ಪಾವಗಡ: ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ, ಪಾವಗಡ ತಾಲೂಕಿನ ಸಹನಾ ಕಾನ್ವೆಂಟ್ ಮತ್ತು ಕೋಡಿಗೆಹಳ್ಳಿಯ ಮೊರಾರ್ಜಿ ವಸತಿ ಶಾಲೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡು ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಬಿ.ಇ.ಓ. ಇಂದ್ರಾಣಮ್ಮ ತಿಳಿಸಿದ್ದಾರೆ.
ಕೋಟಗುಡ್ಡ ಗ್ರಾಮದ ಸಹನಾ ಕಾನ್ವೆಂಟ್ ನಲ್ಲಿ ಹಮ್ಮಿಕೊಂಡಿದ್ದ, ಹೆಚ್ಚು ಅಂಕಗಳನ್ನು ಪಡೆದ, ಜಾಹ್ನವಿ, ನಾಗಶ್ರೀ, ಸುಶ್ಮಿತಾ ವಿದ್ಯಾರ್ಥಿಗಳನ್ನು ಗೌರವಿಸಿ, ಶಾಲೆಯನ್ನು ಅಭಿನಂದಿಸಿ ಮಾತನಾಡಿದ್ದಾರೆ.

“ಪರೀಕ್ಷೆಯನ್ನು ಯಾವುದೋ ಪೂರ್ವಗ್ರಹ ಪೀಡಿತದಿಂದ ನೋಡದೆ, ಅದರ ಬಗ್ಗೆ ಅರಿವು ಇಲ್ಲದೆ ಊಹಾಪೋಹಗಳಿಂದ ದಾರಿ ತಪ್ಪುವಂತಾಗುತ್ತದೆ. ಇದು ಮಕ್ಕಳ ಪೋಷಕರಲ್ಲಿ ಕಳವಳಕ್ಕೆ ಕಾರಣವಾಗುತ್ತದೆ. ಕೂಲಿಕಾರ್ಮಿಕರು ತಮ್ಮ ಮಕ್ಕಳನ್ನು ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗುವುದರಿಂದ ಫಲಿತಾಂಶವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಬಾರಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಾವ ರೀತಿಯಾಗಿ ಪರೀಕ್ಷೆಯನ್ನು ಬರೆದಿದ್ದಾರೋ ಅದೇ ರೀತಿಯಾಗಿ ಅವರು ಫಲಿತಾಂಶವನ್ನು ಸಹ ಪಡೆದುಕೊಂಡಿದ್ದಾರೆ.
ಮುಂದಿನ 2025 ರಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಯೊಬ್ಬರು 625ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಗುರಿ ಹೊಂದಬೇಕೆಂದು ಸಹನಾ ಕಾನ್ವೆಂಟ್ ನ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. ಸಹನಾ ಕಾನ್ವೆಂಟ್ ಉತ್ತಮ ವಾತಾವರಣದಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಾ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಸಹನಾ ಕಾನ್ವೆಂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ತಿಳಿಸಿದ್ದಾರೆ.

ಶಾಲೆಯ ಕಾರ್ಯದರ್ಶಿ ಸಹನಾ ಶ್ರೀನಿವಾಸ್ ಮಾತನಾಡಿ, 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಮಕ್ಕಳ ವಾರ್ಷಿಕ ಫಲಿತಾಂಶದಲ್ಲಿ ಸಹನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಪಾವಗಡ ತಾಲೂಕಿನಲ್ಲಿ 100% ಫಲಿತಾಂಶ ಬಂದಿದ್ದು, ಸತತ 12 ವರ್ಷಗಳಿಂದ ನಿರಂತರವಾಗಿ 100% ಫಲಿತಾಂಶ ಬಂದಿರುತ್ತದೆ. ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ, ಶಿಕ್ಷಕರಿಗೆ ಪ್ರತಿ ಹಂತದಲ್ಲಿ ಮಾರ್ಗದರ್ಶನ ಬೋಧನಾ ಅವಧಿಯಲ್ಲಿ ಪ್ರತಿ ಮಗುವಿಗೆ ವೈಯಕ್ತಿಕ ಗಮನ ಮುಖ್ಯ. ಈ ಶಾಲೆಯ ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರ ಮತ್ತು ಇಲಾಖಾ ಅಧಿಕಾರಿಗಳ ಮಾರ್ಗದರ್ಶನ ಈ ಫಲಿತಾಂಶ ಅತ್ಯುತ್ತಮವಾಗಿ ಮೂಡಿಬರಲು ಕಾರಣವಾಗಿರುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ನರಸಿಂಹಪ್ಪ ಮಾತನಾಡಿ ಶಿಕ್ಷಕರಿಗೆ ಮಕ್ಕಳನ್ನು ದತ್ತು ನೀಡಿರುವುದು, ಗೃಹ ವೇಳಾಪಟ್ಟಿ ಅಳವಡಿಕೆ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಬೋಧನೆ, ಹಳೆಯ ಪಶ್ನೆಪತ್ರಿಕೆಗಳನ್ನು ಬಿಡಿಸುವುದು, ಹಿರಿಯ ವಿದ್ಯಾರ್ಥಿಗಳಿಂದ ಮಾರ್ಗದರ್ಶನ, ಮುಂತಾದ ಕಲಿಕಾ ತಂತ್ರಾಂಶಗಳನ್ನು ಉಪಯೋಗಿಸಿ ಮಕ್ಕಳಿಗೆ ಪರೀಕ್ಷಾಭ್ಯಾಸ ಮಾಡಿಸಿರುವುದು ಶಾಲೆಯು ಶೇಕಡಾ 100% ರಷ್ಟು ಫಲಿತಾಂಶ ಪಡೆಯುವುದಕ್ಕೆ ಕಾರಣವಾಯಿತು.
ಶಾಲೆಗೆ ಟಾಪರ್ ಆಗಿರುವ ಜಾಹ್ನವಿ, ನಾಗಶ್ರೀ, ಸುಶ್ಮಿತಾರನ್ನು ಮತ್ತು ಶಾಲಾ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಮತ್ತು ಬಿ.ಇ.ಒ.ಕಚೇರಿಯಿಂದ ಸನ್ಮಾನಿಸಲಾಯಿತು.

