ಗದಗ: ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವ ಇದೆ. ಆದ್ರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ರಂತೆ ಯಡಬಿಡಂಗಿ ಥರ ಆಗಬಾರದು ಎಂದು ಹಿರಿಯ ನಟ, ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿ ಮಾತನಾಡಿ, ಮಠಾಧೀಶರು ರಾಜಕೀಯ ಪ್ರವೇಶ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಲಾಯರ್ ಕೋರ್ಟ್ನಲ್ಲಿ ಮಾತ್ರ ಲಾಯರ್. ಹೊರಗೆ ಬಂದ್ರೆ ಏನು ಬೇಕಾದ್ರೂ ಮಾಡಬಹುದು. ಆ ಸ್ವಾತಂತ್ರ್ಯ ಭಾರತ ದೇಶದಲ್ಲಿದೆ. ಹಾಗೆಯೇ ಸ್ವಾಮೀಜಿಗಳು ಕೂಡ ಕಾವಿ ಬಟ್ಟೆ ಹಾಕದೇ ರಾಜಕೀಯಕ್ಕೆ ಬಂದ್ರೆ ಒಳ್ಳೆಯದು. ಕಾವಿ ಬಟ್ಟೆ ಹಾಕಿಕೊಂಡು ಬಂದ್ರೆ ಗೌರವ ಇರಲ್ಲ. ಎಲ್ಲವನ್ನೂ ಬಿಟ್ಟು ಬಂದ್ರೆ ಓಕೆ. ಇಲ್ಲವಾದರೆ ಉತ್ತರ ಪ್ರದೇಶದ ಸಿಎಂ ಯೋಗಿಯಂತೆ ಯಡಬಿಡಂಗಿ ಥರ ಆಗಬಾರದು ಎಂದು ಕಿಡಿಕಾರಿದರು.
ಸ್ವಾಮೀಜಿಗಳಿಗೆ ಕಾವಿ ಧಾರ್ಮಿಕ ಚಿಂತನೆ ಮಾಡತಕ್ಕಂತ ಭಾವನೆ ಇದೆ. ಅದನ್ನು ಇಟ್ಕೊಂಡು ರಾಜಕೀಯ ಮಾಡ್ತೀನಿ ಅಂದ್ರೆ ಮೂಲ ಸಿದ್ದಾಂತ ದುರುಪಯೋಗ ಆಗುತ್ತೆ ಅನ್ನೋ ಭಯವಿದೆ. ಮೂಲ ಸಿದ್ಧಾಂತ, ದುರುಪಯೋಗ ಆಗಬಾರದು ಎಂದು ಹೇಳಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


