nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?

    November 8, 2026

    ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು

    November 8, 2026
    Facebook Twitter Instagram
    ಟ್ರೆಂಡಿಂಗ್
    • ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!
    • ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?
    • ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು
    • ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ
    • ಮಹಿಳೆಯರ ಕಾರ್ಯ ಸಮಾಜಕ್ಕೆ ಮಾದರಿ: ಶಾಸಕ ಸಿ.ಬಿ.ಸುರೇಶ್‌ ಬಾಬು
    • ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ
    • ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ
    • ಎಸ್.ಎಸ್. ವೃತ್ತದಲ್ಲಿ ಎಲ್‌ ಇಡಿ ಡಿಸ್‌ ಪ್ಲೇ ಕಾಮಗಾರಿ ವೀಕ್ಷಣೆ |  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಡಾ.ಜಿ.ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು
    ತುಮಕೂರು November 8, 2026

    ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು

    By Ganesh TumkuruNovember 8, 2026No Comments2 Mins Read
    aidso

    ತುಮಕೂರು: ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಕಾರ್ಪೊರೇಟ್ ಕಂಪನಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ AIDSO ತುಮಕೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಟೌನ್ ಹಾಲ್ ವೃತ್ತದ ಹತ್ತಿರ ಪ್ರತಿಭಟನೆ ನಡೆಸಲಾಯಿತು.

    ಈ ಸಂದರ್ಭದಲ್ಲಿ AIDSO ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಜನತೆಯ ತೀವ್ರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಕೆಪಿಎಸ್-ಮ್ಯಾಗ್ನೆಟ್ ನೀತಿಯನ್ನ ಜಾರಿಗೆ ತರುತ್ತಿದೆ.  ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ (ಎಡಿಬಿ) ಸಾಲದ ಒಪ್ಪಂದದ ಮೂಲಕ ರಾಜ್ಯದ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಹಾಗೂ ಖಾಸಗಿ ಶಾಲೆಗಳಿಗೆ ಹಸ್ತಾಂತರಿಸಲು ನವೆಂಬರ್ 4ರಂದು ವಿಧಾನಸೌಧದಲ್ಲಿ ಸಭೆ ನಡೆಸಿದೆ. ಮೊದಲ ಹಂತದಲ್ಲಿ 2000 ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಈ ಕಡು ಜನ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು.

    ಮುಂದುವರೆದು ಮಾತನಾಡಿದವರು ರಾಜ್ಯದಲ್ಲಿ ಒಂದೆ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿದ ಶಿಕ್ಷಣ ಸಚಿವರು ಈ ನಾಡಿನ ಜನತೆಗೆ ದ್ರೋಹ ಎಸಗಿದ್ದಾರೆ. ಸರ್ಕಾರದ ಈ ಕರಾಳ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜನ ಚಳುವಳಿ ಬೆಳೆಸುವುದಾಗಿ ಎಚ್ಚರಿಕೆ ನೀಡಿದರು.

    ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷರಾದ ರತ್ನಮ್ಮ ಮಾತನಾಡುತ್ತ ಇಂದು ಎಲ್ಲಾ ಹಳ್ಳಿಗಳಲ್ಲೂ ಸಹ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡುತ್ತಾ ಸರ್ಕಾರದ ಈ ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು ಸಹ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡಮಕ್ಕಳ ಭವಿಷ್ಯವನ್ನು ಬೀದಿಗೆ ತಳ್ಳುತ್ತಿದೆ, ಈ ಯೋಜನೆ ಜಾರಿಗೆ ಬಂದರೆ ಲಕ್ಷಾಂತರ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ. ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ ಇಂತಹ ಸಂದರ್ಭದಲ್ಲಿ ಹತ್ತಾರು ಮೈಲಿಗಳು ದೂರದ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳಿಸುವುದು ಅಸಾಧ್ಯವಾಗಿದೆ. ಸರ್ಕಾರ ತನ್ನ ನಡೆಯನ್ನು ಬದಲಾಯಿಸಬೇಕು ಎಂದು ಎಚ್ಚರಿಕೆ ನೀಡಿದರು,

