ಬ್ರಿಟನ್ ನ 51 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗದೆಯೇ 180 ಮಕ್ಕಳ ಹುಟ್ಟಿಗೆ ಕಾರಣನಾಗಿದ್ದಾನೆ. ಹಾಗಂತ ಈತ ನೇರವಾಗಿ ಮಹಿಳೆಯರೊಂದಿಗೆ ಸಂಬಂಧ ಹೊಂದಿಲ್ಲ ಬದಲಾಗಿ ವೀರ್ಯಾಣು ದಾನ ಮಾಡಿ ಹಲವಾರು ಮಹಿಳೆಯರು ಗರ್ಭ ಧರಿಸಲು ಕಾರಣನಾಗಿದ್ದಾನೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ನ್ಯೂಕ್ಯಾಸಲ್ ನ ನಿವಾಸಿಯಾಗಿರುವ ಈ 51 ವರ್ಷದ ‘ಜೋ’ ಎಂಬಾತ ಕಳೆದ 13 ವರ್ಷಗಳಿಂದ ವೀರ್ಯ ದಾನಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅವರ ವೀರ್ಯದಿಂದ 200 ಮಹಿಳೆಯರು ಗರ್ಭಧರಿಸಿದ್ದು,180 ಕ್ಕೂ ಹೆಚ್ಚು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ 51 ವರ್ಷದ ವೀರ್ಯ ದಾನಿ ಇಲ್ಲಿಯವರೆಗೆ ಮದುವೆಯಾಗಿಲ್ಲ ಎಂದು ಹೇಳಲಾಗಿದೆ.


