಷವೇ ಬೇಕಾಗಬಹುದು ಎಂದು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.
ಅದಕ್ಕೆ ಬೇಕಾದ ಸಂಪನ್ಮೂಲಗಳ ಕ್ರೂಢೀಕರಣದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಇಂದಿನ ಬಜೆಟ್ ಕೇಂದ್ರ ಹಾಗೂ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ನೀತಿಗಳನ್ನು ವಿರೋಧಿಸುವುದೇ ಆಗಿತ್ತು. ಇಂದಿನ ಬಜೆಟ್ ಮಂಡನೆ ಬಜೆಟ್ ಮಂಡನೆಯಾಗಿರಲಿಲ್ಲ. ಯಾವುದೋ ರಾಜಕೀಯ ಭಾಷಣದಂತಿತ್ತು. ಈಗಾಗಲೇ ಯೋಜನೆಗಳ ಜಾರಿ ವಿಚಾರದಲ್ಲಿ ಇಲ್ಲದ ಕಂಡೀಷನ್‌ಗಳನ್ನು ಹಾಕಿ, ಜನರಿಗೆ ಮೋಸ ಮಾಡಿದ್ದು, ಈಗ ತೆರಿಗೆಯ ಹೆಸರಿನಲ್ಲಿ ಬರೆ ಎಳೆಯುವುದು ಖಚಿತ. ತೆರಿಗೆ ಹೆಚ್ಚಳದ ಹಲವು ವಿಚಾರಗಳು ಇಂದಿನ ಬಜೆಟ್‌ನಲ್ಲಿದೆ ಎಂದು ಪತ್ರಿಕಾ ಹೇಳಿಕೆಯನ್ನು ಬಿ. ಎಸ್. ಯಡಿಯೂರಪ್ಪ ಬಿಡುಗಡೆಗೊಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