    ಈ ಸಂದರ್ಭದಲ್ಲಿ AIDSO ಪದಾಧಿಕಾರಿಗಳಾದ ಭರತ್, ಸೈಯದ್, ಮಹಾಂತೇಶ್, ಅಪ್ಪಾಜಿ, ಬಸವರಾಜ್ ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ಕೆ .ಎನ್. ರಾಜಣ್ಣ ವಿರುದ್ಧ ಬಾಲಕೃಷ್ಣರ ಲಘು ಹೇಳಿಕೆ ನಿಲ್ಲಲಿ: ಆದಿನಾರಾಯಣ ರೆಡ್ಡಿ

    November 8, 2026

    ಬೆದರಿಕೆ ಕರೆ: ಹೋರಾಟಗಾರರು ಪೊಲೀಸ್ ರಕ್ಷಣೆಗೆ ಮೊರೆ |   ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ

    November 8, 2026

    ಎಸ್.ಎಸ್. ವೃತ್ತದಲ್ಲಿ ಎಲ್‌ ಇಡಿ ಡಿಸ್‌ ಪ್ಲೇ ಕಾಮಗಾರಿ ವೀಕ್ಷಣೆ |  ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದ ಡಾ.ಜಿ.ಪರಮೇಶ್ವರ್

    November 8, 2026

    Leave A Reply Cancel Reply

    Our Picks

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ಜಿಯೋ ಗ್ರಾಹಕರಿಗೆ ಸಿಹಿಸುದ್ದಿ; ಉಚಿತವಾಗಿ 5 ತಿಂಗಳ ವೈ–ಫೈ, ಒಟಿಟಿ ಸೇವೆ ಪಡೆಯುವುದು ಹೇಗೆ?

    November 7, 2026

     ವಿಶ್ವವಿಖ್ಯಾತ ತಾಜ್ ಮಹಲ್‌ ಗೆ ರಾತ್ರಿ ಲೈಟಿಂಗ್ ವ್ಯವಸ್ಥೆ ಏಕಿಲ್ಲ? ಇದರ ಹಿಂದಿದೆ ಅಚ್ಚರಿಯ ಕಾರಣ!

    November 6, 2026

    ವೈವಿಧ್ಯತೆಯಲ್ಲಿ ಏಕತೆ ಸಾರುವ ದಿನವಿದು; ಅಕ್ಟೋಬರ್ 31ರಂದು ಏಕೆ ರಾಷ್ಟ್ರೀಯ ಏಕತಾ ದಿನ ಆಚರಿಸುತ್ತಾರೆ?

    October 31, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ವಾಯು ಮಾಲಿನ್ಯದಿಂದ ಜಿಡಿಪಿಗೂ ಭಾರಿ ಹೊಡೆತ; ನಿಯಂತ್ರಣಕ್ಕೆ ಎಫ್‌ ಐಸಿಸಿಐನಿಂದ 10 ಸೂತ್ರಗಳ ಶಿಫಾರಸು ಇಲ್ಲಿದೆ!

    November 8, 2026

    ನವದೆಹಲಿ: ಭಾರತದಲ್ಲಿ ವಾಯು ಮಾಲಿನ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ…

    ಹುಟ್ಟುಹಬ್ಬದಂದು ಕೇಕ್ ಕತ್ತರಿಸುವ ಸಂಪ್ರದಾಯ ಶುರುವಾಗಿದ್ದು ಹೇಗೆ?

    November 8, 2026

    ಕೆಪಿಎಸ್ ಮ್ಯಾಗ್ನೆಟ್ ಯೋಜನೆ ನಾಡಿನ ಜನತೆಗೆ ಎಸಗಿದ ದ್ರೋಹ: AIDSO ತುಮಕೂರು

    November 8, 2026

    ಬರದ ಸಂಕಷ್ಟದಲ್ಲಿ ಬಡವರ ಕೈಹಿಡಿದ ‘ವಿಬಿ-ಜಿ ರಾಮ್ ಜಿ’ ಯೋಜನೆ: ಗುಳೆ ತಪ್ಪಿಸಿ ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿದ ಆಸರೆ

    November 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.