ಪಾವಗಡ: ಸಣ್ಣ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರ ಮೇಲೆ ಪಿ ಎಸ್ ಐ ಅರ್ಜುನ್ ಗೌಡ ಹಾಗೂ ಸಿಬ್ಬಂದಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ವೈ.ಎನ್.ಹೊಸಕೋಟೆ ಪೋಲಿಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಶುಕ್ರವಾರ ಮಧ್ಯಾಹ್ನ ದೊಡ್ಡಹಳ್ಳಿ ಮತ್ತು ಕೆ.ರಾಮಪುರ ಗ್ರಾಮದ ಯುವಕರ ನಡುವೆ ಸಣ್ಣ ಗಲಾಟೆ ನಡೆದಿದ್ದು, ಈ ಸಂಬಂಧ ದೂರು ದಾಖಲಾಗಿತ್ತು ಎನ್ನಲಾಗಿದೆ.
ದೂರಿನ ವಿಚಾರಣೆಗೆ ಶನಿವಾರ ಬೆಳಿಗ್ಗೆ 5 ಜನ ಯುವಕರನ್ನು ಠಾಣೆಗೆ ಕರೆಸಿಕೊಳ್ಳಲಾಗಿತ್ತು. ಮಧ್ಯ ರಾತ್ರಿ 12 ಗಂಟೆ ಠಾಣೆಗೆ ಆಗಮಿಸಿದ ಪಿಎಸ್ ಐ ಅರ್ಜನ್ ಗೌಡ ಹಾಗೂ ಇತರೇ ನಾಲ್ಕು ಜನ ಸಿಬ್ಬಂದಿ, ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ನೀವು ಯಾವ ಪಕ್ಷದವರು ಎಂದು ಪ್ರಶ್ನಿಸಿ ಹಿಗ್ಗಾಮುಗ್ಗಾ ಥಳಿಸಿದ್ದು, “ಕೇಂದ್ರದಲ್ಲಿ ಬಿಜೆಪಿ ಇದೇ ನನ್ನ ಮಕ್ಕಳ… ಕಾಂಗ್ರೆಸ್ , ಜೆಡಿಎಸ್ ಗೆ ಒಟು ಹಾಕಿದ್ರೆ ಇದೇ ಕೈ ಮುರಿದೇ ಬೀಡುತ್ತೀನಿ” ಎಂದು ಕುಡಿದ ಅಮಲಿನಲ್ಲಿದ್ದ ಪಿ ಎಸ್ ಐ ಅರ್ಜುನ್ ಗೌಡ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿಗಳಾದ ಚಿರಂಜೀವಿ, ಅನಿಲ್ , ಮಾರುತಿ, ಗುಣಶೇಖರ್ ಹಾಗೂ ಮಂಜುನಾಥ್ ಹಲ್ಲೆಗೊಳಗಾದವರಾಗಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕರನ್ನ ಪಾವಗಡ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆ ಕೆ.ರಾಮಪುರ ಗ್ರಾಮದಲ್ಲಿ ನಡೆದಿದೆ.
ವರದಿ: ರಾಮಪ್ಪ, ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy