ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವಕನ ವಿರುದ್ಧ ಸುಳ್ಳು ಲೈಂಗಿಕ ಆರೋಪಗಳನ್ನು ಮಾಡಿ ಹಣ ಸುಲಿಗೆ ಮಾಡಿದ ದೂರಿನ ಮೇಲೆ ಐಟಿ ಉದ್ಯೋಗಿಯೊಬ್ಬರನ್ನು ಬಂಧಿಸಲಾಗಿದೆ. ಬಿಹಾರದ ಗುರ್‌ಗಾಂವ್ ನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಿಹಾರ ಮೂಲದ ಬಿನೀತಾ ಕುಮಾರಿ (30) ಮತ್ತು ಆಕೆಯ ಸ್ನೇಹಿತ ಹರಿಯಾಣ ಮೂಲದ ಮಹೇಶ್ ಫೋಗಟ್ ಅವರನ್ನು ಬಂಧಿಸಲಾಗಿದೆ.
ಬಿನೀತಾ ಕುಮಾರಿ ನಗರದ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿ. ಮಹೇಶ್ ಎನ್ ಜಿಒ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಡೇಟಿಂಗ್ ಆಪ್ ಮೂಲಕ ಇವರಿಬ್ಬರು ಭೇಟಿಯಾಗಿದ್ದರು. ನಂತರ ದೂರುದಾರ ಯುವಕನಿಗೆ ಮೋಸ ಮಾಡಲು ನಿರ್ಧರಿಸಿದ್ದಾರೆ. ಮೇ 28ರಂದು ಯುವತಿಯು ಯುವಕನನ್ನು ನಗರದ ಹೋಟೆಲ್‌ಗೆ ಕರೆಸಿಕೊಂಡು ಬಿಯರ್ ನೀಡಿ ಬಳಿಕ ಬಲವಂತವಾಗಿ ಕುಡಿಸಿದ್ದಾಳೆ.
ಅನುಮಾನಗೊಂಡ ಯುವಕ ಬಿಯರ್ ನಿರಾಕರಿಸಿ ಅಲ್ಲಿಂದ ವಾಪಸಾಗಿದ್ದಾನೆ. ನಂತರ ಬಿನೀತಾ ಯುವಕನಿಗೆ ದೂರವಾಣಿ ಕರೆ ಮಾಡಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ 5 ಲಕ್ಷ ನೀಡಿದರೆ ದೂರು ಹಿಂಪಡೆಯುವುದಾಗಿ ಯುವಕನಿಗೆ ಮಹೇಶ್ ಅವಾಜ್ ಹಾಕಿದ್ದಾನೆ. ಕೊನೆಗೆ ಎರಡು ಲಕ್ಷಕ್ಕೆ ಒಪ್ಪಿಗೆಯಾಯಿತು.
ಈ ಬಗ್ಗೆ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ನೀಡುವಾಗ ಬಿನೀತಾ ಮತ್ತು ಮಹೇಶ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸುಳ್ಳು ಆರೋಪ ಮಾಡಿ 12 ಮಂದಿಯಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


