ಪಾವಗಡ: ಪಟ್ಟಣದ ಸರ್ಕಾರಿ YER ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿಯಿಂದ ಬಿ. ಗ್ರೇಡ್ ನೀಡಿರುವುದಾಗಿ ಪ್ರಾಂಶುಪಾಲರಾದ ಡಾ. ಎನ್. ಶ್ರೀಧರ್ ಹರ್ಷ ತಿಳಿಸಿದ್ದರು.
ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರೋಪದಲ್ಲಿ ಮಾತನಾಡಿದ ಅವರು, ಫೆಬ್ರವರಿ 18 ಮತ್ತು 19 ರಂದು ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದ್ದು, ಸಮಿತಿಯ ಮುಖ್ಯಸ್ಥ ಪ್ರೊ.ಮಹಮದ್ ಇಕ್ಬಾಲ್ ಅಲಿ, ವೇದಂ, ಭೇಟಿ ನೀಡಿ ಪರಿಶೀಲಿಸಿ ಕಾಲೇಜಿನ ಕಾರ್ಯವೈಖಾಲಿ ಬಗ್ಗೆ ಗುಣಗಾನ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನೂ ಕಳೆದ ಸಾಲಿನಲ್ಲಿ ಕೂಡ ಕಾಲೇಜು ಬಿ ಗ್ರೇಡ್ ನ್ನು ಪಡೆದುಕೊಂಡಿತ್ತು. ಈ ಬಾರಿಯೂ ಬಿ ಗ್ರೇಡ್ ಪಡೆದುಕೊಂಡಿದೆ.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB