nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

    May 11, 2026

    ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ

    May 11, 2026

    ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್

    May 11, 2026
    Facebook Twitter Instagram
    ಟ್ರೆಂಡಿಂಗ್
    • ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ
    • ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ
    • ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್
    • ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ
    • ಭದ್ರಾವತಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಕೊಲೆ; ಪತ್ನಿ ಹಾಗೂ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ
    • 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಚಿವ ಡಿ.ಸುಧಾಕರ್ ಅವರ ರಾಜಕೀಯ ಹಾದಿ ಹೇಗಿತ್ತು?
    • ಕರ್ನಾಟಕದಲ್ಲಿ ಸಿಎಂ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
    • ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನಲ್ಲಿ ನೂತನ ‘ಧ್ಯಾನ ಮಂದಿರ’ ಉದ್ಘಾಟಿಸಿದ ಪ್ರಧಾನಿ ಮೋದಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ
    ಚಿಕ್ಕನಾಯಕನಹಳ್ಳಿ March 13, 2026

    ಚಿಕ್ಕನಾಯಕನಹಳ್ಳಿಯಲ್ಲಿ ಅಡುಗೆ ಅನಿಲ ಅಭಾವ: ಕಾಳಸಂತೆ ಮಾರಾಟ ಆರೋಪಿಸಿ ಗ್ರಾಹಕರ ಪ್ರತಿಭಟನೆ

    By adminMarch 13, 2026No Comments1 Min Read
    chikkanayakanahalli

    ಚಿಕ್ಕನಾಯಕನಹಳ್ಳಿ: ಪಟ್ಟಣದಲ್ಲಿ ಕಳೆದ ಕೆಲವು ದಿನಗಳಿಂದ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ನೂರಾರು ಗ್ರಾಹಕರು ಗುರುವಾರ ಸ್ಥಳೀಯ ಗ್ಯಾಸ್ ಏಜೆನ್ಸಿ ಕಚೇರಿಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಸಿಲಿಂಡರ್ ಬುಕ್ ಮಾಡಿ ಹಲವು ದಿನಗಳಾದರೂ ಪೂರೈಕೆಯಾಗುತ್ತಿಲ್ಲ ಎಂದು ಗ್ರಾಹಕರು ದೂರಿದ್ದಾರೆ. “ಸಿಲಿಂಡರ್ ಬುಕ್ ಮಾಡಿ ನಾಲ್ಕು ದಿನಗಳಾಗಿವೆ. ಏಜೆನ್ಸಿಯವರನ್ನು ವಿಚಾರಿಸಿದರೆ ಇನ್ನೂ ಒಂದು ವಾರ ಕಾಯಬೇಕು ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡಲು ಅನಿಲವಿಲ್ಲದೆ ಪರದಾಡುವಂತಾಗಿದೆ” ಎಂದು ಸ್ಥಳೀಯ ನಿವಾಸಿ ಅಂಬಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    Provided by
    Provided by

    ಮತ್ತೊಬ್ಬ ನಿವಾಸಿ ಗೋಪಿ ಅವರು ಮಾತನಾಡಿ, “ಸಾಮಾನ್ಯ ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಮಾತ್ರ ದಾಸ್ತಾನು ಇಲ್ಲ ಎಂಬ ಸಬೂಬು ಹೇಳಲಾಗುತ್ತಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಏಜೆನ್ಸಿ ಸ್ಪಷ್ಟನೆ:

