nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿಪಟೂರು ನಗರಕ್ಕೆ ಸ್ವಾಗತಿಸುತ್ತಿರುವ ಗುಂಡಿಗಳ ಸಾಲು: ಎಲ್ಲೆಲ್ಲೂ ಗುಂಡಿಗಳು, ಕೆಸರುಮಯ ರಸ್ತೆ

    October 27, 2025

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಾಗಲು ನೋಂದಣಿ ಮಾಡಿಸಿ: ಡಿ.ಪಿ.ವೇಣುಗೋಪಾಲ್

    October 26, 2025

    ರಾಗಿ ಖರೀದಿ ಕೇಂದ್ರ: ಬೋಕರ್ ಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು: ಶಾಸಕ ರಂಗನಾಥ್

    October 26, 2025
    Facebook Twitter Instagram
    ಟ್ರೆಂಡಿಂಗ್
    • ತಿಪಟೂರು ನಗರಕ್ಕೆ ಸ್ವಾಗತಿಸುತ್ತಿರುವ ಗುಂಡಿಗಳ ಸಾಲು: ಎಲ್ಲೆಲ್ಲೂ ಗುಂಡಿಗಳು, ಕೆಸರುಮಯ ರಸ್ತೆ
    • ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಾಗಲು ನೋಂದಣಿ ಮಾಡಿಸಿ: ಡಿ.ಪಿ.ವೇಣುಗೋಪಾಲ್
    • ರಾಗಿ ಖರೀದಿ ಕೇಂದ್ರ: ಬೋಕರ್ ಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು: ಶಾಸಕ ರಂಗನಾಥ್
    • ಜಾತಿ ನಿಂದನೆ: ರಮೇಶ್ ಕತ್ತಿ ವಿರುದ್ಧ ಕ್ರಮಕ್ಕೆ ವಾಲ್ಮೀಕಿ ನಾಯಕರಿಂದ ಒತ್ತಾಯ
    • ಕನಕ ಜಯಂತಿ: ಸಾಧಕರ ಸನ್ಮಾನಕ್ಕಾಗಿ ಅರ್ಜಿ ಆಹ್ವಾನ
    • ನವೆಂಬರ್ 3ರಂದು ಪುಸ್ತಕಗಳ ಬಹಿರಂಗ ಹರಾಜು
    • ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ನ್ಯಾಯ ನೀಡುವುದು ಸರ್ಕಾರಗಳ ಕರ್ತವ್ಯ: ಶ್ರೀ ನಂಜಾವದೂತ ಸ್ವಾಮೀಜಿ
    • ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಮಾಜಿ ಶಾಸಕರಿಗೆ ತಿವಿದ ಹೋರಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 2026ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು | 343 ಕೆರೆಗಳಿಗೆ ಎತ್ತಿನಹೊಳೆ ನೀರು
    ಕೊರಟಗೆರೆ April 17, 2025

    2026ಕ್ಕೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು | 343 ಕೆರೆಗಳಿಗೆ ಎತ್ತಿನಹೊಳೆ ನೀರು

    By adminApril 17, 2025No Comments3 Mins Read
    parameshwar

    ವರದಿ : ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ : 2026ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ,ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ 343 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ 3.44 ಟಿಎಂಸಿ ಮತ್ತು ಕುಡಿಯುವ ನೀರಿಗೆ 2.29 ಟಿಎಂಸಿ ಸೇರಿ ಒಟ್ಟು 5.74 ಟಿಎಂಸಿ ನೀರು ಹರಿಯಲಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.


    Provided by
    Provided by
    Provided by

    ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾ.ಪಂ. ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ 24 ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ನಮ್ಮ ಸರಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವ್ರು ಅಂತಾರೇ. ಹಿಂದಿನ ವರ್ಷದ ಬಜೆಟ್ 3 ಲಕ್ಷ 71 ಸಾವಿರ ಕೋಟಿ. ಪ್ರಸ್ತುತ ವರ್ಷದ ಬಜೆಟ್ ಗಾತ್ರ 4 ಲಕ್ಷ 9 ಸಾವಿರ ಕೋಟಿ. ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೊತ್ತಿಲ್ಲವೇ. ಎತ್ತಿನಹೊಳೆ ಯೋಜನೆಯ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಯ ಅಭಿವೃದ್ದಿಯ ನನ್ನ ಹೆಜ್ಜೆಗುರುತು ಸಾಕ್ಷಿಯಾಗಿ ಉಳಿಯಲಿವೆ ಎಂದರು.

