ಚೆನ್ನೈ: ಅಪಾರ್ಟ್‌ಮೆಂಟ್ ಬಾಲ್ಕನಿಯಿಂದ ಮಗುವೊಂದು ಕೆಳಗೆ ಬೀಳಲಿರುವ ಸಮಯದಲ್ಲಿ ನೆರೆಹೊರೆಯವರು ಸಮಯಪ್ರಜ್ಞೆ ಮೆರೆದು ಮಗುವಿನ ಜೀವ ಉಳಿಸಿರುವ ಘಟನೆ ಚೆನ್ನೈನಲ್ಲಿ ಭಾನುವಾರ ನಡೆದಿದೆ.
ಅಕ್ಕಪಕ್ಕದ ಮನೆಯವರ ಸಂಘಟಿದ ಕಾರ್ಯದಿಂದ ಮಗುವಿನ ಜೀವ ರಕ್ಷಿಸಲಾಗಿದ್ದು, ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಅಪಾರ್ಟ್‌ಮೆಂಟ್ ಒಂದರ ಮಹಡಿಯಲ್ಲಿ ವಾಸವಾಗಿದ್ದ ಕುಟುಂಬದ ಮಗುವೊಂದು ಆಕಸ್ಮಾತ್ತಾಗಿ ಬಾಲ್ಕನಿಯಿಂದ ಅಂಬೆಗಾಲಿನಲ್ಲಿ ತೆವಳುತ್ತಾ ಹೊರಗೆ ಬಂದಿತ್ತು. ಕೂಡಲೇ ಅಕ್ಕಪಕ್ಕದ ನಿವಾಸಿಗಳು ಕಿರುಚಿ ಸಾರ್ವಜನಿಕರ ಗಮನ ಸೆಳೆದಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಜನರು ಕೆಳಗೆ ಮಗು ಬಿದ್ದರೆ ಪೆಟ್ಟಾಗದಂತೆ ದೊಡ್ಡ ಗಾತ್ರದ ಬಟ್ಟೆಯೊಂದನ್ನು ಹಿಡಿದು ಸನ್ನದರಾಗಿ ನಿಂತರು. ಆದರೆ ಮಗು ಒಂದು ವೇಳೆ ಕೆಳಗೆ ಬಿದ್ದಿದ್ದರೆ ಅಪಾರ್ಟ್‌ಮೆಂಟ್ ನೇರವಾಗಿ ಬಟ್ಟೆಯ ಮೇಲೆ ಬೀಳದೆ, ಮಧ್ಯದಲ್ಲಿ ಕಟ್ಟಡಕ್ಕೆ ತಗುಲಿ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆಯಿತ್ತು.
ಈ ವೇಳೆ ಕೆಳಗಿನ ಮಹಡಿಯಲ್ಲಿದ್ದ ಕೆಲವು ಯುವಕರು ತಮ್ಮ ಬಾಲ್ಕನಿಯಿಂದ ಸಾಹಸ ಪಟ್ಟು ಮೇಲೇರಿ ಮಗುವನ್ನು ಹಿಡಿದು ಜೀವ ಉಳಿಸಿದ್ದಾರೆ. ಯುವಕರ ಸಾಹಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296