ಫಿಜಿಯೋ ಥೆರಪಿಗೆ ಬಂದಿದ್ದ ಯುವತಿ ಮೇಲೆ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ.. ಕೇರಳದ ಪಯ್ಯನೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ 42 ವರ್ಷದ ಶರತ್ ನಂಬಿಯಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಸ್ ನಿಲ್ದಾಣದ ಬಳಿ ಫಿಸಿಯೋ ಥೆರಪಿ ಸೆಂಟರ್ ಇದೆ. ಇದಕ್ಕೆ ಫಿಸಿಯೋ ಥೆರಪಿ ಮಾಡಿಸಿಕೊಳ್ಳಲು ಯುವತಿಯೊಬ್ಬಳು ಬಂದಿದ್ದಾಳೆ. ಈ ವೇಳೆ ಕ್ಷೇಮ ಕೇಂದ್ರ ಮತ್ತು ಜಿಮ್ ನ ಮಾಲೀಕ ಶರತ್ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿ, ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಆತ ಫಿಸಿಯೋಥೆರಪಿಸ್ಟ್ ಅಲ್ಲದಿದ್ದರೂ ಕೂಡಾ ಮಹಿಳೆಯರಿಗೆ ತಾನೇ ಥೆರಪಿ ಮಾಡುತ್ತೇನೆ ಎಂದು ಹೇಳಿ ಬಲವಂತದಿಂದ ಅತ್ಯಾಚಾರ ಎಸಗುತ್ತಾನೆ ಎಂದು ಗಂಭೀರ ಆರೋಪ ಮಾಡಲಾಗಿದೆ.
ಯುವತಿಯೊಬ್ಬಳು ಈ ಬಗ್ಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇದೇ ವೇಳೆ ಕೆಲ ವ್ಯಕ್ತಿಗಳು ಫಿಸಿಯೋಥೆರಪಿ ಸೆಂಟರ್ ಮೇಲೆ ದಾಳಿ ಮಾಡಿ ಉಪಕರಣಗಳನ್ನು ಧ್ವಂಸ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA