ವಿಜಯಪುರದಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬಿಳಿಸುವಂತೆ ಮಾಡಿದೆ.
ವಿಜಯಪುರ ನಗರದ ಬಸವರಾಜ ಮಮದಾ ಪುರ ಇವರ ಪುತ್ರಿ ಪ್ರಿಯಾಂಕಾ ಇವಳನ್ನು, ತಮ್ಮ ಸಂಬಂಧಿಕ ರಲ್ಲಿಯೇ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ ಎನ್ನುವ ನೊಂದಿಗೆ 2008 ರಲ್ಲಿ ಮದುವೆ ಮಾಡಿ ಕೊಡಲಾಗಿತ್ತು.
ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇಪದೇ ತವರು ಮನೆಗೆ ಬರುತ್ತಿ ದ್ದಳು, ಇತ್ತ ಕಡೆಪೋಷಕರೂ ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿ ದ್ದರು. 2011ರ ವರೆಗೂ ಹೀಗೆಯೇ ಮುಂದು ವರೆದಿತ್ತು.
ಒಂದು ದಿನ ಪ್ರಿಯಾಂಕ ನನಗೆ ಗಂಡನ ಜೊತೆಗೆ ಸಂಸಾರ ಮಾಡಲು ಇಷ್ಟವಿಲ್ಲ, ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರ ಬಳಿ ಹೇಳಿದ್ದಾಳೆ. ಆಗ ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡು ವುದು ಸರಿಯಲ್ಲ ಎಂದು ಸಂಬಂಧಿಕರು ಎಲ್ಲ ರೀತಿಯ ಬುದ್ಧಿವಾದ ಹೇಳಿ, ಮತ್ತೆ ಗಂಡನ ಮನೆಗೆ ಬಿಟ್ಟು ಬಂದಿದ್ದರು. ಈ ವಿಚಾರ ಗಂಡನ ಮನೆಯವರಿಗೆ ಗೊತ್ತಾಗಿತ್ತು. ಇದು ನಮ್ಮ ಮನೆತನದ ಮರ್ಯಾದೆ ಪ್ರಶ್ನೆ ಎಂದುಕೊಂಡು ಯಾರಿಗೂ ಹೇಳದೇ ಸುಮ್ಮನಾಗಿದ್ದರು. ಈ ಮಧ್ಯೆ ಗಂಡನ ಮನೆಯವರು ಪತ್ನಿ ಪ್ರಿಯಾಂಕ ಅಂಗಡಿಗೆ ಹೋದವಳು ವಾಪಸ್ ಮನೆಗೆ ಬಂದಿಲ್ಲ ಎಂದು ಪ್ರಿಯಾಂಕ ಪೋಷಕರಿಗೆ ಹೇಳಿದ್ದರು. ಬಹುಶಆಕೆ ಪ್ರಿಯಕರನ ಜತೆ ಓಡಿ ಹೋಗಿರ ಬಹುದು ಎಂದು ಅವರು ಸುಮ್ಮನಾಗಿದ್ದರು.
ಪ್ರಿಯಾಂಕ ಪಾಟೀಲ ಸುಮಾರು 10 ವರ್ಷಗಳ ಕಾಲ ನಾಪತ್ತೆ ಅಂತಲೇ ಬಿಂಬಿಸ ಲಾಗಿತ್ತು. ಒಂದು ದಿನ ಪ್ರಿಯಾಂಕ ಪತಿ ಹುಚ್ಚಪ್ಪಗೌಡ ಬಾರ್ ನಲ್ಲಿ ಕುಳಿತು ಕುಡಿಯುವಾಗ ತನ್ನ ಪತ್ನಿಯನ್ನು ಕೊಂದಿರುವುದಾಗಿ ಬಡಬಡಿಸಿದ್ದಾನೆ. ಇಷ್ಟೇ ಸಾಕು ಕೊಲೆ ರಹಸ್ಯ ಪೋಲಿಸ್ ಕಿವಿಗೆ ಬಿದ್ದಿದೆ.