ಈ ವೇಳೆ ಎಸ್ಎಸ್ಎಲ್ ಸಿ ನೋಡೆಲ್ ಅಧಿಕಾರಿ ಶಿವಮೂರ್ತಿ ನಾಯ್ಕ, ಇಸಿಓ ಶಿವಕುಮಾರ್, ಬಿಆರ್ ಸಿ ವೆಂಕಟೇಶ್ ರಂಗನಾಥ್ ಬಿ.ಆರ್.ಪಿ. ಸಾಧಿಕ್, ಸಿಆರ್ ಪಿ ಚಂದ್ರಶೇಖರ್, ಶ್ರೀನಿವಾಸ್, ರಾಜಗೋಪಾಲ್, ನಿರ್ದೇಶಕರಾದ ಈರಣ್ಣ, ಮತ್ತು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
2023-24 ನೇ ಸಾಲಿನ ಎಸ್ಎಸ್ಎಲ್ ಸಿ ಮಕ್ಕಳ ವಾರ್ಷಿಕ ಫಲಿತಾಂಶದಲ್ಲಿ ಸಹನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಪಾವಗಡ ತಾಲೂಕಿನಲ್ಲಿ 100% ಫಲಿತಾಂಶ ಬಂದಿದ್ದು ಸತತ 12 ವರ್ಷಗಳಿಂದ ನಿರಂತರವಾಗಿ 100% ಫಲಿತಾಂಶ ಬಂದಿರುತ್ತದೆ. ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ, ಶಿಕ್ಷಕರಿಗೆ ಪ್ರತಿ ಹಂತದಲ್ಲಿ ಮಾರ್ಗದರ್ಶನ ಬೋಧನಾ ಅವಧಿಯಲ್ಲಿ ಪ್ರತಿ ಮಗುವಿಗೆ ವೈಯಕ್ತಿಕ ಗಮನ. ಈ ಶಾಲೆಯ ಶಿಕ್ಷಕರ ಪರಿಶ್ರಮ ಹಾಗೂ ಪೋಷಕರ ಸಹಕಾರ ಮತ್ತು ಇಲಾಖಾ ಅಧಿಕಾರಿಗಳ ಮಾರ್ಗದರ್ಶನ ಈ ಫಲಿತಾಂಶ ಅತ್ಯುತ್ತಮವಾಗಿ ಮೂಡಿಬರಲು ಕಾರಣವಾಗಿರುತ್ತದೆ.
ಹಾಗೆಯೇ ಶಿಕ್ಷಕರಿಗೆ ಮಕ್ಕಳನ್ನು ದತ್ತು ನೀಡಿರುವುದು, ಗೃಹವೇಳಾಪಟ್ಟಿ ಅಳವಡಿಕೆ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಬೋಧನೆ, ಹಳೆಯ ಪಶ್ನೆಪತ್ರಿಕೆಗಳನ್ನು ಬಿಡಿಸುವುದು, ಹಿರಿಯ ವಿದ್ಯಾರ್ಥಿಗಳಿಂದ ಮಾರ್ಗದರ್ಶನ, ಮುಂತಾದ ಕಲಿಕಾ ತಂತ್ರಾಂಶಗಳನ್ನು ಉಪಯೋಗಿಸಿ ಮಕ್ಕಳಿಗೆ ಪರೀಕ್ಷಾಭ್ಯಾಸ ಮಾಡಿಸಿರುವುದು ಶಾಲೆಯು ಶೇಕಡಾ 100% ರಷ್ಟು ಫಲಿತಾಂಶ ಪಡೆಯುವುದಕ್ಕೆ ಕಾರಣವಾಯಿತು.
ಈ ಸಾಧನೆಗೆ ಕಾರಣೀಭೂತರಾದ ಶಿಕ್ಷಕರು, ಪೋಷಕರು ಮತ್ತು ಇಲಾಖೆಗೆ ಅಭಿನಂದನೆಗಳನ್ನು ತಿಳಿಸಲು ಇಚ್ಚಿಸುತ್ತೇವೆ ಎಂದರು.
ವರದಿ: ನಂದೀಶ್ ನಾಯ್ಕ ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


