nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು

    November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026
    Facebook Twitter Instagram
    ಟ್ರೆಂಡಿಂಗ್
    • ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ
    • ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ
    • ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
    • ಎಸ್.ಎಸ್. ವೃತ್ತದಲ್ಲಿ ಎಲ್‌ ಇಡಿ ಡಿಸ್‌ ಪ್ಲೇ ಕಾಮಗಾರಿ ವೀಕ್ಷಣೆ |  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಡಾ.ಜಿ.ಪರಮೇಶ್ವರ್
    • ಅರಸಪುರದಲ್ಲಿ ಪ್ರಜಾಸೇವಾ ಅಭಿಯಾನ: 101 ಅರ್ಜಿ ಸಲ್ಲಿಕೆ | 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ತಾಲೂಕು ಆಡಳಿತ
    • ಜೆಜೆಎಂನಲ್ಲಿ ತುಮಕೂರು ಕ್ಷೇತ್ರಕ್ಕೆ 5ನೇ ಸ್ಥಾನ:  20ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಪ್ರಗತಿ; ತುಮಕೂರು–ಬೆಂಗಳೂರು ರೈಲು ಮಾರ್ಗಕ್ಕೂ ಡಿಪಿಆರ್ ಸಿದ್ಧ
    • ಚುನಾವಣೆ ನೀತಿ ಸಂಹಿತೆ ಬಳಿಕ ನಿಟ್ಟೂರಿನಲ್ಲಿ ಐದನೇ ಪ್ರಜಾಸೇವಾ ಅಭಿಯಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    ಚಿಕ್ಕನಾಯಕನಹಳ್ಳಿ November 8, 2026

    ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು

    By Ganesh TumkuruNovember 8, 2026No Comments2 Mins Read
    kannada

    ಚಿಕ್ಕನಾಯಕನಹಳ್ಳಿ: ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸುವಲ್ಲಿ ಮಹಿಳೆಯರು ಮಹತ್ವದ ಪಾತ್ರ ವಹಿಸುತ್ತಿದ್ದು, ಅವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್‌ ಬಾಬು ತಿಳಿಸಿದರು.

    ಪಟ್ಟಣದ ಅಕ್ಕಮಹಾದೇವಿ ಮಹಿಳಾ ಸಮಾಜದ ಸಮುದಾಯ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಮಹಿಳಾ ಸಂವೇದನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಇಂದಿನ ತಾಂತ್ರಿಕ ಯುಗದಲ್ಲಿ ಮಹಿಳೆಯರು ತಾಯಿ, ತಂಗಿ, ಸೊಸೆ ಸೇರಿದಂತೆ ವಿವಿಧ ಸಂಬಂಧಗಳ ಮೂಲಕ ಕುಟುಂಬದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವುದರ ಜತೆಗೆ ಅವರಿಗೆ ದೊರೆಯಬೇಕಾದ ಅವಕಾಶ ಮತ್ತು ಗೌರವ ನೀಡಬೇಕು. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮಹಿಳೆಯರನ್ನು ಸದೃಢರನ್ನಾಗಿಸುವ ಅಗತ್ಯವಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಮೀಸಲಾತಿ ಹಾಗೂ ಅವಕಾಶಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಮಹಿಳೆಯರ ಹಕ್ಕುಗಳು, ಸಾಮಾಜಿಕ ಭಾಗವಹಿಸುವಿಕೆ ಮತ್ತು ಸಬಲೀಕರಣದ ಕುರಿತು ಚರ್ಚಿಸಲು ಇಂತಹ ವೇದಿಕೆಗಳು ಹೆಚ್ಚು ನಿರ್ಮಾಣವಾಗಬೇಕು. ಸಮ್ಮೇಳನದ ಅಂಗವಾಗಿ ಆಯೋಜಿಸಿರುವ ಮಹಿಳಾ ಸಂವೇದನೆ ಗೋಷ್ಠಿ ಅರ್ಥಪೂರ್ಣವಾಗಿದೆ ಎಂದರು.

    ಮಹಿಳೆಯರ ದುಡಿಮೆಗೆ ಮನ್ನಣೆ ಸಿಗಲಿ

    ಸಮಕಾಲೀನ ಗ್ರಾಮೀಣ ಮತ್ತು ನಗರ ಮಹಿಳೆಯರ ಸಂವೇದನೆ ಹಾಗೂ ಸ್ಥಿತ್ಯಂತರಗಳ ಕುರಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷೆ ಎನ್.ಇಂದಿರಮ್ಮ ವಿಷಯ ಮಂಡಿಸಿದರು.

    ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಇಂದಿಗೂ ಅನೇಕ ಮಹಿಳೆಯರು ಮೂಢನಂಬಿಕೆಗಳಿಗೆ ಒಳಗಾಗುತ್ತಿದ್ದು, ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮಹಿಳೆಯರ ದುಡಿಮೆಯನ್ನು ಕೇವಲ ಹಣ ಸಂಪಾದಿಸುವ ಕೆಲಸಕ್ಕೆ ಸೀಮಿತಗೊಳಿಸಲಾಗುತ್ತಿದೆ. ಮನೆಯಲ್ಲಿ ನಿರ್ವಹಿಸುವ ಕೌಟುಂಬಿಕ ಕೆಲಸಗಳಿಗೆ ದುಡಿಮೆಯ ಮನ್ನಣೆ ದೊರೆಯುತ್ತಿಲ್ಲ. ಮಹಿಳೆಯರ ಶ್ರಮಕ್ಕೆ ಸೂಕ್ತ ಗೌರವ ನೀಡುವ ಜತೆಗೆ ಅವರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.

    ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿ ಮತ್ತು ಒಳನೋಟ ಕುರಿತು ನವೋದಯ ಕಾಲೇಜಿನ ಪ್ರಾಂಶುಪಾಲ ಸಿ.ರವಿಕುಮಾರ್ ವಿಷಯ ಮಂಡಿಸಿದರು. ತಾಲ್ಲೂಕಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹಿಳೆಯರ ಕೊಡುಗೆ ಕುರಿತು ಹುಳಿಯಾರಿನ ಬಿ.ಎಂ.ಎಸ್. ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಬಿ.ಸರಸ್ವತಿ ಮಾತನಾಡಿದರು.

    ನಂತರ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಸುಮಾರು 11 ಮಹಿಳಾ ಕವಿಯರು ತಮ್ಮ ಕವನಗಳನ್ನು ವಾಚಿಸಿದರು.

    ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್.ರವಿ ಕುಮಾರ್, ಉಪಾಧ್ಯಕ್ಷ ನಂದೀಶ್ ಬಟ್ಲೇರಿ ಉಪಸ್ಥಿತರಿದ್ದರು. ಮಹಿಳಾ ಘಟಕದ ಸಂಚಾಲಕಿ ವರಮಹಾಲಕ್ಷ್ಮಿ ಟಿ.ಆರ್. ಆಶಯ ನುಡಿಗಳನ್ನಾಡಿದರು.

    ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ವಹಿಸಿದ್ದರು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ರಂಗಮ್ಮ ಹೊದೇಕಲ್ ವಹಿಸಿದ್ದರು. ಕವಯತ್ರಿ ರಾಧಾಮಣಿ ಆಶಯ ನುಡಿಗಳನ್ನಾಡಿದರು. ನಾಗಮಣಿ, ಭವಾನಿ ಜಯರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಮುಂದಿನ ವರ್ಷ ಚಿಕ್ಕನಾಯಕನಹಳ್ಳಿ, ಕಂದಿಕೆರೆ ಭಾಗಕ್ಕೆ ಹೇಮಾವತಿ ನೀರು | ನಾಲಾ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಶಾಸಕ ಸಿ.ಬಿ. ಸುರೇಶ್‌ ಬಾಬು ಸೂಚನೆ

    November 6, 2026

    ವಿಶೇಷ ಚೇತನರಿಗೆ ಸಮಾಜದಲ್ಲಿ ಮೊದಲ ಆದ್ಯತೆ ನೀಡಬೇಕು: ಶಾಸಕ ಸಿ.ಬಿ.ಸುರೇಶ್‌ ಬಾಬು

    November 5, 2026

    12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಶಿವತಾರಕ್ ಆಯ್ಕೆ | ಶಾಸಕ ಸಿ.ಬಿ. ಸುರೇಶ್‌ ಬಾಬು ನೇತೃತ್ವದಲ್ಲಿ ಸಮ್ಮೇಳನಕ್ಕೆ ಸಿದ್ಧತೆ

    November 3, 2026

    Leave A Reply Cancel Reply

    Our Picks

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    ವರದಿ: ಅರವಿಂದ ಮಲ್ಲಿಗೆ, ಬೀದರ್ ಔರಾದ್ (ಬೀದರ್): ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಾಗ ಗ್ರಾಮೀಣ ಭಾಗದ ಬಡ ಕುಟುಂಬಗಳ…

    ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು

    November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026

    ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.