ತಕ್ಷಣ ಅಲರ್ಟ್ ಆದ ಪೆÇಲೀಸರು ಹುಚ್ಚಪ್ಪಗೌಡನ ಪತ್ನಿ ಪ್ರಿಯಾಂಕ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಆಕೆ ಹತ್ತು ವರ್ಷದ ಹಿಂದೆ ನಾಪತ್ತೆ ಯಾಗಿರುವದು ಗೊತ್ತಾಗುತ್ತದೆ. ತಕ್ಷಣ ಪೋಲಿಸರು ಪ್ರಿಯಾಂಕ ಪೋಷಕರನ್ನು ವಿಚಾರಣೆ ನಡೆಸಿ ನಿಮ್ಮ ಮಗಳು ಕೊಲೆ ಯಾಗಿರುವ ಶಂಕೆ ವ್ಯಕ್ತಪಡಿಸಿದಾಗ ಪ್ರಿಯಾಂಕ ತಾಯಿ ಮುದ್ದೇಬಿಹಾಳ ಪೆÇಲೀಸ್ ಠಾಣೆಗೆ
ಮಗಳು ಕಾಣೆಯಾದ ಬಗ್ಗೆ 2021 ರ ಜೂನ್ 1ರಂದು ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ವಿಚಾರಣೆ ಆರಂಭಿಸಿದ ಪೋಲಿಸರು ಪ್ರಿಯಾಂಕ ಯಾರನ್ನು ಪ್ರೀತಿಸುತ್ತಿ ದ್ದಳು ಎನ್ನುವ ಬಗ್ಗೆ ತನಿಖೆ ನಡೆಸಿದಾಗ ಶ್ರೀಧರ ಎಂಬ ಯುವಕ ಎಂದು ಗೊತ್ತಾಗಿದೆ. ಆತನನ್ನು ಹುಡುಕಲು ಹೋದರೆ ಆತನು ಸಹ 10 ವರ್ಷಗಳಿಂದ ನಾಪತ್ತೆಯಾಗಿರುವದು ಗೊತ್ತಾಗಿ, ಪ್ರಿಯಾಂಕ ಪತಿ ಹುಚ್ಚಪ್ಪಗೌಡ ಹಾಗೂ ಅವರ ಸಹೋದರ ಸಿದ್ದಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮರ್ಡರ್ ಮಿಸ್ಟರಿ ಹೊರ ಬಂದಿದೆ.
ನಡೆದಿದ್ದು ಏನು?:
ಆರಂಭದಲ್ಲಿ ಪ್ರಿಯಾಂಕ ಕಾಣೆಯಾದ ಬಗ್ಗೆ ಕುಟುಂಬಸ್ಥರು ಸುಮ್ಮನಾಗಿದ್ದರು. ತನ್ನ ಪ್ರಿಯಕರ ಶ್ರೀಧರ ಜೊತೆಗೆ ಹೋಗಿರ ಬಹುದು ಎಂದು ತಿಳಿದು ಸುಮ್ಮನಾಗಿದ್ದರು. ಜೊತೆಗೆ ಮರ್ಯಾದೆಗೆ ಹೆದರಿ ಕುಟುಂಬಸ್ಥರು ದೂರ ನೀಡಿರಲಿಲ್ಲ.ಬಾರ್ ನಲ್ಲಿ ವಿಷಯ ಬಾಯ್ಬಿಟ್ಟಿದ್ದ ಹುಚ್ಚಪ್ಪಗೌಡಪೋಲಿಸರ ಎದುರು ತಾವು ಮಾಡಿದ ಕೊಲೆ ರಹಸ್ಯ ಎಳೆ ಎಳೆಯಾಗಿ ಹೇಳಿದಾಗ ಪೋಲಿಸರೇ ಅಚ್ಚರಿ ಪಡು ವಂತಾಗಿತ್ತು.
