ನವದೆಹಲಿ: ಕೇಂದ್ರ ಬಜೆಟ್ “ಗುಂಡೇಟಿನಿಂದ ಆದ ಗಾಯಕ್ಕೆ ಬ್ಯಾಂಡೇಜ್ ನೆರವು” ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದು, ಕೇಂದ್ರ ಸರ್ಕಾರಕ್ಕೆ ಐಡಿಯಾಗಳೇ ಇಲ್ಲ ಎಂದು ಟೀಕಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ನಮ್ಮ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಮಾದರಿ ಬದಲಾವಣೆಯ ಅಗತ್ಯವಿತ್ತು. ಆದರೆ ಈ ಸರ್ಕಾರ ದಿವಾಳಿಯಾಗಿದೆ. ಐಡಿಯಾಗಳ ದಿವಾಳಿತನದಿಂದ ಕೇಂದ್ರ ಸರಕಾರ ಬಳಲುತ್ತಿದೆ ಎಂದು ಆರೋಪಿಸಿದರು.
ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಚುನಾವಣೆಯನ್ನು ಹಿನ್ನಲೆಯಲ್ಲಿ, ಕೇಂದ್ರ ಸರಕಾರವು ಬಿಹಾರಕ್ಕೆ ಮಖಾನಾ ಮಂಡಳಿ ಸ್ಥಾಪನೆ, ಪಶ್ಚಿಮ ಕೋಸಿ ಕಾಲುವೆಗೆ ಆರ್ಥಿಕ ನೆರವು ಮತ್ತು ಐಐಟಿ ಕೇಂದ್ರಗಳನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಮೀಸಲಿಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಅದರೊಂದಿಗೆ, ಅವರು ಆಂಧ್ರಪ್ರದೇಶಕ್ಕೆ ಇಂತಹ ಯಾವುದೇ ಪ್ರಾಧಾನ್ಯತೆ ನೀಡದೇ, ಅದನ್ನು ನಿರ್ಲಕ್ಷಿಸಿದ್ದು ಸರಕಾರದ ಅನುತೇಜಿತ ನೀತಿ ಎಂದು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4