nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು

    November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026
    Facebook Twitter Instagram
    ಟ್ರೆಂಡಿಂಗ್
    • ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ
    • ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ
    • ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
    • ಎಸ್.ಎಸ್. ವೃತ್ತದಲ್ಲಿ ಎಲ್‌ ಇಡಿ ಡಿಸ್‌ ಪ್ಲೇ ಕಾಮಗಾರಿ ವೀಕ್ಷಣೆ |  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಡಾ.ಜಿ.ಪರಮೇಶ್ವರ್
    • ಅರಸಪುರದಲ್ಲಿ ಪ್ರಜಾಸೇವಾ ಅಭಿಯಾನ: 101 ಅರ್ಜಿ ಸಲ್ಲಿಕೆ | 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ತಾಲೂಕು ಆಡಳಿತ
    • ಜೆಜೆಎಂನಲ್ಲಿ ತುಮಕೂರು ಕ್ಷೇತ್ರಕ್ಕೆ 5ನೇ ಸ್ಥಾನ:  20ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಪ್ರಗತಿ; ತುಮಕೂರು–ಬೆಂಗಳೂರು ರೈಲು ಮಾರ್ಗಕ್ಕೂ ಡಿಪಿಆರ್ ಸಿದ್ಧ
    • ಚುನಾವಣೆ ನೀತಿ ಸಂಹಿತೆ ಬಳಿಕ ನಿಟ್ಟೂರಿನಲ್ಲಿ ಐದನೇ ಪ್ರಜಾಸೇವಾ ಅಭಿಯಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ
    ತುಮಕೂರು November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    By Ganesh TumkuruNovember 8, 2026No Comments3 Mins Read
    knr

    ಮಧುಗಿರಿ: ಜಿಲ್ಲೆಯ ಕಾಂಗ್ರೆಸ್‌ ನ ಪ್ರಭಾವಿ ನಾಯಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಸಚಿವ ಬಾಲಕೃಷ್ಣ ಅವರು ಲಘುವಾಗಿ ಮಾತನಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಮಾಗಡಿಯಲ್ಲಿಯೇ ಅವರ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಧುಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣ ರೆಡ್ಡಿ ಎಚ್ಚರಿಕೆ ನೀಡಿದರು.

    ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಸಚಿವ ಬಾಲಕೃಷ್ಣ ಅವರು ಕೆ.ಎನ್.ರಾಜಣ್ಣ ಅವರ ಕುರಿತು ನೀಡಿರುವ ಹೇಳಿಕೆಗಳನ್ನು ಖಂಡಿಸಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ ಕೆ.ಎನ್.ರಾಜಣ್ಣ ಅವರ ಬಗ್ಗೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬಂದಿರುವ ಸಚಿವ ಬಾಲಕೃಷ್ಣ ಅವರು ಕೀಳಾಗಿ ಮಾತನಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜ್ಯ ಹೈಕಮಾಂಡ್ ಮೌನ ವಹಿಸಿರುವುದೂ ಸಮಂಜಸವಲ್ಲ. ಜಿಲ್ಲೆಯಲ್ಲಿ ರಾಜಣ್ಣ ಅವರನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂಬುದನ್ನು ಇತಿಹಾಸವೇ ಸಾಬೀತುಪಡಿಸಿದೆ ಎಂದರು.

    ಇತ್ತೀಚೆಗೆ ಕೊಡಿಗೇನಹಳ್ಳಿಯಲ್ಲಿ ಎನ್‌ಡಿಎ ಪಕ್ಷದ ಎಲ್.ಸಿ.ನಾಗರಾಜ್ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಅವರ ಕುಟುಂಬ ನಮ್ಮ ಅಭ್ಯರ್ಥಿಗೆ ಸಹಕಾರ ನೀಡಿದೆ ಎಂದು ಹೇಳಿ ಅಭಿನಂದನೆ ಸಲ್ಲಿಸಿರುವುದು ಸರಿಯಲ್ಲ. ರಾಜಣ್ಣ ಅವರು ಎಲ್ಲಿಯೂ ಪಕ್ಷದ್ರೋಹ ಮಾಡಿಲ್ಲ. ಬದಲಾಗಿ ನಮ್ಮೆಲ್ಲರನ್ನೂ ಸಭೆಗೆ ಕರೆದು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಸೂಚಿಸಿದ್ದರು. ಎಲ್.ಸಿ.ನಾಗರಾಜ್ ಅವರು ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಮಾಡಲಿ, ಆದರೆ ಆಧಾರರಹಿತ ಆರೋಪ ಹಾಗೂ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

    ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 26 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿಯೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಹೀಗಿರುವಾಗ ಒಬ್ಬ ರಾಜಣ್ಣ ಅವರನ್ನೇ ಹೊಣೆ ಮಾಡುವುದು ಯಾವ ನ್ಯಾಯ? ಎಂಬುದನ್ನು ಸಚಿವ ಬಾಲಕೃಷ್ಣ ಅವರು ಅರ್ಥಮಾಡಿಕೊಳ್ಳಬೇಕು. ರಾಜಣ್ಣ ಅವರ ತಂದೆಯ ಊರು ಮಾಗಡಿಯಾಗಿದ್ದು, ಅಲ್ಲಿ ನಾಯಕ ಸಮುದಾಯದ ಸುಮಾರು 20 ಸಾವಿರ ಜನರಿದ್ದಾರೆ. ಆದ್ದರಿಂದ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಜಿಲ್ಲೆಯ ಹತ್ತು ಕ್ಷೇತ್ರಗಳಲ್ಲಿಯೂ ರಾಜಣ್ಣ ತಮ್ಮದೇ ಆದ ರಾಜಕೀಯ ಪ್ರಭಾವ ಹೊಂದಿದ್ದಾರೆ. ಅವರನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಅಪಾಯ ಎದುರಾಗಲಿದೆ. ಒಬ್ಬ ಬಾಲಕೃಷ್ಣ ಅವರಿಂದಲೇ ಮತ್ತೊಂದು ಕ್ಷೇತ್ರವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

    ರಾಜ್ಯ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಗಂಗಣ್ಣ ಮಾತನಾಡಿ, ಕೆ.ಎನ್.ರಾಜಣ್ಣ ಅವರು ಮಧುಗಿರಿ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಕೇವಲ ವ್ಯಕ್ತಿಯಲ್ಲ, ಒಂದು ಶಕ್ತಿ. ಅವರ ಬಗ್ಗೆ ಮಾತನಾಡುವ ನೈತಿಕತೆ ಸಚಿವ ಬಾಲಕೃಷ್ಣ ಅವರಿಗಿಲ್ಲ. ನೇರ ನುಡಿಯ ರಾಜಕಾರಣಿಯಾಗಿರುವ ರಾಜಣ್ಣ ಅವರ ಶಕ್ತಿ ಇಡೀ ಜಿಲ್ಲೆಗೆ ತಿಳಿದಿದೆ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದರು.

    ಬಾಲಕೃಷ್ಣ ಅವರು ಬೇರೆ ಪಕ್ಷದಿಂದ ಕಾಂಗ್ರೆಸ್‌ಗೆ ಬಂದವರು. ಆದರೆ ರಾಜಣ್ಣ ಅವರು ಮೂಲ ಕಾಂಗ್ರೆಸ್ಸಿಗರು. ವಿಧಾನ ಪರಿಷತ್ ಚುನಾವಣೆಯಲ್ಲಿ ಪುಟ್ಟಣ್ಣ ಅವರ ಸೋಲಿಗೆ ಯಾರು ಕಾರಣ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಸಮಸ್ಯೆಗಳಿದ್ದರೆ ಕೆಪಿಸಿಸಿಗೆ ದೂರು ಸಲ್ಲಿಸಲಿ. ರಾಜೀನಾಮೆ ಕೇಳಲು ನೀವು ಯಾರು? ಸಚಿವರಾಗಿ ನಿಮ್ಮ ಕೊಡುಗೆ ಏನು? ಮೊದಲು ನಿಮ್ಮ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಹೇಳಿದರು.

    ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ ಮಾತನಾಡಿ, ರಾಜಣ್ಣ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಶಕ್ತಿ ತುಂಬಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ರಾಜೇಂದ್ರ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರೆ ತಪ್ಪೇನು? ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆ ಕುರಿತು ಚರ್ಚಿಸಲು ತೆರಳಿರುವುದಕ್ಕೆ ಅಪಾರ್ಥ ಕಲ್ಪಿಸುವುದು ಸರಿಯಲ್ಲ. ಯಾರನ್ನೋ ಮೆಚ್ಚಿಸಲು ಸಚಿವ ಬಾಲಕೃಷ್ಣ ಅವರು ಮಾತನಾಡಬಾರದು ಎಂದು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಟಿ.ಗೋವಿಂದಪ್ಪ, ಸಿದ್ದಾಪುರ ಈರಣ್ಣ, ವಕೀಲ ನಾರಾಯಣ ಗೌಡ್ರು, ಕಲ್ಲಹಳ್ಳಿ ದೇವರಾಜು, ಮೈದನಹಳ್ಳಿ ಕಾಂತರಾಜು, ಅನಿಲ್ ಕುಮಾರ್, ತಿಮ್ಮಾರೆಡ್ಡಿ, ಅಶ್ವತ್ಥಪ್ಪ, ಬಾಬಾ ಫಕ್ರುದ್ದೀನ್, ಮರಿಯಣ್ಣ, ಅಯೂಬ್, ಕೆ.ಪ್ರಕಾಶ್, ಎಸ್.ಬಿ.ಟಿ. ರಾಮು, ಕಿಶೋರ್, ಶ್ರೀಧರ್, ಉಮೇಶ್, ಸಾದಿಕ್, ಶ್ರೀನಿವಾಸ ರೆಡ್ಡಿ, ಶನಿವಾರಂ ರೆಡ್ಡಿ, ಡಿ.ಹೆಚ್.ನಾಗರಾಜು, ಶಿವಪ್ಪನಾಯಕ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

    November 8, 2026

    ಎಸ್.ಎಸ್. ವೃತ್ತದಲ್ಲಿ ಎಲ್‌ ಇಡಿ ಡಿಸ್‌ ಪ್ಲೇ ಕಾಮಗಾರಿ ವೀಕ್ಷಣೆ |  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಡಾ.ಜಿ.ಪರಮೇಶ್ವರ್

    November 8, 2026

    ಶ್ರೀ ಶಿವಕುಮಾರ ಸ್ವಾಮಿ ವೃತ್ತದಲ್ಲಿ ಅಳವಡಿಸುತ್ತಿರುವ ಎಲ್‌ ಇಡಿ ಲೈಟಿಂಗ್ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

    November 6, 2026

    Leave A Reply Cancel Reply

    Our Picks

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026

    ವಂಚನೆಗೆ ಹಣ ಕಳೆದುಕೊಂಡವರಿಗೆ ಬ್ಯಾಂಕ್‌ ಗಳೇ ಪರಿಹಾರ ನೀಡಬೇಕಾ? ಸುಪ್ರೀಂ ಕೋರ್ಟ್ ಮಹತ್ವದ ಪ್ರಸ್ತಾಪ ಇಲ್ಲಿದೆ

    October 31, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    ವರದಿ: ಅರವಿಂದ ಮಲ್ಲಿಗೆ, ಬೀದರ್ ಔರಾದ್ (ಬೀದರ್): ಮಳೆ ಕೈಕೊಟ್ಟು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಾಗ ಗ್ರಾಮೀಣ ಭಾಗದ ಬಡ ಕುಟುಂಬಗಳ…

    ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು

    November 8, 2026

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026

    ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.