ತಿಪಟೂರು: ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬ್ಯಾಂಕ್ ನ 105ನೇ ಸಂಸ್ಥಾಪನಾ ದಿನವನ್ನ ಸರಳ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥಾಪನಾ ದಿನದ ಅಂಗವಾಗಿ ಕೇಕ್ ಕತ್ತರಿಸಿ ಬ್ಯಾಂಕ್ ಗ್ರಾಹಕರಿಗೆ ಸಿಹಿ ವಿತರಣೆ ಮಾಡಲಾಯಿತು. ಬ್ಯಾಂಕ್ ಸಂಸ್ಥಾಪಕರಾದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಯೂನಿಯನ್ ಬ್ಯಾಂಕ್ ಅಫ್ ಇಂಡಿಯಾ ಹಾಲ್ಕುರಿಕೆ ಶಾಖಾ ವ್ಯವಸ್ಥಾಪಕರಾದ ಜೆ.ಶ್ರೀನಿವಾಸ್ ಮಾತನಾಡಿ, ಕಾರ್ಪೊರೇಶನ್ ಬ್ಯಾಂಕ್,ಮದ್ರಾಸ್ ಪ್ರಾಂತ್ಯದ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯ ಬ್ಯಾಂಕಿಂಗ್ ಸಂಸ್ಥೆ ಹಾಗೂ ಭಾರತದ ಹಳೆಯ ಬ್ಯಾಂಕುಗಳಲ್ಲಿ ಒಂದು. ಮಾರ್ಚ್ 1906 ರಂದು ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ನೇತೃತ್ವದಲ್ಲಿ ಉಡುಪಿಯಲ್ಲಿ ಸ್ಥಾಪಿಸಲಾಯಿತು. ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಸೌಲಭ್ಯಗಳು ದೊರೆಯಬೇಕು ಎಂದರು.
ಭಾರತ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದುವರೆಯ ಬೇಕೆಂದರೆ ದೇಶದ ಜನ ಆರ್ಥಿಕವಾಗಿ ಮುಂದುವರೆಯ ಬೇಕು ಎನ್ನುವ ತತ್ವದೊಂದಿಗೆ ಸ್ಥಾಪನೆಯಾದ ಬ್ಯಾಂಕ್ ಇಂದು ದೇಶದ ಆರ್ಥಿಕತೆ ತನ್ನದೇ ಆದ ಕೊಡುಗೆ ನೀಡಿದೆ. ದೇಶದಾದ್ಯಂತ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾವಿರಾರು ಶಾಖೆಗಳನ್ನ ತೆರೆಯುವ ಮೂಲಕ ಜನರಿಗೆ ನೆರವು ನೀಡುತ್ತಿದೆ. ಹಾಲ್ಕುರಿಕೆ ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಆರಂಭವಾದಾಗಿನಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಹಕರು ಪ್ರತಿನಿತ್ಯದ ಹಣಕಾಸು ವ್ಯವಹಾರಗಳಿಗೆ ನಗರಕೇಂದ್ರೀಕೃತ ಬ್ಯಾಂಕ್ ಗಳಿಗೆ ಅಲೆಯದೆ ನಿಮ್ಮ ಗ್ರಾಮೀಣ ಭಾಗದಲ್ಲಿ ಉತ್ತಮ ಸೇವೆ ಮಾಡುತ್ತಿರುವ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸೌಲಭ್ಯ ಪಡೆಯಬೇಕು ಎಂದರು.
ನಮ್ಮ ಬ್ಯಾಂಕ್ ನಲ್ಲಿ ಗ್ರಾಹಕರ ಹಣಕಾಸು ವ್ಯವಹಾರಗಳ ಜೊತೆಗೆ ಮುದ್ರಾ ಯೋಜನೆ ಸಾಲ. ಕೆಸಿಎಸ್.ಲೋನ್. ಕೆಎಸ್ ಎಫ್ ಸಿ ಸೇರಿದಂತೆ ಉತ್ತಮವಾದ ಸಾಲ ಸೌಲಭ್ಯ ಸಹ ನೀಡುತ್ತಿದ್ದು ಗ್ರಾಹಕರು ಬ್ಯಾಂಕ್ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಮಹಮ್ಮದ್ ಅಲಿ.ಕೆ.ಎಸ್ ಯಶ್ವಂತ್. ಪರಮೇಶ್ ಹೆಚ್.ಬಿ. ಪ್ರಭಾಕರಮೂರ್ತಿ ಮುಂತಾದವರು ಉಪಸ್ಥಿತರಿದರು.
ವರದಿ: ಆನಂದ್, ತಿಪಟೂರು


