ಪಾವಗಡ : ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದ ಫೆಬ್ರವರಿ 2 ರಂದು ಸಿದ್ದಾಪುರ ನರೇಂದ್ರ ಫೌಂಡೇಶನ್ ಕ್ಯಾಂಪಸ್ ನಲ್ಲಿ ಯೂತ್ ಫಾರ್ ಸೇವಾ, ಬೆಂಗಳೂರು, ನರೇಂದ್ರ ಫೌಂಡೇಶನ್ ಸಿದ್ದಾಪುರ, ಗ್ರಾಮ ವಿಕಾಸ ಪಾವಗಡ ಮತ್ತು ಯುಎಸ್ ಟಿ ಗ್ಲೋಬಲ್ ಇವರ ಸಂಯುಕ್ತ ಆಶ್ರಯದಲ್ಲಿ ಯುವ ಸಮ್ಮೇಳನವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಯುಎಸ್ ಟಿ ಗ್ಲೋಬಲ್ ನಿಂದ ಸ್ಮಿತವರ್ಮ, ನರೇಂದ್ರ ಫೌಂಡೇಶನ್ ನ ಕೆ.ವಿ. ರಾಜಣ್ಣ ಮತ್ತು ನರೇಂದ್ರ ರೆಡ್ಡಿ, ಗ್ರಾಮ ವಿಕಾಸದಿಂದ ಗಿರೀಶ್, ಯೂಥ್ ಫಾರ್ ಸೇವಾದ ಪ್ರಕಾಶ್ ಭಟ್ ಮತ್ತು ವೆಂಕಟೇಶ್ ಮೂರ್ತಿ, ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗೋತ್ರಿ ರಮೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ವಿ. ರಾಜಣ್ಣ, “ಹಳ್ಳಿಗಳಲ್ಲಿ ಯುವಕರು ಉದ್ಯೋಗಾನ್ವೇಶನಕ್ಕಾಗಿ ಬೇರೆ ಊರುಗಳಿಗೆ ತೆರಳುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮೂರು ವರ್ಷದ ಸಮಗ್ರ ಗ್ರಾಮ ವಿಕಾಸ ಯೋಜನೆ ರೂಪಿಸಲಾಗಿದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದರೆ, ಸಿದ್ದಾಪುರ ಮಾದರಿ ಗ್ರಾಮ ಪಂಚಾಯಿತಿಯಾಗಿ ಹೊರಹೊಮ್ಮಲಿದೆ” ಎಂದರು.
ಕಾರ್ಯಕ್ರಮದ ಸ್ವಾಗತ ನಿವೇದಿತ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೊಣ ತಿಮ್ಮಪ್ಪ ಅವರು ನೀಡಿದರು. ಹರೀಶ್ ವಂದನಾರ್ಪಣೆ ಸಲ್ಲಿಸಿದ್ದು, ನಿರೂಪಣೆಯನ್ನು ಸುದೀಪ್ ಕುಮಾರ್ ನಿರ್ವಹಿಸಿದರು.
ಯುವ ಸಮಾವೇಶದ ವಿಶೇಷ ಆಕರ್ಷಣೆಯಾಗಿದ್ದು, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಕಲಾತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು. ಸುಮಾರು 200ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದನ್ನು ಯಶಸ್ವಿಗೊಳಿಸಿದರು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4