nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026
    Facebook Twitter Instagram
    ಟ್ರೆಂಡಿಂಗ್
    • ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?
    • ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!
    • ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?
    • ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?
    • ಭವಿಷ್ಯದ ಜಗತ್ತನ್ನೇ ಬದಲಿಸಲಿದೆಯೇ ಎಲಾನ್ ಮಸ್ಕ್‌ ನ ಐದು ಕಂಪನಿಗಳ ಮಹಾ ಯೋಜನೆ?
    • ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!
    • ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?
    ರಾಷ್ಟ್ರೀಯ ಸುದ್ದಿ November 9, 2026

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    By Ganesh TumkuruNovember 9, 2026No Comments2 Mins Read
    sweets

    ಹಬ್ಬ ಹರಿದಿನಗಳೆಂದರೆ ಸಿಹಿತಿಂಡಿಗಳ ಸಂಭ್ರಮ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಸಿಹಿ ಖರೀದಿಸಿ ಕುಟುಂಬದವರು, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಹಂಚುವುದು ಸಂಪ್ರದಾಯ. ಆದರೆ ಇದೀಗ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ವಿಶೇಷ ಸಿಹಿತಿಂಡಿಯೊಂದು ತನ್ನ ವಿಭಿನ್ನ ವಿನ್ಯಾಸದ ಜೊತೆಗೆ ದುಬಾರಿ ಬೆಲೆಯಿಂದಲೂ ಭಾರಿ ಗಮನ ಸೆಳೆಯುತ್ತಿದೆ. ಒಂದು ಸಣ್ಣ ತುಂಡಿನ ಬೆಲೆ ಬರೋಬ್ಬರಿ ₹1,111 ಎಂದರೆ ನೀವು ನಂಬಲೇಬೇಕು!

    ಹೌದು, ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ತಯಾರಾಗುತ್ತಿರುವ ಈ ವಿಶೇಷ ಸಿಹಿತಿಂಡಿಯ ಹೆಸರು ‘ತ್ಯೋಹಾರ್ ಅಷರ್ಫಿ’ (Tyohar Asharfi). ಜೈಪುರದ ವೈಶಾಲಿ ನಗರದಲ್ಲಿರುವ ತ್ಯೋಹಾರ್ ಸ್ವೀಟ್ಸ್ ಮಳಿಗೆಯಲ್ಲಿ ಇದು ಗ್ರಾಹಕರ ಗಮನ ಸೆಳೆಯುತ್ತಿದೆ.

    ಈ ಸಿಹಿತಿಂಡಿಯ ವಿಶೇಷತೆ ಎಂದರೆ ಇದರ ಆಕಾರ. ಹಿಂದಿನ ಕಾಲದಲ್ಲಿ ರಾಜರು ಬಳಸುತ್ತಿದ್ದ ಚಿನ್ನದ ನಾಣ್ಯಗಳ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ನೋಡಲು ಚಿನ್ನದ ನಾಣ್ಯದಂತೆ ಕಾಣುವ ಈ ಮಿಠಾಯಿ ಹಬ್ಬದ ಉಡುಗೊರೆಯಾಗಿ ನೀಡಲು ವಿಶೇಷವಾಗಿ ಸಿದ್ಧಪಡಿಸಲಾಗಿದೆ.

    ಈ ಮಿಠಾಯಿಯ ಒಂದು ತುಂಡಿನ ತೂಕ ಕೇವಲ 9 ಗ್ರಾಂ. ಆದರೆ ಅದರ ಬೆಲೆ ₹1,111. ಒಂಬತ್ತು ತುಂಡುಗಳಿರುವ ಒಂದು ಬಾಕ್ಸ್ ಖರೀದಿಸಲು ₹9,999 ಪಾವತಿಸಬೇಕು. ಈ ಲೆಕ್ಕಾಚಾರದ ಪ್ರಕಾರ ಒಂದು ಕೆ.ಜಿ. ಸಿಹಿತಿಂಡಿಯ ಬೆಲೆ ಸುಮಾರು ₹1.23 ಲಕ್ಷಕ್ಕೂ ಅಧಿಕವಾಗುತ್ತದೆ. ಹೀಗಾಗಿ ಇದು ಸಾಮಾನ್ಯ ಸಿಹಿತಿಂಡಿಯಲ್ಲ, ಐಷಾರಾಮಿ ಉಡುಗೊರೆಯಾಗಿ ಗುರುತಿಸಿಕೊಂಡಿದೆ.

    ಈ ದುಬಾರಿ ಮಿಠಾಯಿಯಲ್ಲಿ ಏನಿದೆ?

    ಈ ವಿಶೇಷ ಸಿಹಿತಿಂಡಿ ತಯಾರಿಸಲು ಬಾದಾಮಿ, ಕೇಸರಿ, ಸ್ವರ್ಣ ಭಸ್ಮ ಹಾಗೂ ತಿನ್ನಬಹುದಾದ ಚಿನ್ನದ ಹಾಳೆಗಳನ್ನು ಬಳಸಲಾಗುತ್ತದೆ. ಇದರ ಮೇಲ್ಭಾಗಕ್ಕೆ 24 ಕ್ಯಾರೆಟ್ ತಿನ್ನಬಹುದಾದ ಚಿನ್ನದ ಲೇಪನ ಮಾಡಲಾಗುತ್ತದೆ. ಚಿನ್ನದ ನಾಣ್ಯದ ಆಕಾರ ಮತ್ತು ರಾಜಮನೆತನದ ವಿನ್ಯಾಸ ಈ ಮಿಠಾಯಿಗೆ ಮತ್ತಷ್ಟು ಆಕರ್ಷಣೆ ನೀಡಿದೆ.

    ಈ ಸಿಹಿತಿಂಡಿಯ ವಿನ್ಯಾಸದ ಹಿಂದೆಯೂ ವಿಶೇಷ ಕಲ್ಪನೆಯಿದೆ. ಹಿಂದಿನ ಕಾಲದಲ್ಲಿ ರಾಜರು ತಮ್ಮನ್ನು ಭೇಟಿಯಾಗಲು ಬರುತ್ತಿದ್ದ ಗಣ್ಯರಿಗೆ ಗೌರವದ ಸಂಕೇತವಾಗಿ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಅದೇ ಸಂಪ್ರದಾಯವನ್ನು ಇಂದಿನ ಹಬ್ಬದ ಉಡುಗೊರೆಯ ರೂಪದಲ್ಲಿ ಪರಿಚಯಿಸುವ ಉದ್ದೇಶದಿಂದ ‘ತ್ಯೋಹಾರ್ ಅಷರ್ಫಿ’ಯನ್ನು ತಯಾರಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಅಂಜಲಿ ಜೈನ್ ತಿಳಿಸಿದ್ದಾರೆ.ಇನ್ನು ಇದರ ಒಂದು ತುಂಡಿಗೆ ₹1,111 ಬೆಲೆ ನಿಗದಿಪಡಿಸಿರುವುದಕ್ಕೂ ಕಾರಣವಿದೆ. ಭಾರತೀಯ ಸಂಪ್ರದಾಯದಲ್ಲಿ 1111 ಸಂಖ್ಯೆಯನ್ನು ಶುಭದ ಸಂಕೇತವಾಗಿ ಪರಿಗಣಿಸುವ ಹಿನ್ನೆಲೆಯಲ್ಲಿ ಈ ಬೆಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯವರು ಹೇಳಿದ್ದಾರೆ.

    ಅಷರ್ಫಿ ಮಾತ್ರವಲ್ಲದೆ ಜೈಪುರದ ರತ್ನಗಳ ಪರಂಪರೆಯನ್ನು ಪ್ರತಿಬಿಂಬಿಸುವ ‘ತ್ಯೋಹಾರ್ ನವರತ್ನ’ ಹೆಸರಿನಲ್ಲಿಯೂ ವಿಶೇಷ ಸಿಹಿತಿಂಡಿಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಒಂಬತ್ತು ಬಗೆಯ ಕಾಜು ಕಟ್ಲಿಗಳನ್ನು ಸೇರಿಸಲಾಗಿದೆ.

    ಪಿಸ್ತಾ, ಕೇಸರಿ, ಗುಲಾಬಿ ಮತ್ತು ಸ್ಟ್ರಾಬೆರಿ ಸೇರಿದಂತೆ ವಿಭಿನ್ನ ರುಚಿಗಳಲ್ಲಿ ತಯಾರಾಗಿರುವ ಈ ಸಿಹಿತಿಂಡಿಗಳಿಗೆ ವಿವಿಧ ರತ್ನಗಳ ಬಣ್ಣ ಮತ್ತು ಆಕಾರವನ್ನು ಹೋಲುವಂತೆ ವಿನ್ಯಾಸ ನೀಡಲಾಗಿದೆ. ಕೃತಕ ಬಣ್ಣಗಳ ಬದಲಿಗೆ ನೈಸರ್ಗಿಕ ಬಣ್ಣ ಮತ್ತು ರುಚಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

    ಒಂಬತ್ತು ಬಗೆಯ ಸಿಹಿತಿಂಡಿಗಳನ್ನು ಒಳಗೊಂಡಿರುವ ‘ತ್ಯೋಹಾರ್ ನವರತ್ನ’ ಬಾಕ್ಸ್ ಬೆಲೆ ₹3,333 ಎಂದು ವರದಿಯಾಗಿದೆ.ದೀಪಾವಳಿ ಸಿಹಿ ಸಂಭ್ರಮಕ್ಕೆ ರಾಜಮನೆತನದ ವೈಭವದ ಸ್ಪರ್ಶ ನೀಡಿರುವ ಈ ಚಿನ್ನದ ಮಿಠಾಯಿ ಇದೀಗ ತನ್ನ ಬೆಲೆಯಿಂದಲೇ ಸುದ್ದಿಯಾಗಿದೆ. ಸಿಹಿತಿಂಡಿ ತಿನ್ನುವುದಕ್ಕಿಂತ ಉಡುಗೊರೆಯಾಗಿ ನೀಡಲು ಮತ್ತು ವಿಶೇಷ ಸಂದರ್ಭಗಳನ್ನು ಸ್ಮರಣೀಯವಾಗಿಸಲು ಇದನ್ನು ರೂಪಿಸಿರುವುದು ಗಮನಾರ್ಹ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

    Leave A Reply Cancel Reply

    Our Picks

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ತಿನ್ನಬಹುದಾದ ಚಿನ್ನದ ಸಿಹಿ ತಯಾರಿ; ಜೈಪುರದ ಮಿಠಾಯಿ ಈಗ ಭಾರಿ ಚರ್ಚೆ! ಇದರ ಬೆಲೆ ಎಷ್ಟು ಗೊತ್ತೆ ?

    November 9, 2026

    ಹಬ್ಬ ಹರಿದಿನಗಳೆಂದರೆ ಸಿಹಿತಿಂಡಿಗಳ ಸಂಭ್ರಮ. ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಸಿಹಿ ಖರೀದಿಸಿ ಕುಟುಂಬದವರು, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಹಂಚುವುದು ಸಂಪ್ರದಾಯ.…

    ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ: ನವೆಂಬರ್ ಈ ದಿನಗಳು ಬ್ಯಾಂಕ್ ರಜೆ!

    November 8, 2026

    ರಾಮಾಯಣದ ಆ ಒಂದು ಘಟನೆಗೂ ದೀಪಾವಳಿಗೂ ಅವಿನಾಭಾವ ನಂಟು; ನಿಮಗೆ ಗೊತ್ತೇ ಈ ಕಥೆ?

    November 8, 2026

    ಸೀತೆಯನ್ನು ರಕ್ಷಿಸಲು ರಾವಣನನ್ನೇ ಎದುರಿಸಿದ ಜಟಾಯು; ಈ ಅದ್ಭುತ ಪ್ರವಾಸಿ ತಾಣದ ಬಗ್ಗೆ ನಿಮಗೆ ಗೊತ್ತೇ?

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.