ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಹಿರ್ದೆಸೆಗೆ ತೆರಳಿದ್ದಾಗ ಯುವಕ ನಾಗೇಶ್ ನನ್ನು ಆನೆ ಸೊಂಡಿಲಿನಿಂದ ಎತ್ತಿ ಎಸೆದಿದೆ. ರಾತ್ರಿಯಿಡೀ ಕಾಡಿನಲ್ಲೇ ನರಳಾಡಿದ್ದು ಬೆಳಗ್ಗೆ ಸ್ಥಳೀಯರು ಯುವಕನನ್ನು ಗಮನಿಸಿ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ತಪಾಸಣೆ ವೇಳೆ ಬಲಗಾಲು ಸ್ವಾಧೀನ ತಪ್ಪಿರುವುದು ಪತ್ತೆಯಾಗಿದೆ.


