ಮಧುಗಿರಿ: ಕಳಪೆ ರಸ್ತೆ ಕಾಮಕಾರಿಯನ್ನು ಪ್ರಶ್ನಿಸಿದ ಸಾರ್ವಜನಿಕರ ಜೊತೆಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿದ ಘಟನೆ ಮಧುಗಿರಿ ತಾಲೂಕು ಐಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸರ್ ಐ. ಡಿ. ಹಳ್ಳಿ ಮಾರ್ಗವಾಗಿ ಜನಕಲೋಟಿ ಗ್ರಾಮಕ್ಕೆ ಸುಮಾರು 1 ಕೋಟಿ ವೆಚ್ಚದಲ್ಲಿ 6 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣವಾಗಿದ್ದು ತುಂಬಾ ಕಳಪೆಯಿಂದ ಕೂಡಿದೆ.
ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಥಳ ತನಿಖೆಗೆ ಆಗಮಿಸಿದ್ದು, ಈ ವೇಳೆ ಪಿಡಬ್ಲ್ಯೂಡಿ ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ಏಕ ವಚನದಲ್ಲೇ ಮಾತನಾಡಿದ್ದು, ಉದ್ಧಟತನದಿಂದ ವರ್ತಿಸಿದ್ದಾರೆ.
ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು, ನೀವು ಏನು ಮಾಡಿಕೊಳ್ಳುತ್ತೀರಿ ಮಾಡ್ಕೊಳ್ಳಿ, ಹೋಗೋಲೇ ಎಂದು ಏಕ ವಚನದಲ್ಲೇ ನಿಂದಿಸಿ ಕಾರು ಹತ್ತುತ್ತಿದ್ದು, ಈ ವೇಳೆ ಕಾರಿಗೆ ಅಡ್ಡ ನಿಂತ ಸಾರ್ವಜನಿಕರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5