ತುಮಕೂರು: ಪ್ರೀತಿಸಿದ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಣೆ ಆರೋಪ ಹಿನ್ನೆಲೆಯಲ್ಲಿ ಹುಡುಗಿ ಮನೆ ಮುಂದೆಯೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ನಡೆದಿದೆ.
ಮಂಜುನಾಥ್ (32), ಆತ್ಮಹತ್ಯೆಗೆ ಶರಣಾದವನ್ನಾಗಿದ್ದಾನೆ. ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್, ಕೆಲ ತಿಂಗಳಿಂದ ಮಂಜುನಾಥ್ ಮನೆ ಪಕ್ಕದ ಮನೆ ಹುಡುಗಿಯನ್ನ ಲವ್ ಮಾಡ್ತಿದ್ದನು.
ಇಬ್ಬರು ಮದುವೆಯಾಗಲು ಒಪ್ಪಿದ್ರು, ಮದುವೆ ಮಾಡಿಕೊಡುವಂತೆ ಯುವತಿ ಮನೆಯವರನ್ನ ಕೇಳಿದ್ದ ಮಂಜುನಾಥ ಗೆ ಹುಡುಗಿ ಮನೆಯವರು ಮದುವೆ ಮಾಡಿಕೊಡಲು ನಿರಾಕರಿಸಿದ್ದರು.
ಅಪ್ರಾಪ್ತ ಯುವತಿ ಹಿನ್ನೆಲೆ, ಮದುವೆ ಮಾಡಿಕೊಡಲು ನಿರಾಕರಣೆ ಎಂದು ಹೇಳಲಾಗ್ತಿದೆ. ತಡರಾತ್ರಿ ಯುವತಿ ಮನೆ ಮುಂದೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದರು. ಮೃತದೇಹ ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx