ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬ ಮಹಿಳೆಯ ಜೊತೆ ಆನ್ ಲೈನ್ ಲೈವ್ ಸೆಕ್ಸ್ ಚಾಟ್ ಮಾಡಿ 10 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
38 ವರ್ಷದ ವ್ಯಕ್ತಿ ಕಾಜಲ್ ಎಂದು ಗುರುತಿಸಲಾದ ಮಹಿಳೆಯೊಂದಿಗೆ 10 ನಿಮಿಷಗಳ ಕಾಲ ಸೆಕ್ಸ್ ಚಾಟ್ ಮಾಡಿದ್ದು, ಫೋನ್ ಕರೆ ಕಟ್ ಮಾಡುವಾಗ ಮಹಿಳೆಯು ಸಂತ್ರಸ್ತನ ಎಲ್ಲಾ ಸಂಪರ್ಕ ವಿವರಗಳನ್ನು ಪಡೆದಿದ್ದಳು.
ಸ್ವಲ್ಪ ಸಮಯದ ನಂತರ, ಅವಳು ಮತ್ತೆ ಅವನಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟಳು, ಹಣ ನೀಡದಿದ್ದರೇ ಅವಳು ವೀಡಿಯೊವನ್ನು ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಆರೋಪಿಯನ್ನು ಸುಮಾರು 12 ಗಂಟೆಗಳ ಕಾಲ ಬ್ಲಾಕ್ ಮೇಲ್ ಮಾಡಿ ಆಕೆ ನೀಡಿದ ಖಾತೆಗೆ ಹಣ ಕಳುಹಿಸುವಂತೆ ಮಾಡಲಾಗಿತ್ತು.
ಮತ್ತೆ ಮತ್ತೆ ಆಕೆ ಹಣಕ್ಕಾಗಿ ಪೀಡಿಸಲು ಆರಂಭಿಸಿದಾಗ, ಸಂತ್ರಸ್ತ ವೈಟ್ ಫೀಲ್ಡ್ ವಿಭಾಗದ ಬೆಳ್ಳಂದೂರು ಪೊಲೀಸರನ್ನು ಸಂಪರ್ಕಿಸಿ ಆಕೆಯ ವಿರುದ್ಧ ದೂರು ದಾಖಲಿಸಿದರು. ಸಂತ್ರಸ್ತ ವ್ಯಕ್ತಿ ಬೆಳ್ಳಂದೂರಿನ ಪಿಜಿ ವಸತಿಗೃಹದಲ್ಲಿ ನೆಲೆಸಿದ್ದಾರೆ. ಬುಧವಾರ ರಾತ್ರಿ 11ಗಂಟೆಗೆ ಚಾಟಿಂಗ್ ಆರಂಭಿಸಿದ ವ್ಯಕ್ತಿ ಆರೋಪಿಯ ಆಮೀಷಕ್ಕೆ ಬಲಿಯಾಗಿದ್ದಾನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA