ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 164 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಈಗ ಮುಖ್ಯಮಂತ್ರಿ ನಿಧಿಯಿಂದ 50 ಕೋಟಿ ಅನುದಾನ ಬಂದಿದ್ದು, ಇನ್ನೂ ಸಾಕಷ್ಟು ಅನುದಾನ ತಂದು ಕೊರಟಗೆರೆ ಅಭಿವೃದ್ಧಿ ಮಾಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಜಟ್ಟಿ ಅಗ್ರಹಾರ ಗ್ರಾಮದಲ್ಲಿ ನಡೆದ ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನ ರೈತಗೆ ಭೂ ಪರಿಹಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಆಶೀರ್ವಾದದಿಂದ ಮೂರು ಬಾರಿ ಗೃಹ ಸಚಿವನಾಗಿದ್ದೇನೆ. ಈ ರಾಜ್ಯದ ಲಕ್ಷಾಂತ ಹೆಣ್ಣು ಮಕ್ಕಳ ರಕ್ಷಣೆ, ಮಕ್ಕಳ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ, ಸರ್ಕಾರಿ ಆಸ್ತಿ ರಕ್ಷಣೆ, ಮಾಡುವುದು ನಮ್ಮ ರಕ್ಷಣೆ ಆಗಿದ್ದು, ಅದರ ಜೊತೆಗೆ ಕೊರಟಗೆರೆ ಜನತೆಯನ್ನ ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಕೇಂದ್ರ ಸರ್ಕಾರಿಂದ ಈಗಾಗಲೇ ಸಣ್ಣ ನೀರಾವರಿ ಇಲಾಖೆಗೆ ೩೦ ಕೋಟಿ ಅನುದಾನ ಬಂದಿದ್ದು ಆ ಕೆಲಸಗಳನ್ನ ಪ್ರಾರಂಭ ಮಾಡಲು ತಿಳಿಸಿದ್ದೇನೆ ಎಂದರು.
ನಮ್ಮ ಕ್ಷೇತ್ರದಲ್ಲಿ ಬಹುಕೋಟಿ ಅನುದಾನದಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ಬರದಿಂದ ಸಾಗುತ್ತಿದ್ದು, ಚಿಕ್ಕಬಳ್ಳಾಪುರ ಕೋಲಾರ ತುಮಕೂರು ಹಾಸನ ಕುಡಿಯುವ ನೀರಿಗೆ ತೊಂದರೆ ಆಗುತ್ತಿತ್ತು. ನಮ್ಮ ತುಮಕೂರು 2 ಸಾವಿರ ಅಡಿ ಬೋರ್ ವೆಲ್ ಕೊರೆಸಿದರು ನೀರು ಸಿಗುತ್ತಿಲ್ಲ.. ಕೋಲಾರ ಜಿಲ್ಲೆಯಲ್ಲಿ ಜನ ಊರು ಬಿಡುತ್ತಿದ್ದಾರೆ. ವೀರಪ್ಪ ಮೊಯ್ಲಿ, ಮುನಿಯಪ್ಪ ಸೇರಿದಂತೆ ಹೋರಾಟ ಮಾಡಿದ್ರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಯೋಜನೆ ಜಾರಿಗೆ ತಂದರು. ಮಳೆಗಾಲದಲ್ಲಿ ಸಕಲೇಶಪುರದಲ್ಲಿ ಇರುವ ಎತ್ತಿನಹೊಳೆ ಎನ್ನವ ಜಾಗದಲ್ಲಿ 24 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಆ ನೀರನ್ನ ಅರಸೀಕೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯುವ ನೀರಿಗಾಗಿ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
2026ರ ಜೂನ್ ನಲ್ಲಿ ಎತ್ತಿನಹೊಳೆ ನೀರು ನಮ್ಮ ಜಿಲ್ಲೆಗೆ ಹರಿಯಲಿದೆ. ನಮ್ಮ ತಾಲೂಕಿನ ಬೈರಗೊಂಡ್ಲು ಸಮೀಪ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ ಅದರಲ್ಲೂ ರಾಜಕಾರಣ ಮಾಡಲು ಬಂದರೂ ನಮ್ಮ ರೈತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಯೋಜನೆ ಬದಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಎರಡು ಬಫರ್ ಡ್ಯಾಂ ಮಾಡಿ ನೀರು ಶೇಖರಣೆ ಮಾಡಲಿದ್ದಾರೆ. ಇದೆ ಡ್ಯಾಂ ನಮ್ಮ ತಾಲೂಕಿನಲ್ಲಿ ನಿರ್ಮಾಣ ಮಾಡಿದರೆ ತಾಲೂಕಿನ ೩ ಹೋಬಳಿಗಳಲ್ಲಿ ಅಂರ್ತಜಲ ವೃದ್ಧಿಯಾಗುತಿತ್ತು. ಅದಕ್ಕೆ 70 ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ.
ಇತ್ತೀಚಿಗೆ ಕಬ್ಬಿನ ಬೆಳೆ ಹೆಚ್ಚಳಕ್ಕೆ ರೈತರು ಹೋರಾಟ ಮಾಡಿದರು. ಕೇಂದ್ರ ಸರ್ಕಾರ ಮಾಡಬೇಕಾದ ಹೆಚ್ಚಳ ಅದು, 3,300 ಟನ್ 3,300 ರೂ ನಿಗದಿ ಮಾಡಬೇಕಿತ್ತು. ಆದರೆ ನಮ್ಮ ರೈತರು ಉಳಿಬೇಕು ಎಂದು ಅವರ ನೆರವಿಗೆ ಹೋಗಿದ್ದೇವೆ. ಅದರಂತೆ 150 ರೂ ಹೆಚ್ಚು ನಮ್ಮ ಸರ್ಕಾರ ನೀಡಲಾಗುತ್ತಿದೆ. ಮೆಕ್ಕೇಜೋಳದ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಒತ್ತಾಯ ಮಾಡಿದರು ಅದಕ್ಕೂ ನಮ್ಮ ಸರ್ಕಾರ ಸ್ಪಂದಿಸಿದ್ದೇವೆ ಎಂದರು.