    ನಾನು ಮಧುಗಿರಿ ಕ್ಷೇತ್ರದ ಶಾಸಕನಾಗಿದ್ದಾಗ ಹೇಮಾವತಿ ಯೋಜನೆಯ ನೀರಾವರಿ ಯೋಜನೆಯ ರೂಪುರೇಖೆ ತಯಾರಿಸುವಾಗ ವಿರೋಧ ಪಕ್ಷದವರು ಬಕೆಟ್‍ನಲ್ಲಿ ನೀರು ತರ್ತಾರಾ ಅಂಗ ವ್ಯಂಗ್ಯ ಮಾಡಿದ್ರು. ಈಗ ಹೇಮಾವತಿ ನೀರಿನ ಯೋಜನೆಯು ತುಮಕೂರು ಜಿಲ್ಲೆಯ ಸಾವಿರಾರು ರೈತರಿಗೆ ನೀರಾವರಿಯ ವರದಾನ ಆಗಿದೆ. ಟೀಕೆ ಮಾಡಿದ ನಾಯಕರಿಗೆ ನನ್ನ ಕೆಲಸದ ಹೆಜ್ಜೆಗುರುತು ಉತ್ತರ ನೀಡುತ್ತೆ ಎಂದು ತಿಳಿಸಿದರು.

    ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ 2013ರಿಂದ 2018ರ 5 ವರ್ಷದ ಅವಧಿಯಲ್ಲಿ ನಮ್ಮ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ನೀರಾವರಿ ಯೋಜನೆಗೆ 58 ಸಾವಿರ ಕೋಟಿ ಅನುದಾನ ನೀಡಿದೆ. ನಮ್ಮ ರಾಜ್ಯದ ರೈತರು ಉಳುಮೆ ಮಾಡಿ ಬೆಳೆ ಬೆಳೆಯುವ ಭೂಮಿ 1 ಕೋಟಿ 28 ಲಕ್ಷ ಹೇಕ್ಟರ್. ನೀರಾವರಿ ಯೋಜನೆಯ ಭೂಮಿ ಕೇವಲ 42.32 ಲಕ್ಷ ಹೆಕ್ಟರ್ ಅಷ್ಟೆ. ಇನ್ನಳಿದ 86 ಲಕ್ಷ ಹೆಕ್ಟರ್ ಭೂಮಿ ಮಳೆಯಾಶ್ರಿತ ಆಗಿದೆ. ರೈತರು ಇನ್ನೂ ಹೆಚ್ಚು ನೀರಾವರಿಗೆ ಆದ್ಯತೆ ನೀಡಬೇಕಿದೆ ಎಂದರು.

    ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರೀಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ.ಕೆ, ಸಿಪಿಐ ಅನಿಲ್, ತಾಪಂ ಇಓ ಅಪೂರ್ವ, ಸಣ್ಣನೀರಾವರಿ ಎಇಇ ರಮೇಶ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಬ್ಲಾಕ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್, ಉಪಾಧ್ಯಕ್ಷ ದೀಪು, ರಘುವೀರ್, ಮಹಿಳಾಧ್ಯಕ್ಷೆ ಜಯಮ್ಮ ಸೇರಿದಂತೆ ಇತರರು ಇದ್ದರು.

    ಪೂರ್ವಭಾವಿ ಸಭೆಯ ಹೈಲೇಟ್:

    * 2026ರ ಜೂನ್‍ಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು.

    * 453ಕೋಟಿ ವೆಚ್ಚದ ಕಾಮಗಾರಿಗಳಿಗೆ ಏ.19ರಂದು ಚಾಲನೆ.

    * ನೀರಾವರಿ ಮತ್ತು ಕುಡಿಯುವ ನೀರಿಗೆ 5.74ಟಿಎಂಸಿ ನಿಗಧಿ.

    * ತುಮಕೂರು ಜಿಲ್ಲೆಯ 343 ಕೆರೆಗಳಿಗೆ ಎತ್ತಿನಹೊಳೆ ನೀರು.

    * ಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿಯ ಶಾಶ್ವತ ಹೆಜ್ಜೆ ಗುರುತು.

    * ನೀರಾವರಿ ಕನಸು ನನಸು ಮಾಡುವತ್ತ ಗೃಹಸಚಿವ ಯಶಸ್ವಿ ಹೆಜ್ಜೆ

    * ಕೊರಟಗೆರೆ ಕ್ಷೇತ್ರದಲ್ಲಿ ಬೃಹತ್ ನೀರಾವರಿ ಸಮಾವೇಶಕ್ಕೆ ಸಿದ್ದತೆ.