    ಈ ಕುರಿತು ಪ್ರತಿಕ್ರಿಯಿಸಿದ ಗ್ಯಾಸ್ ಏಜೆನ್ಸಿಯ ಆದರ್ಶ್, “ಸದ್ಯ ಪಟ್ಟಣದಲ್ಲಿ 2,500ಕ್ಕೂ ಹೆಚ್ಚು ಸಿಲಿಂಡರ್ ಬುಕಿಂಗ್‌ ಗಳು ಬಾಕಿ ಇವೆ. ಆದರೆ ನಮಗೆ ಕೇವಲ 342 ಸಿಲಿಂಡರ್‌ ಗಳು ಮಾತ್ರ ಪೂರೈಕೆಯಾಗಿವೆ. ದಾಸ್ತಾನು ಕೊರತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಅಭಾವ ಉಂಟಾಗಬಹುದೆಂಬ ಆತಂಕದಲ್ಲಿ ಜನರು ಮುನ್ನೆಚ್ಚರಿಕೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬುಕಿಂಗ್ ಮಾಡುತ್ತಿದ್ದಾರೆ. ಲಭ್ಯವಿರುವ ಸಿಲಿಂಡರ್‌ಗಳನ್ನು ಜೇಷ್ಠತೆ (Priority) ಆಧಾರದ ಮೇಲೆ ವಿತರಿಸಲಾಗುತ್ತಿದೆ. ಶೀಘ್ರದಲ್ಲೇ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ” ಎಂದು ಭರವಸೆ ನೀಡಿದ್ದಾರೆ.

    ಗ್ಯಾಸ್ ಏಜೆನ್ಸಿ ಮುಂದೆ ‘ದಾಸ್ತಾನು ಇಲ್ಲ’ ಎಂಬ ಫಲಕಗಳನ್ನು ನೋಡಿ ಗ್ರಾಹಕರು ಅಸಹಾಯಕರಾಗಿದ್ದು, ಶೀಘ್ರವಾಗಿ ಪೂರೈಕೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಹುಳಿಯಾರು: ಮಳೆ ಕೊರತೆಯಿಂದ ಕಂಗಾಲಾದ ರೈತರು; ಟ್ಯಾಂಕರ್ ನೀರಿಗೆ ಹೆಚ್ಚಿದ ಬೇಡಿಕೆ

    May 7, 2026

    ಚಿಕ್ಕನಾಯಕನಹಳ್ಳಿ: ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್‌ — ಸಾರ್ವಜನಿಕರಿಗೆ ಸುವರ್ಣಾವಕಾಶ

    May 6, 2026

    ಮೇ 10ರಂದು ಮೃತ್ಯುಂಜಯ ಶ್ರೀಗಳ ಗುರುವಂದನೆ: ಬೆಳ್ಳಾವಿ ಕಾರದ ವೀರ ಬಸವ ಮಹಾಸ್ವಾಮಿ

    May 3, 2026

    Leave A Reply Cancel Reply

    Our Picks

    ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ: ತಮಿಳುನಾಡಿನಲ್ಲಿ ನಟ ವಿಜಯ್ ಅಬ್ಬರ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುನ್ನಡೆ

    May 4, 2026

    ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕೋರ್ಟ್ ಕದ ತಟ್ಟಿದ ನಟ ದರ್ಶನ್: ಮೇ 4ಕ್ಕೆ ವಿಚಾರಣೆ

    April 29, 2026

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸಿರಾ

    ಕಳ್ಳಂಬೆಳ್ಳ ಪೊಲೀಸರಿಂದ ರಕ್ಷಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ

    May 11, 2026

    ಸಿರಾ: ತಾಲ್ಲೂಕಿನ ನವ್ಯದಿಶ ಸಂಸ್ಥೆಯ ಯುವಚಾವಡಿ ಕಾರ್ಯಕ್ರಮದಡಿ ಯೂತ್ ರಿಸೋರ್ಸ್ ಹಬ್‌ನ ಹದಿಹರೆಯದವರು ಮತ್ತು ಯುವಜನರಿಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ…

    ಹರ್ತಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಸಚಿವ ಡಾ. ಜಿ. ಪರಮೇಶ್ವರ್ ಶಂಕುಸ್ಥಾಪನೆ

    May 11, 2026

    ಸಚಿವ ಡಿ.ಸುಧಾಕರ್ ಪಾರ್ಥಿವ ಶರೀರಕ್ಕೆ ನಮನ: ಭಾವುಕರಾದ ಕೆ.ಎನ್.ರಾಜಣ್ಣ, ಕಂಬನಿ ಮಿಡಿದ ಜಿ.ಪರಮೇಶ್ವರ್

    May 11, 2026

    ಸಚಿವ ಡಿ. ಸುಧಾಕರ್ ನಿಧನ: ಚಿತ್ರದುರ್ಗ ಜಿಲ್ಲೆಗೆ ನಾಳೆ ರಜೆ, ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ

    May 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.