ನಾನು ಈ ಹಿಂದೆ ಶಿಕ್ಷಣ ಸಚಿವ ಆಗಿದ್ದ ಸಂದರ್ಭದಲ್ಲಿ ತುಮಕೂರಿಗೆ ವಿಶ್ವವಿದ್ಯಾನಿಲಯ ತಂದಿದ್ದೇನೆ. ಮೊನ್ನೆ ತಾನೇ ಅದರೊಳಗೆ ಕ್ಯಾಂಪಸ್ ಉದ್ಘಾಟನೆ ಮಾಡಲಾಗಿದೆ. 200 ಎಕರೆ ಜಾಗದಲ್ಲಿ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳು ಅಂಕ ಪಡೆಯುವುದರ ಜೊತೆಗೆ ಸಾಮಾನ್ಯ ಜ್ಞಾನ ಕೂಡ ಬೆಳಸಿಕೊಳ್ಳಬೇಕು. ಕೊರಟಗೆರೆಯಿಂದ ಇಬ್ಬರು ಐಎಎಸ್ ಅಧಿಕಾರಿಯಾಗಿ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ನೀವು ಕೂಡ ಅವರಂತೆ ಉತ್ತಮ ಸ್ಥಾನಕ್ಕೆ ಬಂದು ಕೊರಟಗೆರೆಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಪ್ರಭು, ಎಸ್ಪಿ ಆಶೋಕ್, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ.ನಾಗಣ್ಣ, ಎಸಿ ಕೊಟ್ಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಶ್ವಥ್ ನಾರಾಯಣ್, ಅರಕೆರೆ ಶಂಕರ್, ಜಯಮ್ಮ ಗ್ರಾ.ಪಂ. ಅಧ್ಯಕ್ಷ ಸಿ.ಡಿ.ಪ್ರಭಾಕರ್, ಅರ್ ಬಿ ಎಸ್ ಬಸವರಾಜು, ಕೆಪಿಸಿಸಿ ಸದಸ್ಯರಾದ ಎ.ಡಿ.ಬಲರಾಮಯ್ಯ, ದಿನೇಶ್, ಮುಖಂಡರಾದ, ಮಹಾಲಿಂಗಪ್ಪ, ಕವಿತಮ್ಮ, ವೆಂಕಟೇಶ್, ಹನುಮಾನ್, ಓಬಳರಾಜು, ನಂದೀಶ್, ಪುಟ್ಟನರಸಪ್ಪ, ಎಲ್.ರಾಜಣ್ಣ, ಮಹೇಶ್, ವಿನಯ್‌ಕುಮಾರ್, ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮಗಳ ಮುಖ್ಯಾಂಶಗಳು :
* ಎತ್ತಿನಹೊಳೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಂಡ ಜಮೀನಿನ ರೈತಗೆ ಭೂ ಪರಿಹಾರ.
* ಅನ್ನಭಾಗ್ಯ ಆಹಾರ ಅದಾಲತ್,
* ಅನ್ನಸುವಿಧಾ ಯೋಜನೆಯಡಿ ಪಡಿತರ ವಿತರಣೆ.
* ಪ್ರಥಮ ದರ್ಜೆ ಕಾಲೇನಿನಲ್ಲಿ ನೂತನ ಕಟ್ಟಡ ಉದ್ಘಾಟನೆ.
* ಪೌರಕಾರ್ಮಿಕರಿಗೆ ಮನೆಗಳ ಉದ್ಘಾಟನೆ ಹಾಗೂ ಅಪಘಾತ ವಿಮೆ ವಿತರಣೆ.
* ಜಿಪಂ ವತಿಯಿಂದ ಇ–ಸ್ವತ್ತು ಅಭಿಯಾನ.
* ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನದ ಜೀಣೋದ್ಧಾರ ಕಾಮಗಾರಿ.
* ಕಾಲೇಜಿ ಮೈದಾನದಲ್ಲಿ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು.
ನಮ್ಮ ಜಿಲ್ಲೆ 3 ಸಾವಿರ ಎಕರೆ ಭೂಮಿ ಏತ್ತಿನಹೊಳೆ ಯೋಜನೆಗೆ ತೆಗೆದುಕೊಳ್ಳಲಾಗಿದೆ. 1 ಸಾವಿರ ಕೋಟಿ ಹಣ ರೈತರಿಗೆ ನೀಡಬೇಕಾಗಿದೆ. ಇದರಲ್ಲಿ 840 ಕೋಟಿ ನೀಡಲಾಗಿದೆ ಇನ್ನೂ 80 ಕೋಟಿ ಬಾಕಿ ಇದೆ. ಇಂದು 58 ಜನ ರೈತರಿಗೆ 22 ಎಕರೆ ಭೂಮಿಗೆ 5 ಕೋಟಿ 53 ಲಕ್ಷ ಹಣದ ಚೆಕ್ ನಮ್ಮ ರೈತರಿಗೆ ನೀಡಲಾಗಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಕೋಟಿ ರೂಪಾಯಿ ನನ್ನ ವೈಯಕ್ತಿಕವಾಗಿ ನೀಡುತ್ತೇನೆ.
— ಡಾ.ಜಿ.ಪರಮೇಶ್ವರ್, ಗೃಹ ಸಚಿವ ಕರ್ನಾಟಕ ಸರ್ಕಾರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