ತನ್ನ ಪತ್ನಿ ಬೇರೆಯವರ ಜತೆ ಅನೈತಿಕ ಸಂಬಂಧ ಹೊಂದಿರುವದನ್ನು ಸಹಿಸದ ಹುಚ್ಚಪ್ಪಗೌಡ ಸಹೋದರ ಸಿದ್ದಪ್ಪ ಜತೆ ಸೇರಿ ಪ್ರಿಯಾಂಕಳನ್ನು ದೇವರ ದರ್ಶನಕ್ಕೆ ಶ್ರೀಶೈಲಗೆ ಹೋಗೋಣ ಎಂದು ಪುಸಲಾಯಿಸಿ ಪ್ರಿಯಾಂಕಳನ್ನು ಪುಸಲಾಯಿಸಿ 24 ಜುಲೈ 2011ರಂದು ಬಾಡಿಗೆ ಕಾರು ಮಾಡಿಕೊಂಡು ಶ್ರೀಶೈಲಗೆ ಹೋಗುತ್ತಾರೆ. ದೇವರ ದರ್ಶನ ಪಡೆದು ವಾಪಸ್ ಬರುವಾಗ ಅಂದರೆ 25 ಜುಲೈ 2011ರಂದು ಆಂಧ್ರಪ್ರದೇಶದ ಕೊರಪುರ ಫಾರೆಸ್ಟ್ ಚೆಕ್ ಪೆÇೀಸ್ಟ್ ಬಳಿಯ, ಮಂತನಾಲಮ್ ಹಳ್ಳಿಯ ಬ್ರಿಜ್ ಬಳಿ ಪ್ರಿಯಾಂಕಳನ್ನು ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿ, ದಟ್ಟವಾದ ಕಾಡಿನ ಬ್ರಿಜ್ ಕೆಳಗೆ ಅವಳನ್ನು ವಿವಸ್ತ್ರಗೊಳಿಸಿ ಎಸೆದು ಹೋಗಿರುತ್ತಾರೆ. ಅವಳ ಮೈಮೇಲಿನ ಬಟ್ಟೆಯನ್ನು ನಾರಾ ಯಣಪುರ ಡ್ಯಾಂನ ಬ್ರಿಜ್ ನಲ್ಲಿ ಎಸೆದು ಹೋಗಿರುತ್ತಾರೆ.
7 ಜುಲೈ ರಂದು ಆರೋಪಿಗಳನ್ನು ಬಂಧಿಸಿರುವ ಪೋಲಿಸರು ಅವರ ವಿರುದ್ಧ 120ಬಿ, 302, 201, 506, 34 ಐಪಿಸಿ ಸೆಕ್ಷನ್ ಗಳನ್ನು ಹಾಕಿ ಜೈಲಿಗಟ್ಟಿದ್ದಾರೆ.ಹೀಗೆ ಸುಮಾರು 10 ವರ್ಷಗಳ ಹಿಂದೆ ನಡೆದಿರುವ ಒಂದು ಭಯಾನಕ, ಸಿನಿಮೀಯ ರೀತಿಯ ಕೊಲೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಮರ್ಯಾದೆಗೆ ಹೆದರಿ ದೂರು ಕೊಡಲು ಹಿಂಜರಿದಿದ್ದ ಪ್ರಿಯಾಂಕಳ ಪೋಷಕರು ಮಗಳನ್ನು ಕಳೆದುಕೊಂಡು ಶಾಕ್ ಗೆ ಒಳಗಾಗುವಂತೆ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ ಪತಿ ಹುಚ್ಚಪ್ಪಗೌಡ ಪಾಟೀಲ ಆತನ ಸಹೋದರ ಸಿದ್ದನಗೌಡ ಪಾಟೀಲ ಹಾಗೂ ಅಂದು ಶ್ರೀಶೈಲಕ್ಕೆ ಹೋಗಿದ್ದ ಕಾರಿನ ಚಾಲಕ ಉಮೇಶ ಕಮಲಾಪುರ ಅವರನ್ನು ಬಂಧಿಸಿದ್ದಾರೆ.
ಅಲ್ಲದೆ ಮುದ್ದೇಬಿಹಾಳ ಠಾಣೆ ಪೋಲಿಸರು ಆಂಧ್ರ ಪ್ರದೇಶದ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ.
ಸದ್ಯ ಆಕೆಯ ಪ್ರಿಯಕರ ಶ್ರೀಧರನ ಹುಡು ಕಾಡುತ್ತಿರುವ ಪೆÇಲೀಸರು. ಆತನಿಗೆ ಏನಾದರೂ ಸಮಸ್ಯೆ ಆಗಿದೆಯಾ ಅವನು ಎಲ್ಲಿದ್ದಾನೆ ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy