ಅಹಮದಾಬಾದ್: ಪ್ರಿಯತಮನ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ತೀವ್ರ ರಕ್ತಸ್ರಾವದಿಂದ ನರ್ಸಿಂಗ್ ಪದವೀಧರೆ ಸಾವನ್ನಪ್ಪಿರುವ ಘಟನೆ, ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
23 ವರ್ಷದ ನರ್ಸಿಂಗ್ ಪದವೀಧರೆ ತನ್ನ 26 ವರ್ಷದ ಪ್ರಿಯತಮನ ಜೊತೆಗೆ ಖಾಸಗಿ ಕ್ಷಣ ಕಳೆಯಲು ಹೊಟೇಲ್ ರೂಮ್ ಗೆ ತೆರಳಿದ್ದಳು. ಲೈಂಗಿಕ ಕ್ರಿಯೆಯ ಬಳಿಕ ಆಕೆಗೆ ವಿಪರೀತ ರಕ್ತಸ್ರಾವವಾಗಿದೆ.
ಯುವತಿಗೆ ರಕ್ತಸ್ರಾವವಾಗುತ್ತಿದ್ದರೂ ಯುವಕ ಆನ್ ಲೈನ್ ನಲ್ಲಿ ರಕ್ತಸ್ರಾವ ತಡೆಯುವುದು ಹೇಗೆ ಅಂತ ಸರ್ಚ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಮರ್ಯಾದೆಗೆ ಅಂಜಿ ಯಾರನ್ನೂ ಸಹಾಯಕ್ಕೆ ಕರೆಯಲು ಆತ ವಿಫಲನಾಗಿದ್ದಾನೆ.
ಯುವತಿಯ ಗುಪ್ತಾಂಗಕ್ಕೆ ಬಟ್ಟೆ ತುರುಕಿ ಆತ ರಕ್ತಸ್ರಾವ ತಡೆಯಲು ಮುಂದಾಗಿದ್ದಾನೆ. ಬಳಿಕ ತನ್ನ ಗೆಳೆಯರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಆತನ ಗೆಳೆಯರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ.
ಇನ್ನೂ ಮೊದಲು ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಗಿತ್ತು. ಆದರೆ, ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಗೆ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಯುವತಿ ಸಾವನ್ನಪ್ಪಿದ್ದಾಳೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296