    104 ಕೆರೆಗಳಿಗೆ ಎತ್ತಿನಹೊಳೆ ನೀರು:

    ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾದ 36 ಕೆರೆ, ಪುರವಾರದ 8 ಕೆರೆ, ಕಸಬಾದ 8 ಕೆರೆ, ಹೊಳವನಹಳ್ಳಿಯ 10 ಕೆರೆ, ಕೋಳಾಲದ 25 ಕೆರೆ ಮತ್ತು ಚನ್ನರಾಯನದುರ್ಗದ 17 ಕೆರೆಗಳು ಸೇರಿ ಒಟ್ಟು 104 ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಬಯಲುಸೀಮೆ ರೈತರ ನೀರಾವರಿ ಬೇಡಿಕೆಯಂತೆ ನಾನು ನೀಡಿದ ಎತ್ತಿನಹೊಳೆ ಯೋಜನೆಯ ಕಾರ್ಯಗತದ ಹೆಜ್ಜೆ ಗುರುತು ಹಾಕಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

    453 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ:

    ಸಣ್ಣ ನೀರಾವರಿ ಇಲಾಖೆಯ 288 ಕೋಟಿ, ಪಿಡ್ಲ್ಯೂಡಿ ಇಲಾಖೆಯ 35 ಕೋಟಿ, ನರೇಗಾ ಯೋಜನೆಯ 46 ಕೋಟಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ 34 ಕೋಟಿ, ಪಂಚಾಯತ್ ರಾಜ್ ಇಲಾಖೆಯ 23 ಕೋಟಿ, ಬೆಸ್ಕಾಂ ಇಲಾಖೆಯ 17 ಕೋಟಿ ಸೇರಿ ಒಟ್ಟು 453 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಏ.19ರಂದು ಚಾಲನೆ ನೀಡಿ ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ದಿಯ ಪಥದತ್ತಾ ಕೊಂಡ್ಯೊಯುತ್ತೇನೆ.

    —  ಡಾ.ಜಿ.ಪರಮೇಶ್ವರ. ಗೃಹ ಸಚಿವ. ಕೊರಟಗೆರೆ


    ಕೊರಟಗೆರೆ ಕ್ಷೇತ್ರದ 104 ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಕನಸು ನನಸಾಗಲಿದೆ. ಏ.19ರಂದು 453 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಬಯಲುಸೀಮೆ ಕೊರಟಗೆರೆ ಕ್ಷೇತ್ರದ ರೈತರ ಕನಸು ನನಸಾಗುವ ಕಾಲ ಸನಿಹ ಬಂದಿದೆ. ಗೃಹ ಸಚಿವರು ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅನುದಾನ ನೀಡಿ ಅಭಿವೃದ್ದಿಯ ಆಧ್ಯತೆ ನೀಡಿದ್ದಾರೆ.

    — ಪ್ರಭು ಜಿ., ಜಿಪಂ ಸಿಇಓ. ತುಮಕೂರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    admin
    • Website

    Related Posts

    ಭೂಮಿ ಕಳೆದುಕೊಳ್ಳುವ ರೈತರಿಗೆ ಸಮಾನ ನ್ಯಾಯ ನೀಡುವುದು ಸರ್ಕಾರಗಳ ಕರ್ತವ್ಯ: ಶ್ರೀ ನಂಜಾವದೂತ ಸ್ವಾಮೀಜಿ

    October 26, 2025

    ತುಂಬಾಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ರಮೇಶ್ ಆಯ್ಕೆ

    October 25, 2025

    ವಿದ್ಯಾರ್ಥಿಗಳ ಬಳಿಯೇ ಅಕ್ರಮ ‘ಸುಲಿಗೆ’ : ರಣಧೀರರ ವೇದಿಕೆ ದೂರಿನ ಬೆನ್ನಲ್ಲೇ SDA ಸಸ್ಪೆಂಡ್!

    October 24, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತಿಪಟೂರು

    ತಿಪಟೂರು ನಗರಕ್ಕೆ ಸ್ವಾಗತಿಸುತ್ತಿರುವ ಗುಂಡಿಗಳ ಸಾಲು: ಎಲ್ಲೆಲ್ಲೂ ಗುಂಡಿಗಳು, ಕೆಸರುಮಯ ರಸ್ತೆ

    October 27, 2025

    ತಿಪಟೂರು: ತಿಪಟೂರು ನಗರಕ್ಕೆ ಹಾಸನ, ಅರಸೀಕೆರೆ, ಬೆಂಗಳೂರು, ಹುಳಿಯಾರು ಹಾಗೂ ತುರುವೇಕೆರೆ ಕಡೆಯಿಂದ ಪ್ರವೇಶಿಸಲು ಸಾಧ್ಯವಿದ್ದರೂ, ಈ ರಸ್ತೆಯಲ್ಲಿ ಪ್ರಯಾಣಿಸುವುದು…

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಾಗಲು ನೋಂದಣಿ ಮಾಡಿಸಿ: ಡಿ.ಪಿ.ವೇಣುಗೋಪಾಲ್

    October 26, 2025

    ರಾಗಿ ಖರೀದಿ ಕೇಂದ್ರ: ಬೋಕರ್ ಗಳಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು: ಶಾಸಕ ರಂಗನಾಥ್

    October 26, 2025

    ಜಾತಿ ನಿಂದನೆ: ರಮೇಶ್ ಕತ್ತಿ ವಿರುದ್ಧ ಕ್ರಮಕ್ಕೆ ವಾಲ್ಮೀಕಿ ನಾಯಕರಿಂದ ಒತ್ತಾಯ

    October 26, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.