nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026
    Facebook Twitter Instagram
    ಟ್ರೆಂಡಿಂಗ್
    • ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ
    • LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!
    • ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
    • ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ
    • ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
    • ಗುಬ್ಬಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ
    • ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
    • ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಯುವ ಸಮುದಾಯವೇ ಭಾರತ ವಿಶ್ವ ಗುರು ಆಗಲು ಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    ಪಾವಗಡ January 4, 2024

    ಯುವ ಸಮುದಾಯವೇ ಭಾರತ ವಿಶ್ವ ಗುರು ಆಗಲು ಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

    By adminJanuary 4, 2024No Comments2 Mins Read
    lakshmi hebbalkar

    ಧಾರವಾಡ: ‘ಯುವಜನರು ಭವ್ಯ ಭಾರತದ ಭವಿಷ್ಯ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದ್ದು, ಇಂದಿನ ಯುವ ಸಮುದಾಯವೇ ಭಾರತ ಇಂದು ವಿಶ್ವ ಗುರು ಆಗಲು ಕಾರಣವಾಗಿದೆʼ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟರು.

    ಇಲ್ಲಿನ ಕರ್ನಾಟಕ ಕಾಲೇಜಿನ ಸೃಜನಾ ರಂಗಮಂದಿರದಲ್ಲಿ ಕರ್ನಾಟಕ ಕಲಾ ಮಹಾವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗ ಹಾಗೂ ಕೇಂದ್ರ ಪವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ʻಸಾಂಸ್ಕೃತಿಕ ಉತ್ಸವ- ಸಾರ್ಥವಾಹ-2024 ವಿಶೇಷ ಕಾರ್ಯಕ್ರಮ ಉದ್ಘಾಟಿಸಿ, ಸಚಿವರು ಮಾತನಾಡಿದರು.


    Provided by
    Provided by

    ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾವಲಂಬನೆಯತ್ತ ರಾಷ್ಟ್ರದ ಪ್ರಯಾಣ ಮುಂದುವರಿದಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಹಾಗೂ ದೇಶವನ್ನು ವಿಶ್ವದ ಅತ್ಯುತ್ತಮ ಸ್ಥಾನದಲ್ಲಿ ಇರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದು ಹೇಳಿದ ಅವರು, ಭಾರತವು ವಿಶಿಷ್ಟ ಸಂಸ್ಕೃತಿಗಳಿಂದ ತುಂಬಿದ ವೈವಿಧ್ಯಮಯ ದೇಶವಾಗಿದೆ ಮತ್ತು ವಿವಿಧತೆಯಲ್ಲಿ ಏಕತೆ ಈ ರಾಷ್ಟ್ರದ ಶಕ್ತಿಯಾಗಿ ಉಳಿದಿದೆ ಎಂದು ಹೇಳಿದರು.

    ಸೋಲು ಗೆಲುವು ಎಲ್ಲವೂ ಸಾಮಾನ್ಯ, ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ, ಆದರೆ ಕೆಲವೊಬ್ಬರ ಜೀವನದಲ್ಲಿ ಕೆಲವೊಮ್ಮೆ ಕೇವಲ ಸೋಲನ್ನು ಮಾತ್ರವೇ ಕಾಣುತ್ತಿರುತ್ತಾರೆ. ಆಗ ಸೋತೆ ಎಂದು ಕೊರಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು, ಗೆಲುವು ನಿಮ್ಮದಾಗಿಸಿಕೊಳ್ಳುವುದು ಹೇಗೆ, ನೀವು ಎಡವಿದ್ದೆಲ್ಲಿ ಎಂಬುದರ ಬಗ್ಗೆ ಆಲೋಚಿಸಬೇಕು. ಆತ್ಮವಿಶ್ವಾಸ, ಛಲ ನಿಮ್ಮಲ್ಲಿದ್ದರೆ ಅಸಾಧ್ಯವಾದುದ್ದನ್ನು ಕೂಡ ಸಾಧಿಸಿ ತೋರಿಸಬಹುದು ಎಂದು ಸಚಿವರು ಕಿವಿಮಾತು ಹೇಳಿದರು.

    ಖ್ಯಾತ ನಟ, ನಿರ್ದೇಶಕ ಡಾ.ಯಶವಂತ ಸರದೇಶಪಾಂಡೆ ಮಾತನಾಡಿ ಯುವಕರು ಬದುಕಿನ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಲಾ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಡಾ. ಮಂಜುಳಾ ಚಲವಾದಿ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುಲಿ ಸಾಳುಂಕೆ, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ. ಕೆ. ಜಗದೀಶ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ವೀರೇಂದ್ರ ಯಾದವ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್.ರಾಜಶೇಖರ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಸಾವಿತ್ರಿಬಾಯಿ ಪುಲೆ ಸ್ಮರಿಸಿದ ಸಚಿವರು:

    ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅಕ್ಷರ ಬೆಳಕು ನೀಡಿದ ಸಾವಿತ್ರಬಾಯಿ ಪುಲೆ ಅವರ ಹೋರಾಟದಿಂದ ಸಾಧ್ಯವಾಗಿದೆ.  ಆದರೂ ಇಂದಿಗೂ ಸಮಾಜದಲ್ಲಿ ಜಾತಿ ಅಸಮಾನತೆ, ಅಸ್ಪಶ್ಯತೆ, ದೌರ್ಜನ್ಯ ನಡೆಯುತ್ತಿದ್ದು, ಈ ತರದ ಅನಿಷ್ಟ ಪದ್ಧತಿಗಳ ವಿರುದ್ಧ ದೊಡ್ಡ ರೀತಿಯಲ್ಲಿ ಚಳವಳಿ ಅವಶ್ಯಕ. ಈ ನಿಟ್ಟಿನಲ್ಲಿ ಯುವ ಜನರು ಮುಂದಾಗಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಎಂದು ಹೇಳಿದರು.

    ಚಿತ್ರಕಲಾ ಪ್ರದರ್ಶನ ಉದ್ಘಾಟನೆ:

    ಇದೇ ವೇಳೆ ಸಚಿವರು, ಕರ್ನಾಟಕ ಕಲಾ ಮಹಾವಿದ್ಯಾಲಯದ ಚಿತ್ತಾರ ಕಲಾ ಬಳಗವು ಏರ್ಪಡಿಸಿದ್ದ ಮೂರು ದಿನಗಳ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಕಲಾ ಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

     

    admin
    • Website

    Related Posts

    ಪಾವಗಡ: ಸಾಧಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನ

    March 6, 2026

    ಪಾವಗಡ: ಜಾತಿ ನಿಂದನೆ, ಆಯುಧ ತೋರಿಸಿ ಕೊಲೆ ಬೆದರಿಕೆ: ಇಬ್ಬರ ವಿರುದ್ಧ ದೂರು ದಾಖಲು

    February 8, 2026

    ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ

    February 5, 2026

    Comments are closed.

    Our Picks

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    ಬೆಂಗಳೂರು: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ…

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026

    ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ

    March 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.