ಜಮೈಕಾದಲ್ಲಿ ವ್ಯಕ್ತಿಯೊಬ್ಬ ಬರೋಬ್ಬರಿ 158 ಮಿಲಿಯನ್ ಡಾಲರ್ (ಸುಮಾರು 14,190 ಕೋಟಿ ರೂಪಾಯಿ) ಲಾಟರಿ ಗೆದ್ದಿದ್ದು, ಈ ಹಣವನ್ನು ಸ್ವೀಕರಿಸಲು ಆತ ಅನುಸರಿಸಿದ ಮಾರ್ಗ ಈಗ ಜಗತ್ತಿನಾದ್ಯಂತ ಸುದ್ದಿಯಾಗಿದೆ. ತಾನು ಇಷ್ಟು ದೊಡ್ಡ ಮೊತ್ತದ ಹಣ ಗೆದ್ದಿರುವ ವಿಚಾರ ತನ್ನ ಕುಟುಂಬಸ್ಥರಿಗಾಗಲಿ ಅಥವಾ ಸ್ನೇಹಿತರಿಗಾಗಲಿ ತಿಳಿಯಬಾರದು ಎಂಬ ಕಾರಣಕ್ಕೆ ಆತ ‘ಸ್ಕ್ರೀಮ್’ (Scream) ಸಿನೆಮಾದ ಭೀಕರ ಮುಖವಾಡ ಧರಿಸಿ ಹಣವನ್ನು ಪಡೆದಿದ್ದಾನೆ.
ಕ್ಯಾಂಪೆಬೆಲ್ ಎಂಬ ಹೆಸರಿನ ಈ ವ್ಯಕ್ತಿ, ಜಮೈಕಾದ ಸ್ಪ್ಯಾನಿಷ್ ಕೋರ್ಟ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಆಯೋಜಕರಿಂದ ಚೆಕ್ ಪಡೆದರು. ಲಾಟರಿ ಗೆದ್ದ ನಂತರದ 54 ವಾರಗಳ ಕಾಲ ತಾನು ತೀವ್ರ ಭಯ ಮತ್ತು ಒತ್ತಡದಲ್ಲಿ ಬದುಕಿದ್ದಾಗಿ ಅವರು ತಿಳಿಸಿದ್ದಾರೆ. “ನನಗೆ ಹಣ ಸಿಕ್ಕಿದೆ ಎಂದು ಗೊತ್ತಾದರೆ ಎಲ್ಲರೂ ಸಹಾಯ ಕೇಳಲು ಬರುತ್ತಾರೆ ಅಥವಾ ಹಣಕ್ಕಾಗಿ ನನ್ನ ಜೀವಕ್ಕೆ ಅಪಾಯವಾಗಬಹುದು ಎಂಬ ಭಯವಿತ್ತು. ಹೀಗಾಗಿ ನನ್ನ ಗುರುತನ್ನು ಗೌಪ್ಯವಾಗಿಡಲು ಈ ನಿರ್ಧಾರ ಮಾಡಿದೆ” ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಲಾಟರಿ ಗೆದ್ದವರು ಸಂಭ್ರಮದಿಂದ ಫೋಟೋ ತೆಗೆಸಿಕೊಳ್ಳುತ್ತಾರೆ. ಆದರೆ ಜಮೈಕಾದಲ್ಲಿ ಅಪರಾಧ ಕೃತ್ಯಗಳ ಭಯದಿಂದಾಗಿ ಬಹುತೇಕ ಲಾಟರಿ ವಿಜೇತರು ಮುಖವಾಡ ಧರಿಸಿಯೇ ಬಹುಮಾನ ಪಡೆಯುವುದು ಒಂದು ಸಂಪ್ರದಾಯದಂತಾಗಿದೆ. ಈತನ ಬುದ್ಧಿವಂತಿಕೆಯನ್ನು ಕಂಡು ಸಾಮಾಜಿಕ ಜಾಲತಾಣಗಳಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಹಣ ಕಂಡರೆ ಹೆಣನೂ ಬಾಯಿ ಬಿಡುತ್ತದೆ ಎನ್ನುವ ಕಾಲದಲ್ಲಿ, ತನ್ನ ಸ್ವಂತ ಸುರಕ್ಷತೆಗಾಗಿ ಈತ ಮಾಡಿದ ಕೆಲಸ ಸರಿ ಇದೆ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಚಿತ್ರ ಘಟನೆಯ ಫೋಟೋಗಳು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


