ಇಂದಿನಿಂದ ನೇಪಾಳದ ರಾಜಧಾನಿ ಕಠಂಡುವಿನಲ್ಲಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನ ನಿಷೇಧಿಸಲಾಗಿದೆ. ಈ ಕುರಿತು ನಗರದ ಉನ್ನತ ಅಧಿಕಾರಿಯೊಬ್ಬರು ಭಾನುವಾರ ಮಾಹಿತಿ ನೀಡಿದ್ದಾರೆ. ಪ್ರಭಾಸ್ ನಟನೆಯ ‘ಅಧಿಪುರುಷ್’ ಸಿನಿಮಾದಲ್ಲಿ ಸೀತಾ ಮಾತೆಯ ಕುರಿತು ಆಕ್ಷೇಪಾರ್ಹ ಪದ ಬಳಕೆ ಆರೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
‘ಆಧಿಪುರುಷ’ ಸಿನಿಮಾದಲ್ಲಿರುವ ಸೀತಾ ಮಾತೆಯ ಕುರಿತ ಡೈಲಾಗ್ ಗೆ ಕತ್ತರಿ ಹಾಕದೆ ಯಾವುದೇ ಹಿಂದಿ ಸಿನಿಮಾಗಳ ಪ್ರದರ್ಶನ ಸಾಧ್ಯವಿಲ್ಲ. ಸಿನಿಮಾಗಳು ಪ್ರದರ್ಶನವಾದರೆ ಭಾರೀ ಸಮಸ್ಯೆ ಉಂಟಾಗಬಹುದು ಎಂದು ಕಠಂಡು ಮೇಯರ್ ಬಾಲೇಂದ್ರ ಷಾ ಹೇಳಿದ್ದಾರೆ.
ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ನಿಷೇಧಿಸಿ ಕಂಡು ಮೇಯರ್ ಬಲೇನ್ ಶಾ ಅವರ ಸೆಕ್ರೆಟರಿಯೇಟ್ ಆದೇಶ ಹೊರಡಿಸಿದೆ. ‘ಆದಿಪುರುಷ್’ ಚಿತ್ರದಲ್ಲಿ ಜಾನಕಿ(ಸೀತೆ)ಯನ್ನು “ಭಾರತದ ಮಗಳು” ಎಂದು ಕರೆಯುವ ಸಂಭಾಷಣೆಯ ಬಗ್ಗೆ ವಿವಾದ ಭುಗಿಲೆದ್ದ ನಂತರ ಈ ಆದೇಶ ಹೊರಡಿಸಲಾಗಿದೆ. ‘ಆದಿಪುರುಷ್’ ಚಿತ್ರದಿಂದ “ಆಕ್ಷೇಪಾರ್ಹ ಭಾಗಗಳನ್ನು ತೆಗೆದುಹಾಕಿದರೆ ಚಿತ್ರ ಪ್ರದರ್ಶನದ ಮೇಲಿನ ನಿಷೇಧವನ್ನು ತೆಗೆದುಹಾಕಲಾಗುವುದು ಎಂದು ಬಾಲೆನ್ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


